ಪುಟ:ಅಶೋಕ.djvu/೨೪

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಅಶೋಕ ಅಥವಾ ಪ್ರಿಯದರ್ಶಿ FAyyyyyrry///// - - -+ ' 'r y vY*//////v Prr//// ಯಾವಾಗಲೂ ಯುದ್ಧಕ್ಕೆ ಸಜ್ಜಾಗಿದ್ದವು. ಈ ಮೊದಲೇ ಪಂಚನದದಲ್ಲಿ ಮಹಾಶೂರ ನಾದ ಪುರುರಾಜನ ಪರಾಕ್ರಮಕ್ಕೆ ಅಲೆಕ್ಸಂದರನು ಬೆರಗಾಗಿದ್ದನು. ಈ ಸಮಯ ದಲ್ಲಿಯೇ ನಂದವಂಶದ ಹಗೆಯಾದ ಚಂದ್ರಗುಪ್ತನು ತನ್ನ ಆತ್ಮವನ್ನು ನೆರವೇರಿಸುವ ದಕ್ಕಾಗಿ ಆ ಗ್ರೀಕವೀರನಿಗೆ ಕೂಡಿದನು. ಇವರೀರ್ವರಲ್ಲಿ ಒಬ್ಬನು ಇಡಿ ಭೂಮಂಡಲ ವನ್ನೆಲ್ಲ ಜಯಿಸಬೇಕೆಂಬ ಮಹತ್ವಾಕಾಂಕ್ಷೆಯುಳ್ಳವನಾಗಿ ಭರತಖಂಡದಲ್ಲಿ ತನ್ನ ಅಧಿ ಕಾರವನ್ನು ಸ್ಥಾಪಿಸುವದಕ್ಕೆ ಹವಣಿಸುವವನು; ಕುಟಿಲನೀತಿಯಲ್ಲಿ ನಿಪುಣನಾದ ಇನ್ನೊಬ್ಬನು ಗ್ರೀಕರಿಂದ ಭರತಖಂಡವನ್ನು ರಕ್ಷಿಸುವದಕ್ಕೂ, ತನ್ನ ಏಕಚ್ಚತ್ರಾಧಿ ಪತ್ಯವನ್ನು ನೆಲೆಗೊಳಿಸುವದಕ್ಕೂ ಹವಣಿಸುವವನು, ಚಂದ್ರಗುಪ್ತನು ನಿಪುಣತೆಯಿಂದ ಅಲೆಕ್ಸಂದರನನ್ನು ಬದಿಗಿಟ್ಟು ತನ್ನ ವರ್ಚಸ್ಸನ್ನು ನೆಲೆಗೊಳಿಸಲಾರಂಭಿಸಿದನು. ಆದರೆ ಅಲೆಕ್ಸ೦ದರನಿಗೆ ಸ್ವಲ್ಪ ಕಾಲದಲ್ಲಿಯೇ ಚಂದ್ರಗುಪ್ತನ ಈ ಭಾವವು ಗೊತ್ತಾಗಲು ಅವನು ಗುಪ್ತವಾಗಿ ಚಂದ್ರಗುಪ್ತನ ಕೊಲೆಮಾಡುವ ವಿಚಾರದಲ್ಲಿದ್ದನು. ಇದನ್ನು ಚಂದ್ರಗುಪ್ತನು ತಿಳಿದು ಕೂಡಲೆ ಅವನ ಪಾಳಯವನ್ನು ಬಿಟ್ಟು ಓಡಿಹೋದನು. ಗೀಕ ವೀರನು ಪಂಜಾಬದ ಪೂರ್ವಭಾಗದಲ್ಲಿ ವಿಪಾಶಾನದಿಯ ವರೆಗಿನ ದೇಶವನ್ನು ಗೆದ್ದು ಒಂದುವರ್ಷ ೬ ತಿಂಗಳು 1 ಇದ್ದು ಬಳಿಕ ಈ ದೇಶವನ್ನು ಬಿಟ್ಟು ಮಿಸರದೇಶಕ್ಕೆ ಹೋದನು. ಹೋಗುವಾಗ ಮಗಧದೇಶವನ್ನು ಜಯಿಸುವ ಆಶೆಯನ್ನೂ ಬಿಟ್ಟು ಹೋದನು. ಕ್ರಿ. ಪೂ. ೩೨೩ರಲ್ಲಿ ಬಾಬಿಲನದಲ್ಲಿ ಅಲೆಕ್ಸಂದರನು ಮರಣಹೊಂದಿದನು. ಅವನ ಸಾಮಂತರು ಅವನ ರಾಜ್ಯವನ್ನೆಲ್ಲ ವಿಭಾಗಿಸಿ ಹಿಂದುಸ್ತಾನದಲ್ಲಿದ್ದ ಪ್ರದೇಶವನ್ನು ಈ ದೇಶದಲ್ಲಿದ್ದ ಗ್ರೀಕ ಅಧಿಕಾರಿಗಳ ವಶಕ್ಕೆ ಕೊಟ್ಟರು. ಅಲೆಕ್ಸಂದರನ ಆಕ್ರಮಣ ದಿಂದ ಭರತಖಂಡದ ಎಷ್ಟೋ ಭಾಗವು ಅರಾಜಕವಾಗಿತ್ತು; ಗ್ರೀಕರ ಪಾಳಯದಿಂದ ಓಡಿಹೋದ ಚಂದ್ರಗುಪ್ತನು ಆ ಭಾಗದಲ್ಲಿ ಬಲಿಷ್ಠವಾದ ಸೈನ್ಯವನ್ನು ಕೂಡಿಸಿ ಅದ ಕೈ ಯುದ್ದ ಶಿಕ್ಷಣವನ್ನು ಕೊಡತೊಡಗಿದನು. ಅಲೆಕ್ಸಂದರನ ಮರಣದ ತರುವಾಯ ಚಂದ್ರಗುಪ್ತನು ಭರತಖಂಡದಲ್ಲಿದ್ದ ಗ್ರೀಕರ ರಾಜ್ಯವನ್ನು ಆಕ್ರಮಿಸಿ ತನ್ನ ಅಪೂರ್ವ ಪರಾಕ್ರಮದಿಂದ ಅವರನ್ನು ಸಂಪೂರ್ಣವಾಗಿ ಜಯಿಸಿದನು, ಆ ರಾಜ್ಯವನ್ನು ವಶ ಮಾಡಿಕೊಂಡ ಬಳಿಕ ಮಗಧರಾಜ್ಯವನ್ನು ಮುತ್ತಿದನು. ಈ ಸಮಯದಲ್ಲಿ ಅಸಾಧಾ ರಣ ತೀಕ್ಷಬುದ್ಧಿಯುಳ್ಳ ಚಾಣಕ್ಯನೆಂಬ ರಾಜನೀತಿನಿಪುಣನಾದ ಪಂಡಿತನು ನಂದ ರಾಜರೊಡನೆ ತನಗಿದ್ದ ದ್ವೇಷವನ್ನು ತೀರಿಸಿಕೊಳ್ಳುವ ಸುಯೋಗವು ಒದಗಿದ್ದನ್ನು t ಹಿಂದುಕುಶವನ್ನು ದಾಟಿ ಸಿಂಧುದೇಶಕ್ಕೆ ಬರುವದಕ್ಕೆ ೧೦ ತಿಂಗಳುಗಳು ಹಿಡಿದಿದ್ದವು. ಪಶ್ಚಿಮ ಒ೦ದುಸ್ಥಾನದಲ್ಲಿ ೧೯ ತಿಂಗಳು ವಾಸಿಸಿದ್ದನು, ಮತ್ತು ಪಂಚನದದಿಂದ ಸಿ೦ಧುನದಿಯ ಮೇಲಿಂದ ಹಾಯು ತಿರುಗಿ ಹೋಗುವದಕ್ಕೆ ೭ ತಿ೦ಗಳು ಹಿಡಿದವು, ಒಟ್ಟು ೩ ವರ್ಷ ಗಳು,