ಪುಟ:ಅಶೋಕ.djvu/೧೨೩

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೧೦೮ ಅಶೋಕ ಅಥವಾ ಪ್ರಿಯದರ್ಶಿ, vvvvvvvvvvvvvvvvvv vvvvvvvvvvvvv ವನ ಕಾಲದಲ್ಲಿಯೂ, ಆತನ ಪರಿನಿರ್ವಾಣವಾದ ಎಷ್ಟೋ ಶತಮಾನಗಳ ವರೆಗೂ ವೈಶಾಲಿಯ ಜನರಿಗೆ ಲಿಚ್ಛವಿ ಎಂಬ ಹೆಸರು ಇತ್ತು. ಪಟ್ಟಣದ ಸಮೀಪದಲ್ಲಿರುವ ಪಾವಾಗ್ರಾಮದಲ್ಲಿ ಜೈನಧರ್ಮಸ್ಥಾಪಕನೂ, ಕೊನೆಯ ತೀರ್ಥಂಕರನೂ ಆದ ಮಹಾವೀರ ಸ್ವಾಮಿಯು ಜನ್ನ ಹೊಂದಿದನು. ಈ ವೈಶಾಲಿಗೆ ಹೊಂದಿದ ಮಹಾವನವು ಉತ್ತರದಲ್ಲಿ ಹಿಮಾಚಲದ ಪಾದದೇಶದ ವರೆಗೆ ಹಬ್ಬಿರು ವದು. ಈಮಹಾವನದಲ್ಲಿಯೇ ಬುದ್ದ ಶಿಷ್ಯರು ದೊಡ್ಡದೊಂದು ವಿಹಾರವನ್ನು ಕಟ್ಟಿಸಿ ದ್ದರು, ಅದೇ ವಿಹಾರದಲ್ಲಿ ಬುದ್ಧನು ಅವರಿಗೆ ಹಲವು ಸಾರೆ ಧರ್ಮೋಪದೇಶ ಮಾಡಿ ದ್ದನು. ವೈಶಾಲೀ ನಗರಕ್ಕೆ ೩ ಸುತ್ತು ಗೋಡೆಯಿತ್ತು. ಒಂದೊಂದು ಸುತ್ತಿನ ನಡುವೆ ಒಂದೊಂದು ಗೋವೂಥದ ಅಂತರವಿತ್ತು. ವೈಶಾಲಿಯ ಪ್ರಜಾಸತ್ತಾಕ ರಾಜ್ಯ ಪದ್ಧತಿಯಲ್ಲಿ ೭೭೦೭ ಜನನಾಯಕರು *ಒಟ್ಟುಗೂಡಿ ರಾಜಕಾರ್ಯವನ್ನು ಸಾಗಿಸುತ್ತಿದ್ದರು. ತೀರ್ಥ ಯಾತ್ರೆಯ ಕಾಲದಲ್ಲಿ ಅಶೋಕನು ಇಲ್ಲಿ ನಿಲ್ಲಿಸಿದ ೫ಕಲ್ಲಿನ ಕಂಬಗಳು ಆತನು ಇಲ್ಲಿ ಬಂದಿದ್ದನೆಂಬದಕ್ಕೆ ಸಾಕ್ಷಿಯಾಗಿವೆ. ಇಲ್ಲಿಂದ ಪೂರ್ವಕ್ಕೂ ಪಶ್ಚಿಮಕ್ಕೂ ಎರಡು ದಾರಿ ಗಳು ಹೋಗಿವೆ. ಅಶೋಕನು ಪೂರ್ವದ ದಾರಿಯಿಂದ ರಾಮಗ್ರಾಮವನ್ನು ಕುರಿತು ಹೋಗಿದ್ದನು. ರಾಮಗ್ರಾಮದ ಪೂರ್ವಕ್ಕೆ ಒಂದು ಇಟ್ಟಿಗೆಯ ಸ್ತೂಪವು ಕಾಣುವದು, ಬುದ್ದ ದೇವನು ನಿರ್ವಾಣ ಹೊಂದಿದಾಗ ಒಬ್ಬ ಅರಸನು ಈ ಸ್ಥಳದಲ್ಲಿ ಬುದ್ದದೇವನ ಶರೀರ ಧಾತುಗಳನ್ನು ಹುಗಿದು ಒಂದು ಸೂಪವನ್ನು ಕಟ್ಟಿಸಿದ್ದನು. ಅದರ ಎದುರಿಗೆ ಒಂದು ಜಲಾಶಯವಿರುವದು. ಬುದ್ದದೇವನ ಶರೀರ ಧಾತುಗಳು ಇಲ್ಲಿ ಇಡಲ್ಪಟ್ಟಿವೆಯೆಂದು ತಿಳಿದು ಅಶೋಕನು ಅವುಗಳನ್ನು ಹೊರತೆಗೆಯುವ ಆಲೋಚನೆ ಮಾಡಿದನು. ಈ ಕಾಲ ದಲ್ಲಿ ಒಂದು ಮಹಾನಾಗವು ಬ್ರಾಹ್ಮಣರೂಪವನ್ನು ಹೊಂದಿ ಅಶೋಕನ ಬಳಿಗೆ ಬಂದು ಮಹಾರಾಜರೇ, ತಾವು ಬುದ್ಧದೇವನಲ್ಲಿ ಅತ್ಯಂತ ಭಕ್ತಿಯುಳ್ಳವರು; ಆತನ ಧರ್ಮವನ್ನು ಹಬ್ಬಿ ಸುವದಕ್ಕಾಗಿ ಹಲವು ಉಪಾಯಗಳನ್ನು ಮಾಡಿ ತಾವು ಬಹಳ ಪುಣ್ಯವನ್ನು ಸಂಪಾ ದಿಸಿರುವಿರಿ. ತಾವು ವಾಹನದಿಂದಿಳಿದು ನಮ್ಮ ಮನೆಗೆ ಬರಬೇಕೆಂದು ಬಹಳ ಅಪೇಕ್ಷೆ ಯುಂಟು ಎಂದು ಅಂದಿತು. ಆಗ ಅಶೋಕನು ಇಲ್ಲಿಂದ ತಮ್ಮ ಆಶ್ರಮವು ಎಷ್ಟು ದೂರ ದಲ್ಲಿದೆ ಎಂದು ಕೇಳಿದನು. ಆಗ ಆ ಬ್ರಾಹ್ಮಣನು ನಾನು ಈ ಜಲಾಶಯದ ಸ್ವಾಮಿಯಾದ t ಇದೇ ಸುಪ್ರಸಿದ್ಧ ಮಹಾವನವಿಹಾರವು. 8 ಗೋವೂಥ ಎಂಬದಕ್ಕೆ ಪಾಲಿಯಲ್ಲಿ ಗೋವೂತಂ, ಸಂಸ್ಕೃತದಲ್ಲಿ ಗವೂ ತಿ ಎಂಬ ರೂಪಗಳು. childers ಸಾಹೇಬರು ತಮ್ಮ ಪಾಲಿ ಕೋಶದಲ್ಲಿ ಯೋಜನದ ೪ನೇಯ ಭಾಗಕ್ಕೆ ಗೋವೂತಂ ಎಂದು ಹೇಳಿರುವರು, ಶಬ್ಬಕಲ್ಪ ದ್ರುಮದಲ್ಲಿ ೨ ಕೋಶಗಳಿಗೆ ಒ೦ದು ಗತಿಯೆಂದು ಹೇಳಿದೆ,

  • Rhys Davids Buddhist India,