ಪುಟ:ಅಶೋಕ.djvu/೧೩೪

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಅಶೋಕ ಅಥವಾ ಪ್ರಿಯದರ್ಶಿ ರ್h MANAMA೦//೦೧/ \r\n\\ \\ /\ /\/s /\r h/*/\ \ \/*/ ವಿನಯ, ಔದಾರ್ಯ, ದಯೆ ಮೊದಲಾದ ನೀತಿತತ್ವಗಳ ಮೂಲಸೂತ್ರಗಳು ವಿವರಿಸಲ್ಪ ಟ್ವಿವೆ, ಮೇಲೆ ಹೇಳಿದ ಶಾಸನಗಳನ್ನೋದಿದರೆ ಅಶೋಕನು ರಾಜನೀತಿ, ಧರ್ಮನೀತಿ ಇವುಗಳಿಗೆ ತಳಕು ಹಾಕಿ ಹೊಸ ಧರ್ಮ ರಾಜ್ಯವನ್ನು ಸ್ಥಾಪಿಸುವದರಲ್ಲಿ ತೊಡಗಿದ್ದ ನೆಂದು ತೋರುವದು, ಧರ್ಮ ಮತ್ತು ನೀತಿ ಇವುಗಳ ಜೋಡಣೆಯು ಭರತಖಂಡದಲ್ಲಿ ಪ್ರಾಚೀನಕಾಲದಿಂದ ನಡೆದು ಬಂದಿತ್ತು. ಅದೇ ಬೌದ್ದ ಪ್ರಭಾವದಿಂದ ಬೆಳೆದು ಅಶೋ ಕನ ಅನುಶಾಸನಗಳ ರೂಪದಿಂದ ಇತಿಹಾಸದಲ್ಲಿ ಕಂಡುಬರುವದು, ಇದು ಎಲ್ಲ ಜಾತಿ ಗಳ ಎಲ್ಲ ಧರ್ಮಗಳ ಸರ್ವನಾಧಾರಣ ಸಂಪತ್ತಿಯು, ಯಾಗ, ಯಜ್ಞ, ವ್ರತ, ನಿಯಮ, ಉಪವಾನಾದಿಗಳು ಈ ಧರ್ಮವಿಧಿಯ ಅಂಗವಲ್ಲ, ಯಾವದರಿಂದ ಜೀವವು ಎಲ್ಲ ತರದ ಸದ್ಗುಣಗಳನ್ನು ಹೊಂದಬಹುದೋ, ಜ್ಞಾನಧರ್ಮಗಳಲ್ಲಿ ಮೇಲನ್ನು ಹೊಂದಬಹದೋ, ಯಾವದರಿಂದ ಮನುಷ್ಯನು ದೇವತೆಯಾಗಬಲ್ಲನೋ, ಐಹಿಕಪಾರಿಕ ಮಂಗಲವನ್ನು ದೊರಕಿಸಲು ಸಮರ್ಥನಾಗುವನೋ ಅದೇ ಧರ್ಮವಿಧಿಯು ಅಶೋಕನು ಈ ನೀತಿ ಸೂತ್ರಗಳನ್ನು ಪ್ರಚಾರಪಡಿಸಿ ಅಷ್ಟ್ರಕ್ಕೆ ಸುಮ್ಮನಿರಲಿಲ್ಲ. ತಾನು ತನ್ನ ಜೀವನಕ್ರಮದಲ್ಲಿ ಅವುಗಳನ್ನು ಪಾಲಿಸುವದಕ್ಕೂ, ಜನಸಾಮಾನ್ಯವು ತಮ್ಮ ತಮ್ಮ ಜೀವನದಲ್ಲಿ ಈ ಸದ್ದು ಣಗಳನ್ನು ಪಾಲಿಸುವದಕ್ಕೂ ವ್ಯವಸ್ಥೆ ಮಾಡಿದ್ದನು. ಪ್ರಾಣಿಹಿಂನಾನಿವಾರಣ, ಮನುಷ್ಯ ಚಿಕಿತ್ಸಾಲಯ, ಪಶುಚಿಕಿತ್ಸಾಲಯ, ಧರ್ಮೋಪದೇಶ ಇವುಗಳ ಶಾಖೆಗಳನ್ನು ರಾಜ್ಯದಲ್ಲಿ ಸ್ಥಾಪಿಸಿದ್ದನು.

  • ಸಮಗ್ರ ಪ್ರಾಣಿಸಮೂಹದ ಹಿತವನ್ನು ಮಾಡುವದೇ ಅಶೋಕನ ಮೂಲ ಮಂತ್ರವು, ಇದೇ ನಿಜವಾದ ಬೌದ್ಧ ತನವು, ಧರ್ಮವಿಧಿಗಳನ್ನು ಪಾಲಿಸುವದರಿಂದ ಮನು ಷ್ಯನಿಗೆ ಇಹಪರಗಳಲ್ಲಿ ಸುಖವಾಗುವದೆಂದು ರಾಜ್ಯದಲ್ಲೆಲ್ಲ ಪ್ರಕಟಿಸಲ್ಪಟ್ಟಿತ್ತು. ಯುಕ್ತಿ, ತರ್ಕ, ಇಲ್ಲವೆ ದಾರ್ಶನಿಕಮತ ಇವುಗಳಿಂದ ಧರ್ಮವಿಧಿಯ ಯಾವ ಸಿದ್ದಾಂತವೂ ಸ್ಥಾಪಿಸಲ್ಪಟ್ಟಿದ್ದಿಲ್ಲ. ಮನುಷ್ಯನಿಗೆ ಯಾವುದು ಅವಶ್ಯ ಕರ್ತವ್ಯವೋ, ನಿಜವಾಗಿ ಕಲ್ಯಾ ಣಕರವೋ ಅದನ್ನೆ ಸಹಜ ಸುಲಭಭಾಷೆಯಿಂದ ಪ್ರಕಟಿಸಿದನು. ಆತನು ಪ್ರಚಾರಗೊಳಿ ಸಿದ ಧರ್ಮವಿಧಿಗಳನ್ನೋದಿದರೆ ಬಹಳ ಆಶ್ಚರ್ಯವಾಗುವದು. ಭಾವರಾ ಅನುಶಾಸನವ ನೈದಿದರೆ ಅಶೋಕನು ಯಾವ ಅಮೃತಮಯ ಭಾಂಡಾರದಿಂದ ರತ್ನಗಳನ್ನು ತೆಗೆದು ಜಗತ್ತಿಗೆ ದಾನಮಾಡಿದನೋ ಎಂದು ಅನಿಸುವದು, ಬೌದ್ಧಧರ್ಮವು ಆತನ ಹೃದಯದಲ್ಲಿ ಯ ಆಧ್ಯಾತ್ಮಿಕ ಝರಿಯು, ಬುದ್ದದೇವನ ಉಪದೇಶಗಳೇ ಅಶೋಕನ ಮೂಲಮಂತ್ರ ವ. ಆದದರಿಂದಲೇ ಆತನು ನಿಜವಾದ ಭಕ್ತಿವಿಶ್ವಾಸಗಳಿಂದ ತನ್ನ ಅನುಶಾಸನಗಳಲ್ಲಿ ಬೌದ್ದ ವಿಧಿಗಳನ್ನು ಕೊರೆಯಿಸಿದನು. ಈ ಧರ್ಮವಿಧಿಗಳು ಅಶೋಕನು ತಾನೇ ಕಂಡು ಹಿಡಿದವುಗಳಾಗಿದ್ದರೆ ಅವನು ನಾನಾ ಯುಕ್ತಿ ತರ್ಕಗಳಿಂದ ಅವುಗಳನ್ನು ಸಿದ್ಧ ಪಡಿಸಿ ಬರೆಯಿಸುವ ಪ್ರಯತ್ನ ಮಾಡುತ್ತಿದ್ದನು. ಆದರೆ ಗೌತಮಬುದ್ಧನು ತನ್ನ ಕಠೋರವಾದ ಸಾಧನದಿಂದ ಯಾವ ಮಹಾರ್ವಾಣಿಯನ್ನು ಪ್ರಕಟಿಸಿದನೋ ಅದು ಸ್ವತಃ ಸಿದ್ಧ ಸತ್ಯದ