ಪುಟ:ಅಶೋಕ.djvu/೧೭೮

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಅಶೋಕ ಅಥವಾ ಪ್ರಿಯದರ್ಶಿ +* / # » ಕ ದಲ್ಲಿ ಅಲ್ಲಿ ಇದ್ದಳು. ಅವಳು ಕುನಾಲನನ್ನು ರಾಜ್ಯಕ್ಕೆ ಎರವು ಮಾಡಿ ತನ್ನ ಮಗನಿಗೆ ಪಟ್ಟವಾಗುವ ಉಪಾಯವನ್ನು ಮಾಡಬೇಕೆಂದು ಆಲೋಚಿಸಹತ್ತಿದಳು. ಆಕೆಯು ಆ ಪತ್ರವನ್ನು ಓದುವ ನೆವಮಾಡಿ ತೆಗೆದುಕೊಂಡು ಮರೆಯಲ್ಲಿ “ ಅಧೀಯ ?” ಎಂಬದಕ್ಕೆ ಬದಲಾಗಿ ( ಅ೦ಧೀಯ ಉ ” ಎಂದು ತಿದ್ದಿದಳು ಅಂದರೆ ಇವನನ್ನು ಕುರುಡನನ್ನು ಮಾಡಿರಿ ಎಂಬ ಅರ್ಥವಾಯಿತು. ಅರಸನು ಪತ್ರವನ್ನು ಎರಡನೆಯ ಸಾರೆ ಓದದೆ ಮೊಹರು ಮಾಡಿ ಉಜ್ಜಯಿನಿಗೆ ಕಳಿಸಿಕೊಟ್ಟನು. ಉಜ್ಜಯಿನಿಗೆ ಪತ್ರವು ಹೋಗಲು ಪತ್ರ ಓದಿದವನು ಏನು ಮಾಡಿದರೂ ಕುನಾಲವಿಗೆ ಈ ಭಯಂಕರ ಅಪ ಣೆಯಾದದ್ದನ್ನು ತಿಳಿಸಲಿಲ್ಲ. ಕುನಾಲನು ತಾನೇ ಆ ಪತ್ರವನ್ನು ತೆಗೆದುಕೊಂಡು ಓದಿದನು. ಆಗ ಆತನು ಮನಸ್ಸಿನಲ್ಲಿ ಮೌರ್ಯವಂಶದಲ್ಲಿ ಯಾವನೂ ಎಂದೂ ತಂದೆಯ ಅಪ್ಪಣೆಯನ್ನು ತಿರಸ್ಕರಿಸಿಲ್ಲ. ಆದದರಿಂದ ತಾನು ತಂದೆಯ ಅಪ್ಪಣೆಯನ್ನು ನಡೆಸದೆ ಎಂದೂ ಕೆಟ್ಟ ಉದಾಹರಣೆಯಾಗಲಾರೆನು ಎಂದು ವಿಚಾರಮಾಡಿದನು. ಬಳಿಕ ತಾನೇ ಕಾದ ಕಂಬಿಯಿಂದ ತನ್ನ ಎರಡೂ ಕಣ್ಣುಗಳನ್ನು ಕಿತ್ತಿಕೊಂಡನು. ಈ ಸುದ್ದಿಯು ಅರಸನಿಗೆ ಹತ್ತಲು ಆತನು ಅತ್ಯಂತ ದುಃಖಕ್ಕೊಳಗಾದನು, ಕುನಾಲನಿಗೆ ಪಟ್ಟಗಟ್ಟಬೇಕೆಂಬ ವಿಚಾರವನ್ನು ಬಿಡಬೇಕಾಯಿತು. ಕುರುಡತನದಿಂದ ಕುನಾಲನು ರಾಜ್ಯಕ್ಕೆರವಾದನು. ಅಶೋಕನು ಕುನಾಲನು ಸುಖದಿಂದ ಜೀವಿಸಲಿಕ್ಕೆ ಬೇಕಾಗು ವೆಷ್ಟು ಉತ್ಪನ್ನ ವುಳ್ಳ ಒಂದು ಗ್ರಾಮವನ್ನು ಆತನಿಗೆ ಕೊಟ್ಟನು. ಮುಂದೆ ಕೆಲಕಾಲದ ಮೇಲೆ ಕುನಾಲನ ಹೆಂಡತಿ ಶರತಶ್ರೀಯು ಗಂಡುಮಗು ವನ್ನು ಹೆತ್ತಳು, ಕುನಾಲನು ಆತನೇ ಮಗಧರಾಜ್ಯದ ಉತ್ತರಾಧಿಕಾರಿಯೆಂದು ಮನ ಸ್ಸಿನಲ್ಲಿ ಮಾಡಿದನು, ಮುಂದೆ ಆತನು ಕುರುಡಗಾಯಕನ ವೇಷದಿಂದ ಪಾಟಲಿಗ್ರ ತ್ರಕ್ಕೆ ಬಂದನು, ಮತ್ತು ತನ್ನ ಇಂಪಾದ ಸಂಗೀತ ಸ್ವರದಿಂದ ಎಲ್ಲರನ್ನೂ ಮೆಚ್ಚಿಸಹ ತಿದನು, ಕ್ರಮವಾಗಿ ಆತನ ಮಧುರ ಸಂಗೀತದ ಸುದ್ದಿಯು ಅರಸನ ಕಿವಿಗೆ ಮುಟ್ಟಿತು. ಅರಸನು ಅರಮನೆಗೆ ಸಂಗೀತಕ್ಕೊಸ್ಕರ ಆತನನ್ನು ಕರೆಯಿಸಿದನು. ಕುನಾಲನು ಗಾಯನದ ಪದಗಳಲ್ಲಿ ಬಿಂದುಸಾರನ ಮೊಮ್ಮಗನು, ಅಶೋಕಿಯ ಮಗನು ಈ ದಿವಸ ತನ್ನ ರಾಜ್ಯವನ್ನು ಬೇಡುತ್ತಿರುವನು ” ಎಂಬ ಭಾವವನ್ನು ವ್ಯಕ್ತಪಡಿಸಿ ದನು. ಅರಸನು ನೀನಾರೆಂದು ಕೇಳಲು ಅವನು ತನ್ನ ಗುರುತು ಹೇಳಿದನು. ಇದು ವರೆಗೆ ಅರಸನು ತೆರೆಯ ಒಳಗೆ ಕುಳಿತು ಗಾಯನವನ್ನು ಕೇಳುತ್ತಿದ್ದನು. ಈಗ ತೆರೆ ಯನ್ನು ಸರಿಸಿ ಮಗನನ್ನು ಅಪ್ಪಿಕೊಂಡನು, ಕುನಾಲನ ಬೇಡಿಕೆಯನ್ನು ಕೇಳಿಕೊಂಡು ಅರಸನು ನೀನು ಕುರುಡನಾದದರಿಂದ ನಿನಗೆ ರಾಜ್ಯವು ದೊರೆಯುವಂತಿಲ್ಲವೆಂದು ದುಃಖದಿಂದ ಹೇಳಿದನು. ಆಗ ಕುನಾಲನು ಮತ್ತೆ ಹೊಸದಾಗಿ ಹುಟ್ಟಿದ ನನ್ನ ಮಗನ ಸಲುವಾಗಿ ನಾನು ರಾಜ್ಯವನ್ನು ಬೇಡುತ್ತೇನೆಂದು ಹೇಳಿದನು, ಅಶೋಕನು ಅಗ