ಪುಟ:ಅಶೋಕ.djvu/೧೮೭

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೧೬೨

  • ಅಶೋಕ ಅಥವಾ ಪ್ರಿಯದರ್ಶಿ.

“Y 44 4 4 4 + ' ' + + G - - - -

  • +) +,

ಹಾಳು ಮಾಡಿದ್ದಲ್ಲದೆ ಅಸಂಖ್ಯ ಮೌರ್ಯರನ್ನು ಕೊಂದು ಹಾಕಿದನು. ಈ ಕಾಲದಲ್ಲಿ ಮೌರ್ಯರಾಜನ ಪಟ್ಟದರಸಿಯು ಗರ್ಭಿಣಿಯಿದ್ದಳು. ಅವಳು ತನ್ನ ಗರ್ಭವನ್ನು ರಕ್ಷಿ ಸಿಕೊಳ್ಳುವದಕ್ಕಾಗಿ ತನ್ನ ಅಣ್ಣಂದಿರ ಸಹಾಯವನ್ನು ಹೊಂದಿದಳು. ಅವರು ಜಾಣ ತನದಿಂದ ಮಯೂರ ನಗರದಿಂದ ಓಡಿಬಂದು ಪುಷ್ಪ ಸಾರದಲ್ಲಿ ( ಪಾಟಲಿಪುತ್ರ ) ವಾಸಮಾಡಹತ್ತಿದರು, ಆ ಮೌರ್ಯರ ಅರಸಿಯು ಗಂಡುಮಗುವನ್ನು ಹೆತ್ತಳು. ಮೌರ್ಯ ವಂಶದ ರಾಜಕುಮಾರನು ಬದುಕಿರುವನೆಂಬದನ್ನು ಕೇಳಿದರೆ ವೈರಿಗಳು ತನ್ನ ಮಗನನ್ನು ಕೊಂದಾರೆಂಬ ಅಂಜಿಕೆಯಿಂದ ಅವಳು ಆ ಮಗುವನ್ನು ಒಂದು ಪಾತ್ರೆ ಯಲ್ಲಿ ಬಚ್ಚಿಟ್ಟು ಒಬ್ಬ ಗೋವಳಿಗನ ಹಟ್ಟೆಯಲ್ಲಿ ಒಯ್ದಿಟ್ಟಳು. ಹುಡುಗನ ಅಳುವ ಧ್ವನಿಯನ್ನು ಕೇಳಿ ಆ ಗೋವಳಿಗನು ಅಲ್ಲಿಗೆ ಬಂದು ಕೂಸಿನ ರೂಪಲಾವಣ್ಯಗ ಳನ್ನು ನೋಡಿ ಬೆರಗಾಗಿ ಸ್ನೇಹರಸದಲ್ಲಿ ಮುಳುಗಿ ಹೋದನು. ಅವನು ಆ ಕೂಸನ್ನು ತನ್ನ ಮಗನಂತೆ ಕಾಪಾಡಹತ್ತಿದನು, ಮಗುವಿಗೆ ಚಂದ್ರಗುಪ್ತನೆಂಬ ಹೆಸರನ್ನಿಟ್ಟನು. ಚಂದ್ರಗುಪ್ತನು ಸ್ವಲ್ಪ ದೊಡ್ಡವನಾದ ಬಳಿಕ ಓರಿಗೆಯ ಹುಡುಗರೊಡನೆ ಅಂಗಳದಲ್ಲಿ ಆಟವಾಡಹತ್ತಿದನು. ಒಂದು ದಿವಸ ಚಂದ್ರಗುಪ್ತನು ಗೋವಳಿಗರ ಹುಡುಗರೊಡನೆ ಅರಸನಾಗಿ ಆಟವಾಡುತ್ತಿದ್ದನು. ಹುಡುಗರಲ್ಲಿ ಕೆಲವರು ಮಂತ್ರಿಗಳು, ಕೆಲವರು ಯುವರಾಜರು, ಕೆಲವರು ರಕ್ಷಕರು ಆಗಿದ್ದರು. ಕೆಲವರು ನ್ಯಾಯಾಧೀಶರಾಗಿ ನ್ಯಾಯವಿಚಾರಣೆ ಮಾಡಿ ಅಪರಾಧಿಗಳಿಗೆ ಶಿಕ್ಷೆಯನ್ನು ಕೊಡುತ್ತಿದ್ದರು. ಚಂದ್ರಗುಪ್ತನು ತಾನು ರಾಜ ನಾಗಿ ಮುಖ್ಯಸ್ಥಳದಲ್ಲಿ ವಿರಾಜಮಾನನಾಗಿದ್ದನು. ಈ ಹೊತ್ತಿಗೆ ಚಾಣಕ್ಯನು ಅದೇ ದಾರಿಯಿಂದ ಹೋಗುತ್ತಿದ್ದನು. ಚಂದ್ರಗುಪ್ತನ ಕಡೆಗೆ ಅವನ ಮನಸ್ಸೆಳೆಯಿತು. ಅವನು ಗೋವಳಿಗನಿಗೆ ನಾವಿರ ಮೊಹರುಗಳನ್ನು ಕೊಟ್ಟು ಚಂದ್ರಗುಪ್ತನನ್ನು ಬೇಡಿ ತೆಗೆದುಕೊಂಡನು. ಚಂದ್ರಗುಪ್ತನು ಚಾಣಕ್ಯನೊಡನೆ ಹೊರಟನು. ಚಾಣಕ್ಯನು ಚಂದ್ರಗುಪ್ತನ ಮೈಮೇಲೆ ಚಕ್ರವರ್ತಿ ಲಕ್ಷಣಗಳಿರುವದನ್ನು ಕಂಡ ನು, ರಾಜಪುತ್ರನಾದ ಪರ್ವತನಲ್ಲಿ ಅರಸುತನಕ್ಕೆ ಯೋಗ್ಯತೆಯಿರಲಿಲ್ಲ. ಚಾಣಕ್ಯನು ಈ ಇಬ್ಬರಲ್ಲಿ ಯಾವನು ಹೆಚ್ಚು ಬುದ್ಧಿವಂತನೂ, ಪ್ರತಿಭಾಶಾಲಿಯೂ ಇರುವನೆಂಬ ದನ್ನು ಪರೀಕ್ಷಿಸತೊಡಗಿದನು. ಒಂದು ದಿನ ದಾರಿಯಲ್ಲಿ ಚಾಣಕ್ಯನು ಈ ಇಬ್ಬರು ರಾಜಪುತ್ರರೊಡನೆ ಗಿಡದ ನೆಳಲಲ್ಲಿ ಮಲಗಿದ್ದನು. ಸ್ವಲ್ಪ ವೇಳೆಯಲ್ಲಿ ಚಾಣಕ್ಯನು ಅವರಿಬ್ಬರಿಗಿಂತ ಮುಂಚೆ ಎದ್ದು ರಾಜಪುತ್ರನಾದ ಪರ್ವತನನ್ನು ಎಚ್ಚರಿಸಿ ಆತನನ್ನು ಒಂದೆಡೆಗೆ ಕರೆದು “ ಈ ಕತ್ತಿಯನ್ನು ತೆಗೆದುಕೊಳ್ಳು; ಚಂದ್ರಗುಪ್ತನ ಕೊರಳಲ್ಲಿ ರೇಶಿಮೆ ಎಳೆಗಳಿಂದ ಕಟ್ಟಿದ ಸುವರ್ಣ ಯಜ್ಯೋಪವೀತವಿರುವದಷ್ಟೇ; ಅದನ್ನು