ಪುಟ:ಅಶೋಕ.djvu/೩೮

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಅಶೋಕ ಅಥವಾ ಪ್ರಿಯದರ್ಶಿ. 58 27 / 3 - * - ** * * - * - * " = "- * ವರ್ಷವು ವ್ಯಾಕುಲಹೃದಯದಿಂದ ಆತ್ತೋದ್ದಾರಕ್ಕಾಗಿ ಭಗವಂತನ ಅವತಾರವಾಗ ಬೇಕೆಂದು ಬಯಸಹತ್ತಿತು. ಜ್ಞಾನಹೀನವಾದ ಕರ್ಮ ಕಾಂಡದಿಂದ ಪೀಡಿತರಾದ ಲಕ್ಷಾವಧಿ ಮಾನವರ ಗದ್ದದಿತ ಕಂಠದಿಂದ ಹೊರಟ ಕರುಣಧ್ವನಿಯು ಭಗವಂತನ ಕಿವಿಗೆ ಹೋಗಿ ತಾಕಿತು; ಭಾರತವರ್ಷದ ಭಾಗ್ಯವು ಮತ್ತೆ ತೆರೆಯಿತು. ಶುಭಮು ಹೂರ್ತದಲ್ಲಿ ಶುದ್ಧೋದನ ಮಹಾರಾಜನ ಐಶ್ವರ್ಯವಿಲಾಸಪೂರ್ಣ ವಾದ ಮಂದಿರದ ಲ್ಲಿ ತ್ರಿಲೋಕಪಾವನಿಯೂ, ಸರ್ವಲೋಕಹಿತಕಾಂಕ್ಷಿಣಿಯೂ ಆದ ಒಂದು ಮಹಾಶ ಕೈಯು ಸಿದ್ದಾರ್ಥನ ರೂಪದಿಂದ ಜಗತ್ತಿನಲ್ಲಿ ಆವಿರ್ಭವಿಸಿತು. ಭರತಖಂಡಕ್ಕೆ-ಕೇವಲ ಭರತಖಂಡಕ್ಕೇ ಏಕೆ, ಸಮಗ್ರ ಜಗತ್ತಿಗೇ ಆ ದಿನವು ಸ್ಮರಣೀಯ ದಿನವು. ಆ ಲೋ ಕಲಲಾಮಭೂತನಾದ ಮಹಾಪುರುಷನ ಅವತಾರದಿಂದ ವಸುಂಧರಾದೇವಿಯು ಧನ್ಯ ಳಾದಳು. ಮಾಯಾಮುಗ್ಗನಾದ ಶುದ್ಧೋದನ ಮಹಾರಾಜನು ಆತನನ್ನು ಹಲವು ಉಪಾಯಗಳಿಂದ ಸಂಸಾರದ ಆಶೆಗೊಳಗಾಗಿಸಬೇಕೆಂದು ಪ್ರಯತ್ನಿ ಸಿದನು. ಆದರೆ ಸ್ವತಃಸಿದ್ಧ ವೈರಾಗ್ಯವುಳ್ಳ, ಜೀವನ್ನು ಕನಾದ ಆ ಮಹಾಪುರುಷನನ್ನು ಯಾರು ತಡೆಯು ಬಲ್ಲರು? ಆಧಿವ್ಯಾಧಿಗಳಿಂದ ಪೀಡಿತವಾಗಿ ಜರಾಮರಣಗಳಿಗೆ ವಶವಾಗಿರುವ ಮಾನ ವರ ಕರುಣಧ್ವನಿಯು ನಡುನಡುವೆ ಆತನ ಮರ್ಮಸ್ಥಲಕ್ಕೆ ಮುಟ್ಟಲು ಸುಪ್ತಾಹತ ಕೇಸರಿಯೋಪಾದಿಯಲ್ಲಿ ಆತನು ವ್ಯಗ್ರನಾಗಿ ಹೋಗುತ್ತಿದ್ದನು. ವಿಶ್ವವ್ಯಾಪಿಯಾದ ದುಃಖಾಂಧಕಾರವು ಆತನ ಚಿತ್ತಾಕಾಶದಲ್ಲಿ ಪಸರಿಸಿ ಆತನಿಗೆ ಪೀಡೆಯನ್ನುಂಟು ಮಾ ಡಿತು. ಸಿದ್ದಾರ್ಥನಿಗೆ ಜಗತ್ತಿನ ಜೀವರಾಶಿಯೆಲ್ಲ ಮಾಯಾಮೂಲಕವಾದ ಈ ಸಂಸಾ ರನಾಗರದಲ್ಲಿ ಮುಳುಗಿರುತ್ತದೆಯೆಂದೂ, ಈ ಸಂಸಾರವು ಪ್ರವಾಹದ ನೀರಿನಂತೆ ನಿರಂ ತರಗತಿಶೀಲವೂ, ನೀರಮೇಲಿನ ಗುಳ್ಳೆಯಂತೆ ಕ್ಷಣಭಂಗುರವೂ ಆಗಿರುತ್ತದೆಯೆಂದೂ, ಚೀವರಾಶಿಯು ಸುಖದುಃಖರೂಪವಾದ ಚಕ್ರದ ಸುತ್ತಿನಲ್ಲಿ ಸಿಕ್ಕು ಜಿಬೈ ಬಡಿಯುತ್ತಿ ರುವದೆಂದೂ ತೋರಿತು. ಆದದರಿಂದ ಈ ಅಸಹಾಯವಾದ ಮಾನವ ಸಮಾಜವನ್ನು ದುಃಖದ ಅಮರಿಕೆಯಿಂದ ಬಿಡಿಸಿ ಅದಕ್ಕೆ ಮುಕ್ತಿಯ ಮಾರ್ಗವನ್ನು ತೋರಿಸಬೇ ಕೆಂದು ಸಿದ್ದಾರ್ಥನು ಸಂಕಲ್ಪ ಮಾಡಿದನು. ಅರ್ಧಯುಗದ ವರೆಗಿನ ನಿರಂತರವಾದ ಸಾಧನದ ಬಲದಿಂದ• ಆತನ ಸಮಸ್ಯ ವಾಸನಾವೃತ್ತಿಗಳು ಸಮೂಲ ನಾಶವಾದವು. ಬಳಿಕ ಪೂರ್ಣ ಶಾಂತಮ್ಮ, ಉಪರತ ನೂ ಆಗಿ ಆತನು ಗಾಳೆಯಿಂದ ಹೊಯ್ದಾಡದ ದೀಪದಂತೆ ಇದ್ದು ಕೊಂಡು ಬೋಧಿ ವೃಕ್ಷದ ಬುಡದಲ್ಲಿ ನಿರ್ವಾಣವನ್ನು ಇಲ್ಲವೆ ಬುದ್ಧತ್ವವನ್ನು ಪಡೆದನು. ಬಳಿಕ ಬುದ್ದ ದೇವನು ಭಿಕ್ಷುಕನ ವೇಷದಿಂದ ಮನೆಮನೆಗೆ ಹೋಗಿ ಆ ಮಹಾರತ್ನ ವನ್ನು ದಾನ ಮಾಡಹತ್ತಿದನು. ತೇಜಃಪುಂಜನಾಗಿ, ಉರಿಯುವ ಅಗ್ನಿಯಂತೆ ಪ್ರಕಾಶಿಸುತ್ತಿರುವ ಆ ಮಹಾಗುರುವಿನ ಚರಣಗಳ ಮೇಲೆ ಲಕ್ಷಾವಧಿ ಜನರು ಭಕ್ತಿಭಾವದಿಂದ ಬಿದು