ಪುಟ:ಅಶೋಕ.djvu/೨೧

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಅಶೋಕ ಅಥವಾ ಪ್ರಿಯದರ್ಶಿ wwwMwwwmwwwwmmwwwMwww MMurwww.w.wordMM MA• ಆದರೆ ಇವನ ತರುವಾಯ ಯಾವ ಯಾವ ರಾಜವಂಶಗಳು ಗಿರಿವಜಪುರದಲ್ಲಿ ಆಳಿದ .. ಎಂಬ ವಿಷಯವು ಎಲ್ಲಿಯೂ ಬರೆಯಲ್ಪಟ್ಟಿಲ್ಲ. ಮಹಾಭಾರತದಲ್ಲಿಯೂ, ವಿಷ್ಣು ಪುರಾ ಣದಲ್ಲಿಯೂ ಜರಾಸಂಧನ ತಂದೆಯಾದ ಬೃಹದ್ರಥನ ಉಲ್ಲೇಖವುಂಟು, ಆತನ ಮುಂದೆ ಬೃಹದ್ರಥನ ವಂಶದ ೨೮ ಜನ ರಾಜರು ಮಗಧದಲ್ಲಿ ಆಳಿದ ಬಳಿಕ ಕೊನೆಯ ವನಾದ ರಿಪುಂಜಯನೆಂಬವನನ್ನು ಅವನ ಮಂತ್ರಿಯಾದ ಸುನೀಕನೆಂಬವನು ಕೊಂದು ತನ್ನ ಮಗನಾದ ಪ್ರದ್ಯೋತನಿಗೆ ಪಟ್ಟಗಟ್ಟಿದನು, ಪ್ರದ್ಯೋತವಂಶದ ಐವರು ಮಗಧ ರಾಜ್ಯವನ್ನಾಳಿದರು. ಇವರ ಆಳಿಕೆಯು ಬಹುತರ ಕ್ರಿ. ಪೂ. ೯೨೦ ರಲ್ಲಿ ಆರಂಭವಾಗು ತದೆ. ಇವರು ಸುಮಾರು ೧೩೮ ವರ್ಷ ಆಳಿದರೆಂದು ಅನುಮಾನ ಮಾಡುತ್ತಾರೆ. ಪ್ರದ್ಯೋತವಂಶವಾದ ಬಳಿಕ * ಶಿಶುನಾಗವಂಶದ ೧೧ ಜನ ಅರಸರು ಕ್ರಮವಾಗಿ ಆಳಿದರು. ಇವರ ಆಳಿಕೆಯ ಆರಂಭವು ಕ್ರಿ. ಪೂ. ೭೮೨ ರಲ್ಲಿ ಆಗುವದು. ಶಿಶುನಾಗ ವಂಶದ ಈ ೧೦ ಜನ ರಾಜರು ೩೩೨ ವರ್ಷ ಆಳಿದರು. ಬುದ್ದ ದೇವನ, ಮತ್ತು ಜೈನ ತೀರ್ಥಂಕರನಾದ ಮಹಾವೀರಸ್ವಾಮಿಯ ಸಮಕಾಲಿಕನೂ, ನೂತನರಾಜಗೃಹದ ಸ್ಥಾಪಕನೂ ಆದ ಬಿಂಬಿಸಾರರಾಜನು ಈ ಶಿಶುನಾಗವಂಶದಲ್ಲಿಯೇ ಹುಟ್ಟಿದವನು, ಇವನೇ ತನ್ನ ಆಳಿಕೆಯಲ್ಲಿ ಅಂಗರಾಜ್ಯವನ್ನು ಗೆದ್ದು ಮಗಧರಾಜ್ಯಕ್ಕೆ ಸೇರಿಸಿದನು. ಈ ವಂಶದ ಕೊನೆಯ ಅರಸನಾದ ಮಹಾನಂದಿಯೆಂಬವನು ಶೂದ್ರಜಾತಿಯ ಹೆಂಡ ತಿಯಲ್ಲಿ ನಂದಮಹಾಪದ್ಯನೆಂಬ ಮಗನನ್ನು ಹಡೆದನು. ಇವನಿಂದ ಮುಂದಿನ ವಂಶಕ್ಕೆ ನಂದವಂಶವೆಂಬ ಹೆಸರುಂಟಾಯಿತು. ಆತನ ಎಂಟುಜನ ಮಕ್ಕಳು ಕ್ರಮದಿಂದ ರಾಜ್ಯವಾಳಿದ ತರುವಾಯ ಸುಪ್ರಸಿದ್ದ ಮೌರ್ಯವಂಶದ ಅರಸರು ಭರತಖಂಡದ ಏಕಚಕ್ರಾಧಿಪತಿಗಳಾಗಿ ಆಳಿದರು. 'ಇಲ್ಲಿ ಶಿಶುನಾಗ, ನಂದ, ಮೌರ್ಯರಾಜರ ವಂಶಾವಲಿಯನ್ನು ಕೊಡುವೆವು. , , --- ..- - - - - - - - - -

  1. ವಿಷ್ಣು ಪುರಾಣದಲ್ಲಿಯೂ ವಾಯುಪುರಾಣದಲ್ಲಿಯೂ ಹೇಳಿದ ಶಿಶುನಾಗ, ನಂದ ವಂಶಗಳ ಆಳಿ ಕಯು ಕಾಲದ ಅವಧಿಯು ನಿಜವಲ್ಲವೆಂದು ಕೆಲವರು ಹೇಳುವರು, ಈ ಎರಡು ಪುರಾಣಗಳ ಮತದಿಂದ ಶಿಶುನಾಗ ಮತ್ತು ನಂದವಂಶಗಳ ಆಳಿಕೆಯು ಕಾಲವು ಕ್ರಮವಾಗಿ ೩೩೨ ಮತ್ತು ೧೦೦ ವರ್ಷಗಳು. ಆದರೆ ಈಗಿನ ಐತಿಹಾಸಿಕರು ಶಿಶುನಗವ:ರನ ಆಳಿಕೆಯು ಕಾಲವು ೨೩೯ ವರ್ಷಗಳೆ೦ದೂ, ನಂದವ೦ಶದ ಕಾಲವು ೪೦ ವರ್ಷಗಳೆ೦ದೂ ಸಿದ್ಧಪಡಿಸಲಿಚ್ಛಿಸುವರು. ಅವರ ಮತದಂತೆ ೬. ಪೂ. ೬೦೦ರ ಸಮಯ ದಲ್ಲಿ ಶಿಶುನಾಗವಂಶದವರೂ, ಕಿ, ಪೂ ೩೬೧ ರಲ್ಲಿ ನ೦ದನ೦ಶದ ರಾಜರೂ ನುಗಧದಲ್ಲಾಳುತ್ತಿದ್ದರು.