ಪುಟ:ಅಶೋಕ.djvu/೧೫೪

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಅಶೋಕ ಅಥವಾ ಪ್ರಿಯದಶಿ. ೧೩೯ • ' + ++ * *. P + • • • • * * * * * *

  • * * * * * * * * *• •

ಚಂದ್ರಗುಪ್ತ ಮತ್ತು ಅಶೋಕ ಇವರ ರಾಜ್ಯ ಕಾರಭಾರಪದ್ಧತಿಯು ಬಹುಶಃ ಒಂದೇ ರೀತಿಯಿತ್ತು. ಆದರೆ "ಚಂದ್ರಗುಪ್ತನ ರಾಜ್ಯ ಪದ್ಧತಿಯು ರಾಜಿಶಕ್ತಿಯ ಮೇಲೆ ಸ್ಥಾಪಿ ಸಲ್ಪಟ್ಟಿತ್ತು; ಅಶೋಕನ ರಾಜ್ಯ ಪದ್ಧತಿಯು ಧರ್ಮಶಕ್ತಿಯ ಮೇಲೆ ಸ್ಥಾಪಿಸಲ್ಪಟ್ಟಿತ್ತು. ಒಬ್ಬನ ಉದ್ದೇಶವು ರಾಜಶಕ್ತಿಯನ್ನು ಸ್ಥಾಪಿಸುವದರ ಕಡೆಗೆ, ಇನ್ನೊಬ್ಬನ ಉದ್ದೇ ಶವು ಧರ್ಮಶಕ್ತಿಯನ್ನು ಸ್ಥಾಪಿಸುವದರ ಕಡೆಗೆ ಇತ್ತು. ಈ ಉದ್ದೇಶವನ್ನು ಅಶೋ ಕನು ಹೇಗೆ ಕೊನೆಗಾಣಿಸಿದನೆಂಬದನ್ನು ಈ ಅಧ್ಯಾಯದಲ್ಲಿ ಸಂಕ್ಷೇಪವಾಗಿ ವಿವರಿ ಸುವೆವು. ಅಶೋಕನ ಶಿಲಾಲಿಪಿಗಳನ್ನೋದಿದರೆ, ಕಾಮದಾರರಲ್ಲಿ ರಾಜಪ್ರತಿನಿಧಿಯ ತರುವಾಯ ರಾಜೂಕನೆಂಬವನು ಎಲ್ಲಕ್ಕೂ ಹೆಚ್ಚಿನವನೆಂದು ತಿಳಿದುಬರುವದು. ರಾಜೂಕರು ಕಂದಾಯ ಮತ್ತು ರಾಜ್ಯ ಶಾಸನ ಈ ಸಂಬಂಧದಿಂದ ಮುಖ್ಯಾಧಿಕಾರ ವುಳ್ಳವರಾಗಿದ್ದರು. ಅಪರಾಧಿಗಳನ್ನು ಶಿಕ್ಷಿಸುವದಕ್ಕೂ ಮತ್ತು ಯೋಗ್ಯರಾದವರಿಗೆ ಸನ್ಮಾನ ಮಾಡುವದಕ್ಕೂ ಅವರಿಗೆ ಪೂರ್ಣ ಅಧಿಕಾರವಿತ್ತು, ಪ್ರಜೆಗಳ ಸುಖದುಃಖ ಗಳ ಕಾರಣಗಳನ್ನು ಗೊತ್ತುಹಿಡಿದು, ಎಲ್ಲ ಪಕ್ವಾರದಿಂದ ಅವರ ಕಲ್ಯಾಣವಾಗು ವಂತೆ ರಾಜೂ ಕರು ಯಾವಾಗಲೂ ಪ್ರಯತ್ನಿ ಸುತ್ತಿದ್ದರು. ಅವರು ಅಶೋಕನ ಧರ್ಮ ವಿಧಿಗಳನ್ನು ಪ್ರಜೆಗಳಿಗೆ ತಿಳಿಸುತ್ತಿದ್ದರು, ಮತ್ತು ಸತ್ಕಾರ್ಯ ಮಾಡುವದಕ್ಕೆ ಅವರಿಗೆ ಉತ್ತೇಜನ ಕೊಡುವದರಲ್ಲಿಯೂ ಯೋಗ್ಯರಾದವರಿಗೆ ಸನ್ಮಾನ ತೋರಿಸುವದರಲ್ಲಿ ಯೂ ರಾಜೂಕರು ತತ್ಪರರಾಗಿರುತ್ತಿದ್ದರು. ಅಶೋಕನರಸತಿಯ ೪ನೆಯ ಸ್ಥಂಭಲಿಸಿ ಯಲ್ಲಿ ಒಳ್ಳೆ ನಿಪುಣಳಾದ ದಾದಿಗೆ ಮಕ್ಕಳ ಪೋಷಣದ ಭಾರವನ್ನು ಅರ್ಪಿಸಿ ಮನು ಸ್ಯರು ನಿಶ್ಚಿಂತರಾಗಿರುವಂತೆ ನಾನು ಪ್ರಜಾವರ್ಗದ ಸುಖಸಮೃದ್ಧಿಗಾಗಿ ರಾಜೂಕ ರನ್ನು ನಿಯಮಿಸಿ ನಿಶ್ಚಿಂತನಾಗಿರುತ್ತೇನೆ; ಸ್ವತಂತ್ರರಾಗಿ, ಶಾಂತಮನಸ್ಸಿನಿಂದ ಏನೂ ತೊಂದರೆ ಇಲ್ಲದೆ ಅವರು ತಮ್ಮ ತಮ್ಮ ಕರ್ತವ್ಯವನ್ನು ಮಾಡಬೇಕೆಂದು ಕಾರಭಾ ರದಲ್ಲಿ ಅವರಿಗೆ ಸಂಪೂರ್ಣ ಸ್ವತಂತ್ರತೆಯನ್ನು ಕೊಟ್ಟಿರುವೆನು. ” ಎಂದು ಪ್ರಕಟ ಸಿರುವನು. ನಿಜವಾಗಿ ರಾಜೂಕರು ರಾಜ್ಯ ಕಾರಭಾರದಲ್ಲಿ ಮಾಡಿದ ಅಪ್ಪಣೆಗೆ ಚಕ್ರ ವರ್ತಿಯ ಹೊರತು ಯಾರೂ ಎದುರು ನಿಲ್ಲುವಂತೆ ಇರಲಿಲ್ಲ. ರಾಜೂಕರ ಕೆಳಗೆ ಪ್ರದೇಶಿಕರೆಂಬವರು ಇರುತ್ತಿದ್ದರು. ಇವರು ರಾಜೂಕರ ಅಪ್ಪಣೆಗಳನ್ನು ಪಾಲಿಸಿ ಅವರಿಗೆ ರಾಜ್ಯ ಕಾರಭಾರದಲ್ಲಿ ಸಹಾಯ ಮಾಡುತ್ತಿದ್ದರು. ರಾಜೂಕರಿಗೂ ಪ್ರಾದೇಶಿ ಕರಿಗೂ ಮಹಾಮಾತ್ರ ಎಂಬ ಬೇರೊಂದು ಹೆಸರು ಇತ್ತು, ರಾಜೂಕರೂ ಪ್ರದೇತಿ ಕರೂ ಯುಕ್ತರೂ ಅಯುಕ್ತರೂ ಕೂಡಿ ರಾಜಕಾರ್ಯಗಳನ್ನು ಸಾಗಿಸುತ್ತಿದ್ದರು. ಎಲ್ಲ ರಾಜಕಾರ್ಯಗಳು ಲೇಖಕರ ಮುಖಾಂತರ ನಡೆಯುತ್ತಿದ್ದವು. ಅಶೋಕ ಮಹಾರಾಜನ ಕಾಲದಲ್ಲಿ ರಾಜ್ಯದ ಒಳಕಾರಭಾರವು ಸುನಿಯಂತ್ರಿತವಾಗಿ ನಡೆದಿ ಕೈಂಬದು ಇದರಿಂದ ಸ್ಪಷ್ಟವಾಗುವದು, ರಾಜೂಕರೂ ಪ್ರಾದೇಶಿಕರೂ ಯುಕ್ಯರೂ