ಪುಟ:ಅಶೋಕ.djvu/೧೫೭

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೧೪೨ ಅಶೋಕ ಅಥವಾ ಪ್ರಿಯದರ್ಶಿ. • • • • • • • • • ••••• • • • n Ar - 2 * - * * • • • • • • •2 ಕಳುಹಲ್ಪಡುತ್ತಿದ್ದರು. ಜನನಮರಣನಿಕಾಯವು ಪ್ರಜೆಗಳ ಜನನಮರಣಗಳ ಲೆಕ್ಕ ವನ್ನು ಇಡುತ್ತಿತ್ತು, ವಾಣಿಜ್ಯ ನಿಕಾಯವು ಇಡೀ ರಾಜ್ಯದ ವ್ಯಾಪಾರದ ಮೇಲ್ವಿಚಾರ ಣೆಯನ್ನು ಮಾಡುತ್ತಿತ್ತು, ಈ ನಿಕಾಯದವರು ವ್ಯಾಪಾರದ ಸರಕುಗಳ ಪರಿಮಾಣ ವನ್ನು ಜನರ ತಿಳುವಳಿಕೆಗೋಸ್ಕರ ಪ್ರಸಿದ್ಧ ಪಡಿಸುವರು, ಮತ್ತು ಯೋಗ್ಯ ಕಾಲದಲ್ಲಿ ಪ್ರಕಟವಾಗಿ ಸರಕುಗಳ ಮಾರಾಟವಾಗುವಂತೆ ವಿಶೇಷವಾಗಿ ಲಕವಿಡುವರ.. ಸರಕುಗಳ ಬೆಲೆಯನ್ನು ಕೂಡ ಈ ನಿಕಾಯದವರು ನಿರ್ಣಯಿಸುತ್ತಿದ್ದರು. ಯಾವನಾದರೂ ಒಂದಕ್ಕಿಂತ ಹೆಚ್ಚು ಸರಕುಗಳ ವ್ಯಾಪಾರವನ್ನು ಮಾಡುವದಾದರೆ ಅವನು ಹೆಚ್ಚು ಕರವನ್ನು ಕೊಡಬೇಕಾಗುತ್ತಿತ್ತು, ಹಸ್ತ ಜಾತ ಶಿಲ್ಪನಿಕಾಯವು ಕೈಕೆಲ ಸಗಳ ವಿಷಯವಾಗಿ ಹಲವು ನೇಮಗಳನ್ನು ಮಾಡುತ್ತಿತ್ತು. ಶುಲ್ಕನಿಕಾಯವು ವ್ಯಾಪಾ ರದ ಸರಕುಗಳ ಮೇಲೆ ಸುಂಕವನ್ನು ಗೊತ್ತು ಮಾಡುತ್ತಿತ್ತು. ಯಾವನಾದರೂ ಅದನ್ನು ಕೊಡುವದಕ್ಕೆ ತಪ್ಪಿದರೆ ಅವನಿಗೆ ದೇಹಾಂತ ಶಿಕ್ಷೆಯ ವ್ಯವಸ್ಥೆಯು ಇತ್ತು. ಇದು ಅತಿಶಯೋಕ್ತಿಯೆಂದು ನಮಗೆ ತೋರುವದು. ಯಾವನಾದರೂ ಆ ವಿಷಯ ದಲ್ಲಿ ವಂಚನೆಮಾಡಿದರೆ ಅವನಿಗೆ ಆ ಕಾಲಕ್ಕೆ ದೊಡ್ಡ ಶಿಕ್ಷೆಯ ವ್ಯವಸ್ಥೆಯು ಶಾಸ್ತ್ರ ದಲ್ಲಿ ಇತ್ತು, ಆದರೆ ಅಷ್ಟಕ್ಕೇ ಪ್ರಾಣವಧವು ಯಾವ ಶಾಸ್ತ್ರದಲ್ಲಿಯ ಹೇಳಲ್ಪಟ್ಟ ತೆಂದು ತೋರುವದಿಲ್ಲ. ಅದರಲ್ಲಿಯೂ ಅಶೋಕನಂಥ ನರಪತಿಯ ಆಳಿಕೆಯಲ್ಲಿ ಸುಂಕವನ್ನು ತಪ್ಪಿಸಿದ ಅಪರಾಧಕ್ಕಾಗಿ ಪ್ರಾಣದಂಡವು ವಿಧಿಸಲ್ಪಟ್ಟಿತ್ತೆಂಬದು ಚನ್ನಾಗಿ ತೋರುವದಿಲ್ಲ. ಈ ನಿಕಾಯಗಳ ಸಭ್ಯರೆಲ್ಲ ಚಕ್ರವರ್ತಿಯಿಂದ ನಿಯಮಿಸ ಟ್ಟವರೋ ಇಲ್ಲವೆ ಪ್ರಜೆಗಳಿಂದ ಆರಿಸಲ್ಪಟ್ಟವರೋ ಈ ವಿಷಯವನ್ನು ತಿಳಿಯುವ ಉಪಾಯವು ಈಗ ಇಲ್ಲ. ಏನೇ ಇರಲಿ ನಿಕಾಯಗಳಲ್ಲಿ ಇಲ್ಲವೆ ಮಂತ್ರಿ ಸಭೆಗಳಲ್ಲಿ ಯೋಗ್ಯರಾದ ಸಭ್ಯರೇ ಇರುತ್ತಿದ್ದರೆಂದು ಊಹಿಸಿದರೆ ತಪ್ಪಾಗಲಾರದು. ಅಶೋಕನು ತನ್ನ ಆಳಿಕೆಯಲ್ಲಿ ಬೇರೆ ಬೇರೆ ವಿಭಾಗಗಳ ಮೇಲೆ ದೊಡ್ಡ ದೊಡ್ಡ ಕಾಮದಾರರನ್ನು ನಿಯಮಿಸಿದ್ದನೆಂದು ಶಿಲಾಲಿಪಿಗಳಲ್ಲಿ ಉಲ್ಲೇಖವುಂಟು. ಆದರೆ ನಿಕಾಯಗಳಲ್ಲಿ ಸಂಬ ಭವುಳ್ಳ ಕಾಮದಾರರು ಇದ್ದರೆಂಬದರ ಉಲ್ಲೇಖವಿಲ್ಲ. ಈ ವಿಷಯದಲ್ಲಿ ಇದುವರೆಗೆ ಸ್ಪಷ್ಟವಾದ ಆಧಾರವು ದೊರೆತಿಲ್ಲ. ರಾಜಮಾರ್ಗಗಳನ್ನು ಮಾಡಿಸುವದು, ಮಾರ್ಗಗಳ ಬದಿಗಳಲ್ಲಿ ಕೆರೆ-ಬಾವಿಗಳನ್ನು ಕಡಿಸುವದು, ಒಕ್ಕಲತನದ ಉನ್ನತಿಗಾಗಿ ನದಿ-ಕೆರೆ ಮುಂತಾದವುಗಳಿಂದ ನೀರನ್ನು ಪೂರೈಸುವದು, ಈ ಕೆಲಸಗಳಿಗಾಗಿ ಪ್ರತ್ಯೇಕ ವ್ಯವ ಸ್ಥೆಯು ಇತ್ತು. ರುದ್ರದಾಮನದ ಶಾಸನದಿಂದ ತಿಳಿಯುವದೇನಂದರೆ- ಸೌರಾಷ್ಟ್ರಕ್ಕೆ ತುಶಾಸನೆಂಬ ಪಾರಸಿಕ ಕಾರಭಾರಿಯನ್ನು ಅಶೋಕನು ನಿಯಮಿಸಿದ್ದನು, ಅವನು ಚಂದ್ರಗುಪ್ತನು ಕಟ್ಟಿಸಿದ ಗಿರ್ನಾರದ ಕೆರೆಯ ನೀರು ಯಾವಾಗಲೂ ಉಪಯೋಗಿಸ ಲಿಕ್ಕೆ ಬರುವಂತೆ ಒಂದು ಹೊಸ ಕಾಲುವೆಯನ್ನೂ ಸೇತುವೆಯನ್ನೂ ಕಟ್ಟಿಸಿದ್ದನು.