ಪುಟ:ಅಶೋಕ.djvu/೧೭೧

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೧ ಅಶೋಕ ಅಥವಾ ಪ್ರಿಯದರ್ಶಿ v• • • • - * * * * * * + # - * *,

  • * * * * *~/ /

•••••. (two-+ ••••••••••••••••M ನಿರ್ಜನಪ್ರದೇಶದಲ್ಲಿದ್ದು ಧರ್ಮವನ್ನು ಸಂಪಾದಿಸಿಕೊಳ್ಳುವೆನು ಎಂದು ಹೇಳಿದನು. ಬಳಿಕ ಅಶೋಕನು ರಾಜಪುತ್ರನು ನಿರ್ಜನಪ್ರದೇಶದಲ್ಲಿ ವಾಸಿಸುವ ಅವಶ್ಯವಿಲ್ಲ; ನಾನು ರಾಜಧಾನಿಯಲ್ಲಿಯೇ ಒಂದು ಕುಟೀರವನ್ನು ಕಟ್ಟಿಸಿಕೊಡುವೆನು; ಎಂದು ಹೇಳಿ ದೈತ್ಯ ರಿಗೆ ಆಜ್ಞಾಪಿಸಿ ಕೂಡಲೆ ಒಂದು ಕಲ್ಲಿನ ಮನೆಯನ್ನು ಕಟ್ಟಿಸಿದನು; ಮುಂದೆ ಮಹೇಂ ದ್ರನು ದಕ್ಷಿಣದೇಶಕ್ಕೆ ಬಂದು ಕಾವೇರಿ ತೀರದಲ್ಲಿ ಒಂದು ವಿಹಾರವನ್ನು ಕಟ್ಟಿಸಿದ್ದನು. ಸಾವಿರಾರು ವರ್ಷಗಳಾದರೂ ಅದರ ಅವಶೇಷವು ಅಲ್ಲಿ ಇತ್ತು, ಮಹೇಂದ್ರನು ಯೋಗ ಶಕ್ತಿಯಿಂದ ಆಕಾಶದಲ್ಲಿ ಸಂಚರಿಸುತ್ತ ಸಿಂಹಲಕ್ಕೆ ಬಂದಿದ್ದನೆಂದೂ, ಮತ್ತು ಅಲ್ಲಿ ಬೌದ್ಧ ಧರ್ಮವನ್ನು ಪ್ರಚಾರಗೊಳಿಸಿ ಸಿಂಹಲ ವಾಸಿಗಳ ಕಲ್ಯಾಣ ಮಾಡಿದನೆಂದೂ ಪ್ರವಾದವಿರುವದು. ಫಾಹಿಯಾನ ಮತ್ತು ಹುಯೆನ್ ತ್ಸಾಂಗ ಇವರಿಬ್ಬರೂ ಮಹೇಂದ್ರನು ಅಶೋಕನ ತಮ್ಮನೆಂದು ಹೇಳಿರುವರು. ಹುಯನ್‌ತ್ಸಾಂಗನು ಮಧುರೆಯ ಪೂರ್ವಕ್ಕೆ ಇರುವ ಪ್ರಾಚೀನ ಸಂಘಾರಾಮವನ್ನು ಅಶೋಕನ ತಮ್ಮನಾದ ಮಹೇಂದ್ರನು ಕಟ್ಟಿಸಿರುವನೆಂದು ಬರೆದಿದ್ದಾನೆ. ಕಾವೇರಿಯ ದಂಡೆಯ ಮೇಲಿನ ವಿಹಾರದಲ್ಲಿ ಮಹೇದ್ರಂನು ವಾಸಿಸುತ್ತಿ ದ್ದನು, ಈ ಪ್ರದೇಶವು ಸಿಂಹಲಕ್ಕೆ ಸಮೀಪವಾಗುವದು. ಆದದರಿಂದ ಈ ಪ್ರದೇಶದಿಂದ ಮಹೇಂದ್ರನು ಸಿಂಹಲಕ್ಕೆ ಹೋಗಿದ್ದನೆಂಬದು ಸಹಜವದೆ. ಮಹೇಂದ್ರನು ಅಶೋಕನ ತಮ್ಮನೋ ಮಗನೋ ಎಂಬದನ್ನೂ ಆತನು ಸಿಂಹಲಕ್ಕೆ ಹೋಗಿದ್ದನೋ ಕಾವೇರಿಯ ದಂಡೆಯ ಮೇಲಿನ ಆಶ್ರಮದಲ್ಲಿಯೇ ಕಾಲಕ್ರಮಣ ಮಾಡಿದನೋ ಎಂಬದನ್ನೂ ನಿರ್ಣ ಯಿಸುವದು ಅನಾಧ್ಯವು, ಆದರೆ ಸಿಂಹಲದ ಐತಿಹಾಸಿಕರು ಮಹೇಂದ್ರನ ಜನ್ಮವೃ ತಾಂತ, ಆತನ ತಾಯಿಯ ವೃತ್ತಾಂತ, ಆತನ ತಂಗಿಯಾದ ಸಂಘಮಿತ್ರೆಯ ವೃತ್ತಾಂತ ಮೊದಲಾದವುಗಳನ್ನು ಆನುಪೂರ್ವಿಯಿಂದ ಸರಿಯಾಗಿ ವರ್ಣಿಸಿರುವದನ್ನು ನೋಡಿದರೆ ಅದು ಕಲ್ಪಿಸಿ ಬರೆದ ಸಂಗತಿಯೆಂದು ತೋರುವದಿಲ್ಲ. ನೀತಶೋಕನ ಇಲ್ಲವೆ ವಿಗತಾಶೋಕನ ಕಥೆ. ಈ ಕಥೆಯು ಅಶೋಕಾನದಾನದಲ್ಲಿ ಮಾತ್ರ ಉಂಟು. ವಿಗತಾಶೋಕನಿಗೆ ಜೈನ ತೀರ್ಥಂಕರರ ಮೇಲೆ ಬಹಳ ಭಕ್ತಿಯಿತ್ತು. ಆತನು ಬೌದ್ಧರಿಗೆ ಭೋಗಾಸಕ್ತರೆಂದು ಉಪ ಹಾಸಮಾಡುತ್ತಿದ್ದನು. ಅಶೋಕನು ಆತನ ಬಳಿಯಲ್ಲಿ ಬೌದ್ಧಧರ್ಮದ ಸುದ್ದಿಯನ್ನೆತ್ತಿದರೆ ಆತನು ಬೌದ್ಧರು ಭಿಕ್ಷುಗಳ ಕೈಯೊಳಗಿನ ಗೊಂಬೆಗಳೆಂದು ಉಪಹಾಸಮಾಡುತ್ತಿದ್ದನು, ಅಶೋಕನು ಆತನನ್ನು ಬೌದ್ಧಧರ್ಮದಲ್ಲಿ ತೆಗೆದುಕೊಳ್ಳುವದಕ್ಕೆ ಬೇರೊಂದು ಉಪಾ ಯವನ್ನು ಯೋಚಿಸಿದನು, ಮಂತ್ರಿಗಳು ಹಂಚಿಕೆಯಿಂದ ಅವನಿಗೆ ಒಂದು ದಿವಸ ರಾಜ ಚಿಹ್ನೆಗಳನ್ನು ಧರಿಸುವಂತೆ ಮಾಡಿದರು. ಅಶೋಕನು ಅದನ್ನು ನೋಡಿ ಸುಳೆ ( ಸಿಟ್ಟಿಗೆ ದ್ದಂತೆ ತೋರಿಸಿ ಆ ಅಪರಾಧಕ್ಕೆ ಮರಣಶಿಕ್ಷೆಯನ್ನು ವಿಧಿಸಿದನು, ಮತ್ತು ನೀನು ೭ ದಿವ