ಪುಟ:ಅಶೋಕ.djvu/೧೩೮

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಅಶೋಕ ಅಥವಾ ಪ್ರಿಯದರ್ಶಿ, ೧೨೩ •NJ,.. . . . . - * \, + # 1 1 1 1 1 - * * * * * * * * • • • 1/ \ +4 v /ws4, ಹುಟ್ಟಿದವೆಂದೂ ಅವುಗಳಿಂದೇ ಭರತಖಂಡದ ಬೇರೆ ಬೇರೆ ಅಕ್ಷರಗಳು ಹುಟ್ಟಿರುತ್ತ ವೆಂದೂ ಹೇಳುವರು, ಭಾಷಾತಜ್ಞರೂ ಐತಿಹಾಸಿಕರೂ ಈ ವಿಷಯವನ್ನು ಬಹಳ ಮಟ್ಟಿಗೆ ಆಲೋಚಿಸಿರುವರು. ಭರತಖಂಡದ ವರ್ಣಮಾಲೆಯು ಈ ದೇಶದಲ್ಲಿಯೇ ಉತ್ಪನ್ನ ವಾಯಿತೇ, ಇಲ್ಲವೆ ಪರದೇಶದಿಂದ ತರಲ್ಪಟ್ಟಿತೇ ಎಂಬ ವಿಷಯದಲ್ಲಿ ಯುರೋ ಸೀಯ ಪಂಡಿತರು ಬಹು ದಿವಸಗಳಿಂದ ಚರ್ಚೆಯನ್ನು ನಡಿಸುತ್ತ ಬಂದಿರುವರು. ಆದರೂ ಆ ವಿಷಯದಲ್ಲಿ ಆ ಪಂಡಿತರ ಐಕಮತ್ಯವಾಗಲಿಲ್ಲ. ಟಮಾಸ್, ಗೋಲ್ಉಷ್ಟು ಕಾರ, ರಾಜೇಂದ್ರ ಲಾಲಮಿತ್ರ, ಲ್ಯಾಸೆನ್ ಮೊದಲಾದ ಪಂಡಿತರು ಭಾರತವರ್ಣಮಾಲೆಯು ಭಾರತಭೂಮಿಯಲ್ಲಿ ಉತ್ಪನ್ನವಾಯಿತೆಂದು ಹೇಳುವರು. ಕನಿಂಗಹಮ್ * ಸಾಹೇ ಬರು ಅಶೋಕ ಅಕ್ಷರಗಳು ಪ್ರಾಚೀನಕಾಲದ ಭರತಖಂಡದ ವಸ್ತು ಚಿತ್ರಗಳಿಂದ ಉತ್ಪ ವಾದವೆಂದು ಹೇಳುವರು, ಸುಪ್ರಸಿದ್ದ ಪಂಡಿತರಾದ ಪ್ರೊಫೆಸರ್ ಡಸನ್ { (Da Ivson) ಎಂಬವರು ಕೂಡ ಭಾರತೀಯ ವರ್ಣಮಾಲೆಯು ಭರತಖಂಡದಲ್ಲಿಯೇ ಉತ್ತ ನವಾಯಿತೆಂದು ವಿವೇಚಿಸಿರುವರು. ಇದಕ್ಕೆ ವಿರುದ್ಧವಾಗಿ, ಪ್ರಸಿದ್ದರಾದ ಅನೇಕ ಭಾಷಾತತ್ವಜ್ಞರು ಭಾರತೀಯ ವರ್ಣಮಾಲೆಯು ಪರದೇಶದಿಂದ ಬಂದಿತೆಂದು ಪ್ರತಿ ವಾದಿಸಿರುತ್ತಾರೆ. ಜೇಮ್ಪ ಪ್ರಿನ್ಸೆಪ್, ಡಾಕ್ಟರ ಮುಲ್ಲರ, ಇವರು ಭಾರತೀಯ ಅಕ್ಷರಗಳು ಗ್ರೀಕ ಅಕ್ಷರಗಳಿಂದ ಹುಟ್ಟಿರುವವೆಂದು ಹೇಳುವರು, ಕೆಲವರು ಚೀನ ದೇಶದ ವಸ್ತು ಚಿತ್ರಗಳಿಂದ ಉತ್ಪನ್ನ ವಾದವೆಂದು ಹೇಳುವರು, ಪಾರಸ್ಯ ಅಕ್ಷರಗಳಿಂದ ಅಶೋಕ ಅಕ್ಷ ರಗಳು ಉತ್ಪನ್ನ ವಾದವೆಂದು ಬಾರ್ಳೇಲನು ಹೇಳುವನು. ಬೇಬಾರ ಮತ್ತು ಟೇಲಾರ ಎಂಬವರು ಭಾರತವರ್ಣಮಾಲೆಯು ಯೆಮೆನ್ ( Yerneln )ದಿಂದ ತರಲ್ಪಟ್ಟಿತೆಂದು ಹೇಳುವರು. ಬೆನ್ಫಿ ( Benfey ) ಎಂಬವನು ಫಿನಿಸಿಯಾನರಿಂದ ಪ್ರಾಪ್ತವಾಯಿತೆಂದು ಹೇಳುವನು. ಸರ್ ಉಯಿಲಿಯಮ್ ಜೋನ್ಸ, ಪ್ರೊಫೆಸರ್ ಕಪ್ ಲೆಪ್ಪಿನ್, ಡಾಕ್ಟರ್ ಸ್ಟಿಫನ್ಸನ್, ಕ್ರಿಸಿಲಾರ್, ಕಾರನ್ ಬುದ್ಧಾರ್‌, ಮೊದಲಾದವರು ಕೊನೆಗೆ ಹೇಳಿದ ಮತ ವನ್ನು ಸಮರ್ಥಿಸುವರು. ಮೇಲಿನ ಪ್ರಶ್ನವನ್ನು ಚನ್ನಾಗಿ ವಿಚಾರಿಸುವದಕ್ಕೆ ಮುಂಚೆ ಅಕ್ಷರಗಳು ಹೇಗೆ ಹುಟ್ಟಿದವು, ಮತ್ತು ಯಾವ ದೇಶದಲ್ಲಿ ಎಲ್ಲಕ್ಕೂ ಮುಂಚೆ ಹುಟ್ಟಿದವು ಎಂಬ ವಿಷ ಯವನ್ನು ಸಂಕ್ಷೇಪವಾಗಿ ವಿವೇಚಿಸುವದು ಅವಶ್ಯವಾಗಿರುವದು, ಕೆಲವರು ಅಕ್ಷರ ಸೃಷ್ಟಿಗೆ ಮುಂಚೆ ಮನುಷ್ಯಜಾತಿಯು ಕೇವಲ ಗ್ರಾಮ್ಮಸ್ಸಿತಿಯಲ್ಲಿತ್ತೆಂದು ಹೇಳು ವರು. ಅದು ನಿಜವಲ್ಲ. ವರ್ಣಮಾಲೆಯು ಪ್ರಚಾರದಲ್ಲಿ ಬರುವದಕ್ಕೆ ಮುಂಚೆ ಬಹು

  • Corpus Inscriptionum Indicruin vol [..
  • The peculiarities of the Indiau Alphabets demonstrate its iudchendence of all foreign-originų