ಪುಟ:ಅಶೋಕ.djvu/೧೬೨

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಅಶೋಕ ಅಥವಾ ಪ್ರಿಯದರ್ಶಿ, ಈ4 vivv•> \ Y S4 # 1 # 1 \ \

  1. # # # # # * * * * * * * * * * * * * * * * * * * * * * * */*, * * * * * * */*/*/*/*//

ಕ್ರಿ ಶ ೧ನೆಯ ಶತಮಾನದಲ್ಲಿ ಈ ಮಹಾಯಾನ ಬೌದ್ದ ಸಾಂಪ್ರದಾಯವು ಉದಯ ವಾಗುವ ಪೂರ್ವದಲ್ಲಿ ಈ ವಿಚಾರದ ಉಲ್ಲೇಖವು ಬಹುಶಃ ಎಲ್ಲಿಯೂ ಕಂಡು ಬರುವ ದಿಲ್ಲ, ಕ್ರಿ, 4ನೆಯ ಶತಮಾನದಲ್ಲಿ ನಾಗಾರ್ಜುನನೂ + ಆರ್ಯದೇವನೂ ಎಲ್ಲಕ್ಕೂ ಮೊದಲು ಈ ವಿಹಾರದ ಕಡೆಗೆ ಜನರ ದೃಷ್ಟಿಯನ್ನೆಳೆದರು. ಅದೇ ಕಾಲದಲ್ಲಿ ಸುವಿಷ್ಣು ಎಂಬ ಒಬ್ಬ ಬ್ರಾಹ್ಮಣನು ಮಹಾಯಾಸ ಧರ್ಮದ ಪೋಷಣಕ್ಕಾಗಿ ೧ಳಿ ವ:೦ದಿರಗಳನ್ನು ಕಟ್ಟಿಸಿದನು. ಕ್ರಿ. ಶ. ೪೫೦ ರಲ್ಲಿ ಮಗಧದ ಬಾಲಾದಿತ್ಯರಾಜನ ಕಾಲದಲ್ಲಿ ಈ ವಿಹಾರವು ಎಲ್ಲಕ್ಕೂ ಮೊದಲು ವಿಶ್ವವಿದ್ಯಾಲಯವಾಯಿತು, ಈ ಸಮ ಯವನ್ನಾರಂಭಿಸಿ ೮ನೆಯ ಶತಮಾನದ ವರೆಗೆ ( ಕ್ರಿ. ೬೫೦ ವರೆಗೆ) ಇದರ ಪ್ರಸಿ ದ್ವಿಯು ಬಹಳವಾಗಿತ್ತು, ಈ ಅವಧಿಯಲ್ಲಿ ಸುಪ್ರಸಿದ್ದ ಕಮಲಶೀಲನು ಇಲ್ಲಿ ತಂತ್ರ ಶಾಸ್ತ್ರದ ಅಧ್ಯಾಪಕನಾಗಿದ್ದನು. ಯಾವ ಸ್ಥಳದಲ್ಲಿ ನಾಲಂದಾನಿಹಾರವೂ ಅದರ ರ ಕಾಲಯವೂ ಇದ್ದವೋ ಆಸ್ಥಾನಕ್ಕೆ ತಿಬೇಟದ ಗ್ರಂಥಕಾರರು ಧರ್ಮಗಂಜಿ ಎಂದು ಕರೆದಿರುವರು. ನಾಲಂದಾ ವಿಶ್ವವಿದ್ಯಾಲಯದಲ್ಲಿ ೩ ದೊಡ್ಡ ಉಪ್ಪರಿಗೆಗಳಿದ್ದವು, ಅವು ಗಳಿಗೆ ರತ್ನ ಸಾಗರ, ರತ್ತೋದಧಿ, ರತ್ನ ರಂಜಕ ಎಂಬ ಹೆಸರುಗಳಿದ್ದವು, ಇವುಗಳಲ್ಲಿ ರತ್ಯೋದಧಿ ಎಂಬದಕ್ಕೆ ೯ ನೆಲೆಗಳಿದ್ದವೆಂದು ವರ್ಣನೆಯುಂಟು. ಇದರಲ್ಲಿಯೇ * ಪ್ರಜ್ಞಾಪಾರಮಿತಾ ' ಮತ್ತು ತಂತ್ರಶಾಸ್ತ್ರ ಇವುಗಳ ಬಹಳ ಗ್ರಂಥಗಳು ಇಡಲ್ಪಟ್ಟ ದ್ದವು. ಈಗಿನ ಬಡಗಾಂವೆಯ ಅವಶೇಷ ಸ್ಥಳದಲ್ಲಿ ನಾಲಂದಾವಿಹಾರವಿತ್ತೆಂದು ಐತಿ ಹಾಸಿಕರು ಹೇಳುವರು. ಈ ಸ್ಥಳವು ರಾಜಗೃಹ ಮತ್ತು ಗೃಹ್ಯ ಕೂಟ ಇವುಗಳಿಂದ

  1. ಮಹಾಯಾನ ಬೌದ್ದ ಮತದಲ್ಲಿ ೪ ವಿಭಾಗಗಳುಂಟು. ವೈಭಾಷಿಕ, ಸೌಕ್ರಾಂತಿಕ, ಮಾಧ್ಯಮಿಕ, ಯೋಗಾಚಾರ; ಮಾಧ್ಯಮಿಕ ಬೌದ್ಧಮತವನ್ನು ಸ್ಟಾಫಿಸಿದವನು ನಾಗಾರ್ಜುನನು, ಇವನು ದೊಡ್ಡ ಜ್ಞಾನಿಯ ತಾರ್ಕಿಕನೂ ಎಂದು ಪ್ರಸಿದ್ದ ನಿರುವನು ನಾಗಾರ್ಜುನನು ಈಗಿನ ವಿದರ್ಭದಲ್ಲಿ ( ಈಗಿನ ಬೇರಾರ )ದ್ದ ಮಹಾಕಶಲ ಎಂಬ ಸ್ಥಾನದಲ್ಲಿ ಹುಟ್ಟಿದನು ಮತ್ತು ಕೃಷ್ಣಾ ನದಿ ತೀರದಲ್ಲಿರುವ ಶ್ರೀ ಪರ್ವತದ ಒಂದು ಗುಹೆಯಲ್ಲಿ ಬಹು ದಿವಸ ತಪಸ್ಸನ್ನು ಮಾಡಿದನು, ನಾಗಾರ್ಜುನನು ಮಾಧ್ಯಮಿಕ ಕಾರಿಕಾ ಮೊದಲಾದ ಹಲವು ದಾರ್ಶನಿಕ ಗ್ರಂಥಗಳನ್ನು ರಚಿಸಿರುವನು.

+ ಇವನು ನಾಗಾರ್ಜು ನಸ ಶಿಷ್ಯನು, ಮಾಧ್ಯಮಿಕ ಮತಗ್ರಂಥಗಳನ್ನು ಬರೆದವರಲ್ಲಿ ಅವಳೊ ೭ನು ಪ್ರಸಿದ್ದು, ಆರ್ಯದೇವನಿಗೆ ಹಲವು ಕಡೆಯಲ್ಲಿ ಕಾಣದೇವ, ನೀ ಲನೇತ್ರ, ಪಿಂಗಲನೇತ್ರ ಎಂಬ ದಾಗಿ ಹೆಸರುಗಳುಂಟು, ಇವನು ಭರತಖಂಡದ ಹಲವೆಡೆಗಳಲ್ಲಿ ಪ್ರವಾಸಮಾಡಿದನು, ಮತ್ತು ಹೋದ ಹೋದಲ್ಲಿ ಅನ್ಯಮತಾವಲಂಬಿಗಳನ್ನು ವಾದದಲ್ಲಿ ಜಯಿಸಿದನು ಆರ್ಯದೇವನು ಬಹುಕಾಲ ನಾಲಂದಾ ಬಿಹಾರದಲ್ಲಿ ವಾಸಮಾಡಿದ್ದನು. ಮಹಾಯಾಸ ದರ್ಶನದ ಹಲವು ಗ್ರಂಥಗಳನ್ನು ಬರೆದನು, ಚೀನಿ ಭಾಷೆಯಲ್ಲಿ ಕುಮಾರಜೀವನು ಇವನ ಜೀವನ ಚರಿತ್ರವನ್ನು ಬರೆದಿದ್ದನು.