ಪುಟ:ಅಶೋಕ.djvu/೧೪೯

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಅಶೋಕ ಅಥವಾ ಪ್ರಿಯದರ್ಶಿ

  • *-* * 1 - -P, " ," - -

ಪಟ್ಟಿದ್ದವು. ಬಿಂದುಸಾರರಾಜನ ಆಳಿಕೆಯ ಕಾಲದಲ್ಲಿ ಈ ರಾಜ್ಯದಲ್ಲಿ ಸ್ವಲ್ಪವೂ ಕಡಿ ಮೆಯಾಗಲಿಲ್ಲ. ಅಶೋಕನು ಸಿಂಹಾಸನವೇರಿದಾಗ ಉತ್ತರದಲ್ಲಿ ಕಾಶ್ಮೀರ, ಸೋಯಾ ಟ ಪರ್ವತ ಪ್ರದೇಶ, ಹಿಮಾಲಯ ಪ್ರದೇಶಗಳು, ಪಶ್ಚಿಮದಲ್ಲಿ ಇಸುಸಜಾಯಿ ಹಿಂದು ಕುಶ, ಅಫಘಾಣಿಸ್ಥಾನ ಬೆಲೂಚಿಸ್ಥಾನ, ಸಿಂಧು ದೇಶಗಳೂ ದಕ್ಷಿಣದಲ್ಲಿ ೩-೪ ಸಣ್ಣ ಸ್ವತಂತ್ರ ರಾಜ್ಯಗಳನ್ನು ಬಿಟ್ಟು ಉಳಿದ ಎಲ್ಲ ಪ್ರದೇಶವೂ ಮಗಧ ಸಾಮ್ರಾಜ್ಯಕ್ಕೆ ಸೇರಿ ದ್ದವು, ಬ್ರಹ್ಮ ದೇಶವನ್ನು ಬಿಟ್ಟು ಈಗಿನ ಬ್ರಿಟಿಶ ಹಿಂದುಸ್ತಾನಕ್ಕಿಂತ ಅಶೋಕಸಾಮ್ರಾ ಜ್ಯವು ಹೆಚ್ಚು ವಿಸ್ತಾರವಾಗಿತ್ತು. ಕೇವಲ ಅನುಮಾನದಿಂದ ಅಶೋಕ ಸಾಮ್ರಾ ಜ್ಯದ ಈ ಮೇರೆಯು ಗೊತ್ತು ಮಾಡಲ್ಪಟ್ಟಿಲ್ಲ. ಶಿಲಾಲಿಪಿಗಳು, ಹಲವು ಪ್ರದೇಶಗಳಲ್ಲಿ ಬಿದ್ದಿರುವ ಸ್ತಂಭಲಿಪಿಗಳು, ಮತ್ತು ಪ್ರಾಚೀನ ಪರದೇಶದ ಪ್ರವಾಸಿಗಳು ಬರೆದಿಟ್ಟ ಲೇಖಗಳು ಇವುಗಳನ್ನೆಲ್ಲ ನೋಡಿದರೆ ಈ ಮಾತು ಸಿದ್ಧವಾಗುವದು. ಕ್ರಿ. ಪೂ. ೩೦೫ ರಲ್ಲಿ ಸೆಲ್ಯೂಕಸ ನಿಕೇತರನು ಚಂದ್ರಗುಪ್ತ ಮಹಾರಾಜನೊ ಡನೆ ಒಪ್ಪಂದ ಮಾಡಿಕೊಂಡಿದ್ದನು. ಈ ಒಪ್ಪಂದದ ಮೇರೆಗೆ ಆರಿಯಾ, ಆರಾಕೋ ಸಿಯಾ, ಗೆದ್‌ರೋಸಿಯಾ ಮತ್ತು ಪಾರಪನಿಸದಾಯಿ ಈ ಪ್ರದೇಶಗಳೆಲ್ಲ ಮೌರ್ಯ ಸಾಮ್ರಾಜ್ಯವೆಂದು ಎಣಿಸಲ್ಪಡುತ್ತಿದ್ದವು, ಈಗಿನ ಅಫಘಾನಿಸ್ಥಾನ ಪ್ರದೇಶದಲ್ಲಿ ಅಶೋಕನು ಕಟ್ಟಿಸಿದ ಹಲವು ಸ್ತೂಪಗಳಿದ್ದವು. ಹುಯನ್‌ತ್ಸಾಂಗನು ತನ್ನ ಪ್ರವಾಸ ವರ್ಣನೆಯಲ್ಲಿ ಈ ಎಲ್ಲ ವೃತ್ತಾಂತವನ್ನು ಬರೆದಿರುವನು. ಕಪಿಶೆಯ ಬಳಿಯಲ್ಲಿ ೧೦೦ ಅಡಿ ಎತ್ತರವಾದ ಪಿಲೂಶಾಸ್ತೂಪ ಮತ್ತು ಜಾಲಾಲಾಬಾದದ ಬಳಿಯಲ್ಲಿರುವ ನಗರ ಹಾರವೆಂಬ ಸ್ಥಳದಲ್ಲಿ ಶಿಲ್ಪ ಕೌಶಲ್ಯವುಳ್ಳ ೩00 ಅಡಿ ಎತ್ತರವಾದ ಒಂದು ಸ್ತಂಭ ಇವು ಅಶೋಕನ ಕೀರ್ತಿ ಚಿಹ್ನಗಳೆಂದು ಇದುವರೆಗೆ ಪ್ರಸಿದ್ಧವಿರುವವು. ಈ ದೊಡ್ಡ `ಸ್ತಂಭದ ಹತ್ತರ ಒಂದು ಸಣ್ಣ ಸ್ಫೂ ಪವಿತ್ತು. ಅದೂ ಅಶೋಕನಿರ್ಮಿತವೆಂದು ಪ್ರವಾದವುಂಟು, ಅರಾಕೊಶಿಯಾ ಪ್ರದೇಶದ ರಾಜಧಾನಿಯಾದ ಗಜನಿಯಲ್ಲಿ ಅಶೋ ಕನು ಸ್ಥಾಪಿಸಿದ ೧೦ ಸ್ತೂಪಗಳನ್ನು ಐತಿಹಾಸಿಕರು ಕಂಡುಹಿಡಿದಿರುವರು. ಅಶೋಕ ನರಪತಿಯು ಕಾಶ್ಮೀರದ ಈಗಿನ ರಾಜಧಾನಿಯಾದ ಶ್ರೀನಗರವು ಸ್ಥಾಪಿತವಾಗುವ ಪೂರ್ವದಲ್ಲಿ ಅಲ್ಲಿಯ ಪ್ರಾಚೀನರಾಜಧಾನಿಯನ್ನು ಸ್ಥಾಪಿಸಿದನೆಂದು ಪ್ರವಾದವುಂಟು. ಇದು ಈಗಿನ ಶ್ರೀನಗರದ ( ಇದರ ಎರಡನೆಯ ಹೆಸರು ಪ್ರವರ ಪುರ) ೨ ಮೈಲು ದಕ್ಷಿಣಕ್ಕೆ ಹಳೆಯ ಪಾಂಡ್ರೆಥಾನ ಎಂಬ ಸ್ಥಾನದಲ್ಲಿ ಇತ್ತು, ಮುಸ ಲ್ಯಾನ ಐತಿಹಾಸಿಕರು ಈಗಿನ ಇಸ್ಲಾಮಾಬಾದ ಮತ್ತೂ ಮಾರತಾಂಡಾ ಎಂಬ ಸ್ಥಳ ಗಳ ಬಳಿಯಲ್ಲಿ ಅದಾರ ( Lidar River ) ನದಿಯ ದಂಡೆಯ ಮೇಲೆ ಈ ರಾಜ ಧಾನಿಯು ಇತ್ತೆಂದು ಹೇಳುವರು. ಈ ಸ್ಥಳವು ಶ್ರೀ ನಗರದಿಂದ ೩೦ ಮೈಲು ದೂರ ದಲ್ಲಿರುವದು, ಕಾಶ್ಮೀರದ ಐತಿಹಾಸಿಕರು ಅಶೋಕನ ಮಗನಾದ ಜಲೂಕನು ಈ