ಪುಟ:ಅಶೋಕ.djvu/೧೨೨

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಅಶೋಕ ಅಥವಾ ಪ್ರಿಯದರ್ಶಿ. ೧೦೬ Fovvvvvvvvv -vv/1 - ಚಾರುಮತಿಯೆಂಬ* ಮಗಳು ಮತ್ತು ಮಹಾಸ್ಥವಿರ ಉಪಗುಪ್ತ ಇವರೊಡನೆ ಅಶೋಕನು ಗಂಗೆಯನ್ನು ದಾಟಿ ವೈಶಾಲೀನಗರಕ್ಕೆ ಬಂದನು. ವೈಶಾಲಿಯ ಹಾಳಾದ ದೇವಾಲಯ ಮೊದಲಾದವುಗಳನ್ನು ನೋಡಿ ಆ ನಗರದ ಪೂರ್ವವೈಭವವು ಆತನ ನೆನ ಪಿಗೆ ಬಂದಿತು. ವೈಶಾಲೀಪ್ರದೇಶದಲ್ಲಿ ಬಿಚ್ಚಿ ಎಂಬ ಜಾತಿಯು ವಾಸಮಾಡುತ್ತಿತ್ತು, ವೈಶಾಲಿಯು ಆ ಜಾತಿಯ ರಾಜಧಾನಿಯು, ಮಗಧ ಮತ್ತು ನೇಪಾಳ ಇವುಗಳ ರಾಜಿ ರಿಗೂ, ಲಿಚ್ಛವಿ ರಾಜರಿಗೂ ಎಷ್ಟೋ ಸಾರೆ ವಿವಾಹಸಂಬಂಧವಾಗಿತ್ತು, ಈ ಸ್ಥಳವು ಬುದ್ದದೇವನ ಪಾದಸ್ಪರ್ಶದಿಂದಲೂ, ಉಪದೇಶದಿಂದಲೂ ಒಂದು ಸಮಯದಲ್ಲಿ ಪುಣ್ಯ ತೀರ್ಥವಾಯಿತು. ಈ ಸ್ಥಾನದಲ್ಲಿಯೇ ವೃಜಿಜಾತಿಯ ಪ್ರಜಾಸತ್ತಾಕ ರಾಜ್ಯ ಪದ್ಧತಿಯು ಪ್ರಚಲಿತವಾಗಿತ್ತು, ಮಗಧರಾಜನಾದ ಅಜಾತಶತ್ರುವು ವೃಜೆಜಾತಿಯನ್ನು ಸೋಲಿಸಿ ದರೂ ಪ್ರಜಾಸತ್ತಾಕ ಪದ್ದತಿಯನ್ನು ಮುರಿಯುವದಾಗಲಿಲ್ಲ. ಈ ವೈಶಾಲೀನಗರಿಯಲ್ಲಿ ಇನ್ನೂ ಆ ಪದ್ಧತಿಯ ನಿದರ್ಶನವು ಅಶೋಕನಿಗೆ ಕಂಡುಬಂದಿತು. ವೈಶಾಲಿಯ ಪ್ರಸಿ ದ್ದವಾದ ವಾಲುಕಾರಾಮದಲ್ಲಿ ೨ನೆಯ ಬೌದ್ಧ ಧರ್ಮ ಮಹಾಸಭೆಯು ನೆರೆದಿತ್ತು. ಈಗಲೂ ಅಲ್ಲಿ ಬೌದ್ಧ ಭಿಕ್ಷುಗಳು ವಾಸವಾಗಿದ್ದರು. ಭಾಗೀರಥಿಯ ಉತ್ತರಕ್ಕೆ ೧೦ ಕ್ರೋಶಗಳ ಮೇಲೆ ಗಂಡಕೀನದಿಯ ಪೂರ್ವ ಭಾಗದಲ್ಲಿ ವೈಶಾಲೀ ನಗರಿಯಿತ್ತೆಂದು ಐತಿಹಾಸಿಕರು ಹೇಳುವರು. ವೈಶಾಲಿಯಲ್ಲಿರುವ ಹಾಳಾದ ಕೋಟೆಗೆ ( ರಾಜಾವಿಶಾಲಕಾಗಡ ” ಎಂದು ಇನ್ನೂ ಅನ್ನು ವರು, ವಿಶಲ ಎಂಬ ರಾಜನಿಂದ ಅದಕ್ಕೆ ವೈಶಾಲಿ ಎಂದು ಹೆಸರು ಬಂತೆಂದು ಪ್ರವಾದವುಂಟು, ಅಲ್ಲಿಯ ಅರಮನೆಯು ೪೦೦ ಅಡಿ ವಿಸ್ತಾರವಾಗಿತ್ತು. ಹಳೆಯ ಕೋಟೆಯು ೪೬೦೦ ಅಡಿ ವಿಸ್ತಾರವಾಗಿತ್ತು, ಈಗಿನ ದಿಗ್ವಾರಾದಿಂದ ಈಶಾನ್ಯಕ್ಕೆ ೨೩ ಮೈಲುಗಳ ಮೇಲೆ ವೇಶಾದ ಗ್ರಾಮವುಂಟು. ಬುದ್ಧದೇವನು ತನ್ನ ಪ್ರಿಯಶಿಷ್ಯನಾದ ಅನಂದನೊಡನೆ ಚಪಲಾ ಸ್ತೂಪವನ್ನು ಕುರಿತು ಹೋಗುತ್ತಿರುವಾಗ ದಾರಿಯಲ್ಲಿ ವಿಶ್ರಾಂತಿಗಾಗಿ ನೆಳಲಿಗೆ ಕುಳಿತು ಶಿಷ್ಯನಿಗೆ “ ಹೇ ಆನಂದ! •ಈ ವೃಷಿಭೂಮಿಯ ವೈಶಾಲೀನಗರಿಯು ಬಹು ಮನೋಹ ರವಾದ ಸೌಂದರ್ಯವುಳ್ಳದ್ದು ” ಎಂದು ಹೇಳಿದನೆಂದು ಪ್ರವಾದವುಂಟು. ಬುದ್ದದೇ

  • ಚಾರುಮತಿ :ು ಹೆಸರು ಕಾಶ್ಮೀರದ ಕಥೆಯಲ್ಲಿ ಮಾತ್ರ ಬರೆಯಲ್ಪಟ್ಟಿದೆ. 8 ಲಿಚ್ಛವಿ ಜಾತಿಯು ವೃಜಿಜಾತಿಯ ಒಂದು ಶಾಖೆಯು.

• ಮಹಾಪರಿನಿರ್ವಾಣ ಸೂತ್ರ.

  • ಶ್ರೀಕಾಂಡ ಶೇಷದಲ್ಲಿ .ಲಿಚ್ಛವಿ, ವೈದೇಹ, ತೀರಭುಕ್ತಿ ಎಂಬಿವು ಪರ್ಯಾಯ ಶಬ್ದಗಳೆಂದು ಹೇಳಿದೆ, ರಾಮಾಯಣದಲ್ಲಿ ಜನಕರಾಜರ್ಷಿಗೆ ವೈದೇಹನೆಂದೂ, ಸೀತಾದೇವಿಗೆ ವೈದೇಹಿಯೆಂದೂ ಹೆಸ ರುಂಟು. ತೀರಭುಕ್ತಿ ಶಬ್ಬದ ವಿಕೃತರೂಪವು ತಿರಹುತ ಎಂಬದು, ಈಗಿನ ಜನಕ ಪುರವು ಪ್ರಾಚೀನ ಮಿಥಿ ಲೆಯು ರಾಜಧಾನಿಯಾಗಿತ್ತೆಂಬದನ್ನು ಎಲ್ಲರೂ ಒಸ್ಮವರು,