ಪುಟ:ಅಶೋಕ.djvu/೧೫೮

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಆಶೋಕ ಅಥವಾ ಪ್ರಿಯದರ್ಶಿ.

  • ೪೩

ಈ ಸಂಗತಿಯನ್ನು ಆಲೋಚಿಸಿದರೆ ಒಕ್ಕಲತನದ ಉತ್ಕರ್ಷಕ್ಕೂ, ಪ್ರಚಾಚನದ ಸುಖಾಭಿವೃದ್ಧಿಗೂ ಪಾಟಲೀಪುತ್ರ ರಾಜಧಾನಿಯಿಂದ ಸಾವಿರಾರು ಕೋಶಗಳ ದೂರದಲ್ಲಿ ಕೂಡ, ಆಡಳಿತವು ಸುವ್ಯವಸ್ಥಿತವಾಗಿ ನಡೆದಿತ್ತೆಂದು ಸ್ಪಷ್ಟವಾಗಿ ತೋರು ವದು. ಅಶೋಕನ ಆಳಿಕೆಯಲ್ಲಿ ಚಿಕಿತ್ಸಾ ಶಾಸ್ತ್ರವೂ ಪೂರ್ಣವಾಗಿ ಬೆಳವಣಿಗೆಯನ್ನು ಹೊಂದಿತ್ತು, ಅಲ್ಲಲ್ಲಿ ಚಿಕಿತ್ಸಾಲಯಗಳನ್ನು ಸ್ಥಾಪಿಸುವದೂ, ಔಷಧಾಲಯಗಳನ್ನು ಕಟ್ಟಿಸುವದೂ, ಔಷಧದ ಗಿಡ-ಮೂಲಿಕೆಗಳನ್ನು ಸಂಗ್ರಹಿಸುವದೂ ಈ ಕಾರ್ಯ ಗಳಲ್ಲಿ ಚಕ್ರವರ್ತಿಯು ಚನ್ನಾಗಿ ಲಕ್ಷಗೊಡುತ್ತಿದ್ದನು, ಪಶುಚಿಕಿತ್ಸೆಗಾಗಿ ಬೇರೆ ಚಿಕಿ ತ್ಸಾಲಯಗಳ ವ್ಯವಸ್ಥೆಯು ಇತ್ತು, ಭಾರತವರ್ಷದಲ್ಲಿ ಪೂರ್ವಕಾಲದಿಂದ ಧರ್ಮಾ ರ್ಥವಾಗಿ ಔಷಧೋಪಚಾರ ದೊರೆಯುವ ಅನುಕೂಲತೆ ಇಂತೆಬದರ ಉಲ್ಲೇಖವು ಉಂಟು. ಅಶೋಕನ ದಯಾವೂರ್ಣ ಹೃದಯದಲ್ಲಿ ರೋಗಪೀಡಿತರ ಆರ್ತಧ್ವನಿ ಯಿಂದ ದಯಾರಸವು ಉಕ್ಕಿ ಬರುತ್ತಿತ್ತು, ಮೂಕ ಪಶು-ಪಕ್ಷಿಗಳ ರೋಗಪೀಡೆಯು ಕೂಡ ಆತನ ಮರ್ಮಸ್ಥಾನಕ್ಕೆ ಹೋಗಿ ಮುಟ್ಟಿತ್ತು. ಆದದರಿಂದಲೇ ಆತನು ಔಷಧಾ ಲಯ, ಪಶುಚಿಕಿತ್ಸಾಲಯ ಮೊದಲಾದವುಗಳನ್ನು ರಾಜ್ಯದಲ್ಲಿ ಬೇಕಾದಷ್ಟು ಕಟ್ಟಿಸಿ ದ್ದನು. ಮಗಧದಲ್ಲಿ ಉತ್ತಮ ಚಿಕಿತ್ಸಕರ ಕೊರತೆ ಇರಲಿಲ್ಲ, ಭಿಷಕ್ಕುಲತಿಲಕನೆನಿಸಿದ ಜೀವಕನು ಮಗಧದಲ್ಲಿ ಮಠವನ್ನು ಕಟ್ಟಿಸಿ ಸಾವಿರಾರು ಜನ ವಿದ್ಯಾರ್ಥಿಗಳಿಗೆ ಚಿಕಿ ತ್ವಾ ವಿದ್ಯೆಯ ಶಿಕ್ಷಣವನ್ನು ಕೊಡುತ್ತಿದನು. ಅವನು ಮುಪ್ಪಿನಲ್ಲಿ ಗೌತಮಬುದ್ಧನ ಚಿಕಿತ್ಸಕನಾಗಿ ನಿಯಮಿಸಲ್ಪಟ್ಟಿದ್ದನೆಂದು ವಾರ್ತೆಯುಂಟು. ಆತನ ಬಳಿಯಲ್ಲಿ ಶಿಕ್ಷಣ ಹೊಂದಿದ ಎಷ್ಟೋ ವಿದ್ಯಾರ್ಥಿಗಳು ಮಗಧದಲ್ಲಿ ಚಿಕಿತ್ಸಾ ವೃತ್ತಿಯನ್ನು ಮಾಡುತ್ತಿ ದ್ದರು. ಮಗಧದ ಇತಿಹಾಸವನ್ನು ನೋಡಿದರೆ ಜೀವಕನು ಎಷ್ಟೋ ಜನ ದೇಶಸಂಚಾ ರಕ ಚಿಕಿತ್ಸಕರನ್ನು ತಯಾರಿಸಿದ್ದನೆಂದು ಗೊತ್ತಾಗುವದು, ಇವರು ಊರೂರಿಗೆ ಹೋಗಿ ಚಿಕಿತ್ಸೆಯನ್ನು ಮಾಡುತ್ತಿದ್ದರು. ಅಶೋಕನು ತನ್ನ ರಾಜ್ಯದಲ್ಲೆಲ್ಲ ಚಿಕಿತ್ಸಾ ಲಯ ಮೊದಲಾದವುಗಳನ್ನು ಸ್ಥಾಪಿಸಿದ್ದನಷ್ಟೇ ಅಲ್ಲ; ಅವುಗಳ ವೆಚ್ಚವನ್ನು ಬೊಕ್ಕ ಸದಿಂದ ಕೊಡುವ ವ್ಯವಸ್ಥೆಯನ್ನು ಮಾಡಿಸಿದ್ದನು. ಚೋಲ, ಪಾಂಡ್ಯ, ಸತಿಯಪುತ್ರ, ಕೇರಲ, ಸಿಂಹಲ ಮೊದಲಾದ ದೇಶಗಳು ಅಶೋಕನ ಪ್ರಾಧಾನ್ಯವನ್ನು ಒಪ್ಪುತ್ತಿದ್ದವು. ಗ್ರೀಕರಾಜನಾದ ಅಂಟಿಓಕಸನ ರಾಜ್ಯ ದವರೆಗೆ ಆತನ ಪ್ರತಾಪವು ನೆಲೆಗೊಂಡಿತ್ತು, ಐತಿಹಾಸಿಕರ ಮತದಂತೆ ಮೇಲಿನ ಚೋಲ ಮೊದಲಾದ ಪ್ರದೇಶಗಳು ಅಶೋಕನ ಸಾಮ್ರಾಜ್ಯಕ್ಕೆ ಒಳಪಟ್ಟಿರಲಿಲ್ಲ. ಆ ಕಾಲದಲ್ಲಿ ಅವು ಸ್ವತಂತ್ರ ರಾಜ್ಯಗಳೆಂದು ಎಣಿಸಲ್ಪಡುತ್ತಿದ್ದವು. ಆದರೂ ಅವು ಅಶೋಕನ ಮಾಂಡಲಿಕ ರಾಜ್ಯಗಳಾಗಲಿ- ಮಿತ್ರ ರಾಜ್ಯಗಳಾಗಲಿ ಆಗಿರಬಹುದೆಂದು