ಪುಟ:ಅಶೋಕ.djvu/೩೪

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಅಶೋಕ - ಥವಾ ಪ್ರಿಯದರ್ಶಿ

  • ~ , , , , , ,
  • - * *

• • • • -” 2) `////// -+4 ಆಗಿನ ಸ್ಥಿತಿಯನ್ನು ಸ್ವಲ್ಪಮಟ್ಟಿಗೆ ಊಹಿಸಬೇಕಾಗಿರುವದು, ಆರ್ಯರ ದೃಷ್ಟಿಯು ಕ್ಷಣಭಂಗುರವೂ ದುಃಖಮಯವೂ ಆದ ಈ ಲೋಕದಿಂದ ಬಹಳ ಮೇಲೆ, ಆ ಜರಾ ಮರಣಾತೀತವಾದ ಅಮೃತಲೋಕದ ಮೇಲೆ ಇತ್ತು, ಹಿಂದುಶಾಸ್ತ್ರಗಳು, ಜಾತಕ ಮೊದಲಾದ ಬೌದ್ದ ಪಾಲಿ ಗ್ರಂಥಗಳು ಇವುಗಳಿಂದ ಈ ಸಾಮಾಜಿಕ ಸುಧಾರಣೆಯ ಜ್ಞಾನವು ಸ್ವಲ್ಪಮಟ್ಟಿಗೆ ಆಗುವದು. ಭರತವರ್ಷದಲ್ಲಿ ಆ ಕಾಲಕ್ಕೆ ಶಿಲ್ಪ ಮತ್ತು ವಾಣಿಜ್ಯ ಇವು ಎಲ್ಲ ಬಗೆಯಿಂದ ಉನ್ನತಿಯನ್ನು ಹೊಂದಿದ್ದವು, ಸಮಾಜದಲ್ಲಿ ಬೇರೆ ಬೇರೆ ಶಿಲ್ಪಿಗಳೂ, ಕಸಬುಗಾರರೂ ತಮ್ಮ ತಮ್ಮ ಪಂಗಡಗಳನ್ನು ಮಾಡಿಕೊಂಡು ಇದ್ದರು. ಪ್ರತಿಯೊಂದು ಪಂಗಡಕ್ಕೆ ಒಬ್ಬೊಬ್ಬ ನಾಯಕನಿರುತ್ತಿದ್ದನು. ಹಲವು ತರದ ಚಕ್ಕಡಿಗಳು, ಗಾಡಿಗಳು, ಹಡಗ ಗಳು, ಇವುಗಳನ್ನು ರಚಿಸುವದರಲ್ಲಿ ನಿಪುಣರಾದ ಬಡಗಿಗಳೂ, ಕೆಲಸಕ್ಕೆ ಉಪಯೋ ಗವಾಗುವ ಹಲವು ತರದ ಆಯುಧಗಳನ್ನೂ ಶಾಸ್ತ್ರಗಳನ್ನೂ ಸೂಜಿ ಮೊದಲಾದ ಸೂಕ್ಷ್ಮ ಕೆಲಸಗಳನ್ನೂ ಮಾಡುವದರಲ್ಲಿ ನಿಪುಣರಾದ ಕಮ್ಮಾರರೂ, ಬೆಳ್ಳಿ ಬಂಗಾರಗ ಳಿಂದ ಹಲವು ತರದ ಸುಂದರ ವಸ್ತುಗಳನ್ನೂ ಅಲಂಕಾರಗಳನ್ನೂ ಮಾಡಬಲ್ಲ ಸೊನ್ನ ಗಾರರೂ, ಕಲ್ಲಿನಿಂದ ಮನೆ ಮೊದಲಾದವನ್ನು ಕಟ್ಟಬಲ್ಲ ಸ್ಥಪತಿಗಳೂ, ಸ್ವದೇಶದ ಲ್ಲಿಯೂ ಪರದೇಶಗಳಲ್ಲಿಯೂ ವೆಚ್ಚವಾಗುವ ನೂಲಿನ ಮತ್ತು ರೇಶಿಮೆಯ ನಾಜೂಕು ಬಟ್ಟೆಗಳನ್ನೂ ಬೇರೆ ತರದ ವಸ್ತ್ರಗಳನ್ನೂ ನೆಯ್ಯುವದರಲ್ಲಿ ನಿಪುಣರಾದ ನೇಕಾರರೂ, ಹಲವು ಬಗೆಯ ಬೆಲೆಯುಳ್ಳ ಜೋಡುಗಳನ್ನೂ ಸೂಕ್ಷ್ಮ ಜರದ ಕೆಲಸವುಳ್ಳ ಬೇರೆ ಚರ್ಮದ ಒಡವೆಗಳನ್ನೂ ಮಾಡಬಲ್ಲ ಸಮ್ಮಗಾರರೂ, ಹಲವು ಪಂಗಡದ ಕುಂಬಾ ರರೂ, ಹಸ್ತಿದಂತದಿಂದ ದಿನದ ಉಪಯೋಗದ ಮತ್ತು ಬೇರೆ ಸುಂದರವಾದ ಒಡವೆ ಗಳನ್ನು ಮಾಡಬಲ್ಲ ಜನರೂ, ರತ್ನ ಕಾರರೂ, ಬಲೆಗಾರರೂ, ಮಾಂಸವ್ಯವಸಾಯಗಾ ರರೂ, ಬೇಟೆಯಿಂದ ಜೀವಿಸುವ ಬೇಡರೂ, ನಾಪಿತರೂ, ಮಾಲೆಗಾರರೂ, ಹೂಗಾ ರರೂ, ಸುಗಂಧದ್ರವ್ಯ ಮಾರುವವರೂ, ಸಮುದ್ರದಲ್ಲಿ ಸಂಚರಿಸುವ ನಾವಿಕರೂ, ಚಿತ್ರ ಗಾರರೂ, ಚೀನಗಾರರೂ ಮೊದಲಾದ ಕಸಬುಗಾರರು ಸಮಾಜದ ಕೊರತೆಗಳನ್ನು ಪೂರೈಸುವದಕ್ಕೂ ಸಮಾಜದ ಸುಖವನ್ನು ಹೆಚ್ಚಿಸಲಿಕ್ಕೂ ಗ್ರಾಮ ನಗರಾದಿಗಳ ಶೋ ಭೆಯನ್ನು ಹೆಚ್ಚಿಸಲಿಕ್ಕೂ ಕಾರಣವಾಗಿದ್ದರು. ಇದಲ್ಲದೆ ಅರಸರೂ, ಮಾಂಡಲಿಕರೂ ಇವರ ಆಶ್ರಯದಲ್ಲಿ ಇನ್ನೂ ಹಲವು ಜನ ಕಸಬುಗಾರರು ಇರುತ್ತಿದ್ದರು. ಮಾವುತರೂ, ನಾರಥಿಗಳೂ, ಧಾನುಷ್ಕರೂ, ಪದಾತಿಗಳೂ, ಕ್ರೀತದಾಸರೂ, ಅಡಿಗೆಯವರೂ ಸ್ಥಾನ ಗೃಹ ಸೇವಕರೂ, ಅಗಸರೂ, ನೇಕಾರರೂ ಕುಂಬಾರರೂ, ಲೇಖಕರೂ, ಜಮಾ ಖರ್ಚು ಬರೆಯುವವರೂ, ಗಾಯಕರೂ, ನರ್ತಕರೂ ಮೊದಲಾದವರಿಗೆ ರಾಜಾಶ್ರ ಯವು ದೊರೆಯುತ್ತಿತ್ತು.