ಪುಟ:ಅಶೋಕ.djvu/೩೨

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಅಶೋಕ ಅಥವಾ ಪ್ರಿಯದರ್ಶಿ, ೧೭' kvs vvvv/wwwMMwww ಗಿತ್ತು, ಪಶ್ಚಿಮಘಟ್ಟದಿಂದ ಕನ್ಯಾಕುಮಾರಿಯವರೆಗಿನ ಮಲಬಾರದಂಡೆಯು ಕೇರಲ ದೇಶವೆಂದು ಕರೆಯಲ್ಪಡುತ್ತಿತ್ತು, ಮೇಲೆ ಹೇಳಿದ ಈ ನಾಲ್ಕು ರಾಜ್ಯಗಳು ಮಗಧ ಸಾಮ್ರಾಜ್ಯದ ದಕ್ಷಿಣದ ಮೇರೆಯೆಂದು ಎಣಿಸಲ್ಪಡುತ್ತಿದ್ದವು, ಒಂದು ತುದಿಗೆ ಪೂರ್ವ ತೀರಕ್ಕಿರುವ ಈಗಿನ ಪಾಂಡಿಚೆರಿಯೂ, ಇನ್ನೊಂದು ತುದಿಗೆ ಈಗಿನ ಕಾನಾನೂರಿಗೆ ಸೇರಿದ ಪ್ರದೇಶವೂ ಮಗಧನಾಮಾಜ್ಯದ ದಕ್ಷಿಣದ ಮೇರೆಯೆಂದು ಹೇಳಬಹುದು. ಹಿಂದುಕುಶದಿಂದ ಹಿಮಾಲಯದ ಪೂರ್ವದ ತುದಿಯವರೆಗೆ ಮಗಧಸಾಮ್ರಾಜ್ಯದ ಉತ್ತರದ ಮೇರೆಯಿತ್ತು, ಈ ನಾಲ್ಕು ಮೇಕೆಗಳ ನಡುವಿನ ಪ್ರದೇಶವೆಲ್ಲ ಮಗಧಸಾ ಮ್ರಾಜ್ಯದ ಅಧಿಪತ್ಯವನ್ನು ಒಡಂಬಡುತ್ತಿತ್ತು. ಮಗಧ ಸಾಮ್ರಾಜ್ಯದಲ್ಲಿ ಮುಖ್ಯವಾಗಿ ೪ ಭಾಗಗಳಿದ್ದವು, ಅವು-ತಕ್ಷಶಿಲೆ. ಉಜ್ಜಯಿನಿ, ತೋಪಾಲಿ, ಸುವರ್ಣಗಿರಿ.* ತಕ್ಷಶಿಲೆಯು ಗಾಂಧಾರರಾಜ್ಯದ ರಾಜ ಧಾನಿಯಾಗಿತ್ತು. ಬುದ್ದ ದೇವನ ಕಾಲದಲ್ಲಿ ಗಾಂಧಾರರಾಜನಾದ ಪುಷಸತಿಯು, ಮಗಧರಾಜನಾದ ಬಿಂಬಿಸಾರನ ಬಳಿಗೆ ಒಬ್ಬ ರಾಯಭಾರಿಯನ್ನೂ, ಒಂದು ಪ್ರತ್ಯ. ವನ್ನೂ ಕಳುಹಿದ್ದನು. ಬಹು ಪ್ರಾಚೀನಕಾಲದಲ್ಲಿಯೂ ಮಗಧದ ಪ್ರಭಾವವು ನೆಲೆ ಗೊಂಡಿತ್ತು. ಪಂಜಾಬಕ್ಕೆ ಸೇರಿದ ರಾವಲಪಿಂಡಿ ಪ್ರದೇಶವು ಪ್ರಾಚೀನ ತಕ್ಷಶಿಲೆಯ ಸ್ಥಾನವೆಂದು ಈಗಿನ ಐತಿಹಾಸಿಕರು ಹೇಳುವರು. ತಕ್ಷಶಿಲೆಯು ಬಹು ಸಮೃದ್ಧ ವಾದ ಪ್ರಾಚೀನ ನಗರಿಯು. ಇದು ಒಂದು ಕಾಲದಲ್ಲಿ ಭರತಖಂಡದ ಶಿಕ್ಷಣದ ಕೇಂದ್ರಸ್ಥಾನವಾಗಿತ್ತು, ಮೌರ್ಯರಾಜರ ಕಾಲದಲ್ಲಿ ಇಲ್ಲಿ ಒಬ್ಬ ರಾಯಭಾರಿಯು ಇರುತ್ತಿದ್ದನು. ಅವನು ಇಡಿ ಪಂಜಾಬ ಮತ್ತು ಕಾಶ್ಮೀರ ಪ್ರದೇಶಗಳ ಕಾರಭಾರ ವನ್ನು ನೋಡುತ್ತಿದ್ದನು. ಉಜ್ಜಯಿನೀನಗರಿಯು ಅವಂತೀ ಪ್ರದೇಶದ ರಾಜಧಾನಿ ಯಾಗಿತ್ತು. ಮೌರ್ಯರಾಜರ ಆಳಿಕೆಯ ಕಾಲದಲ್ಲಿ ಭರತಖಂಡದ ಪಶ್ಚಿಮಭಾಗಕ್ಕೆ ಇದೇ ರಾಜಧಾನಿಯೆನಿಸಿತ್ತು. ಸುವರ್ಣಗಿರಿಯು ಎಲ್ಲಿತ್ತೆಂಬದು ಪೂರ್ಣವಾಗಿ ನಿಶ್ಚಯಿಸಲ್ಪಟ್ಟಿಲ್ಲ. ಖಾನ ದೇಶ ಜಿಲ್ಲೆಯೊಳಗಿನ ಸೋನಗಿರಿಯೇ ಪ್ರಾಚೀನ ಸುವರ್ಣಗಿರಿಯೆಂದು ಕೆಲವರು ಹೇಳುತ್ತಾರೆ, ಮತ್ತೆ ಕೆಲವರು ವರದಾರಾಜ್ಯದ ಪ್ರಾಚೀನ ರಾಜಧಾನಿಯಾದ ಸೋಣ ಗಡಕ್ಕೆ ಸುವರ್ಣಗಿರಿಯೆಂದು ಹೇಳುವರು. ಆದರೆ ಇದುವರೆಗೆ ಶೋಧಿಸಲ್ಪಟ್ಟ ಸಂಗ ತಿಗಳಿಂದ ಮೈಸೂರು ರಾಜ್ಯದ ಚಿತ್ರಕಲೆದುರ್ಗ ಜಿಲ್ಲೆಯಲ್ಲಿ ಪ್ರಾಚೀನ ಸುವರ್ಣಗಿರಿ ಯಿತ್ತೆಂದು ನಾವು ಊಹಿಸುತ್ತೇವೆ, ತೋಪಾಲಿಯು ಕಲಿಂಗಪ್ರದೇಶದ ರಾಜಧಾನಿ ಯು, ಅಶೋಕಮಹಾರಾಜನು ಕಲಿಂಗಪ್ರದೇಶವನ್ನು ಜಯಿಸಿದ್ದನು. ಚಂದ್ರಗುಪ್ತ

  • ಇದರ ವಿಸ್ತಾರವಾದ ವರ್ಣನೆಯು ಮುಂದಿನ ಅಧ್ಯಾಯದಲ್ಲಿ ಬಂದಿರುವದು.