ಪುಟ:ಅಶೋಕ.djvu/೪೦

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಆಶೋಕ ಅಥವಾ ಪ್ರಿಯದರ್ಶಿ. ೨೫ •••• -ha r///// ಅಭಿವೃದ್ಧಿಯೂ ಆತನಿಂದಲೇ ಮಾಡಲ್ಪಟ್ಟವು. ಅಶೋಕನ ವಿಚಿತ್ರವಾದ ಚರಿತ್ರವೂ ಅಪೂರ್ವವಾದ ಕೀರ್ತಿಯೂ ಗತಕಾಲದ ತೆರೆಯಲ್ಲಿ ಇದುವರೆಗೆ ಮರೆಯಾಗಿದ್ದವು. ಸಂಸ್ಕೃತ ಗ್ರಂಥಗಳಲ್ಲಿ ಅಶೋಕನ ವಿಷಯವಾಗಿ ಬಹುಸ್ವಲ್ಪ ಉಲ್ಲೇಖವುಂಟು. ಆದರೆ ಆತನು ಕಲ್ಲಿನಲ್ಲಿ ಕೊರೆಸಿದ ಲಿಪಿಗಳು ಈಗ ೨ ನಾವಿರ ವರ್ಷಗಳ ಪೂರ್ವದ ಇತಿ ಹಾಸವನ್ನು ಎದೆಯಮೇಲಿಟ್ಟು ಕೊಂಡು ನಿಃಶಬ್ದವಾಗಿ ನಿಂತಿರುವವ, ಭಾರತವಾಸಿ ಗಳು ಯಾರೂ ಆ ನಿಃಶಬ್ದವಾದ ಇತಿಹಾಸದ ಮೇಲೆ ಮೊದಲು ದೃಷ್ಟಿಯನ್ನಿಡಲಿಲ್ಲ. ಯಾವನು ಭರತವರ್ಷ ದ ಚಕ್ರವರ್ತಿಗಳಿಗೆ ಚೂಡಾಮಣಿಯೆನಿಸಿರುವನೋ, ಯಾವನ ರಾಜ್ಯ ಶಾಸನಪದ್ಧತಿಯು ಅತ್ಯುತ್ತಮವಾಗಿತ್ತೋ, ಯಾವನ ದಯೆಯ, ಧರ್ಮವೂ ಲಕ್ಷಾವಧಿ ಜನರಿಗೆ ನಿರ್ಮಲವಾದ ಆನಂದವನ್ನು ೦ಟುಮಾಡಿದವೋ ಆ ( ದೇವಾನಾಂ ಪ್ರಿಯಃ ಪ್ರಿಯದರ್ಶಿ ” ಅಶೋಕನ ವರ್ತಮಾನವು ಭಾರತವಾಸಿಗಳಿಗೆ ತಿಳಿದಿರಲಿಲ್ಲ. ಸರಸ್ವತಿಯ ವರಪುತ್ರರೆನಿಸಿದ ವ್ಯಾಸವಾಲ್ಮೀಕಿಗಳು ಅಶೋಕಚರಿತ್ರವನ್ನು ರಚಿಸಲಿಲ್ಲ. ಅಶೋಕನ ಆದರ್ಶಭೂತವಾದ ಜೀವನಚರಿತ್ರವನ್ನು ಭರತವರ್ಷದ ಜನಸಮಾಜವು ಸಮಾಲೋಚನೆಮಾಡಲಿಲ್ಲ. ಯಾವನು ರಾಜ್ಯದಲ್ಲಿ ಜೀವಹಿಂಸೆಯನ್ನು ಹೋಗಲಾ ಡಿಸಿ ಅಹಿಂಸಾಮೂಲಕವಾದ ಧರ್ಮವನ್ನು ಪ್ರಸಾರಗೊಳಿಸಿದನೋ, ಯಾವನು ಲೋಕಕಲ್ಯಾಣಕ್ಕಾಗಿ ಸಮುದ್ರಾಂಕಿತ ಪೃಥ್ವಿಯ ಪತಿಯಾಗಿದ್ದರೂ ವಿರಕ್ತನಂತೆ ಇದ್ದನೋ, ಯಾವನು ಮರ್ತಿಮಂತವಾದ ನ್ಯಾಯ-ಧರ್ಮ-ದಯೆಗಳೋ ಎಂಬಂತೆ ಒಪ್ಪುತ್ತಿದ್ದನೋ ಆ ಅಶೋಕನ ಜೀವನಚರಿತ್ರವು ಭಾರತೀಯರ ಕಂಠದಿಂದ ಉಚ್ಛರಿ ಸಲ್ಪಡಲಿಲ್ಲ. ಭಾರತವಾಸಿಗಳು ಅವನನ್ನು ಮರೆತುಬಿಟ್ಟಿದ್ದರು. ಶುಭಮುಹೂರ್ತದಲ್ಲಿ ಯುರೋಪೀಯ ಐತಿಹಾಸಿಕರ ಶೋಧಕ ಬುದ್ದಿ ಪ್ರವಾಹವು ಭರತಖಂಡಕ್ಕೆ ಅಭಿಮುಖ ವಾಗಿ ಹರಿದುಬಂದಿತು. ಆದದರಿಂದಲೇ ಈಗ ನಾವು ಮಹಾರಾಜ-ಚಕ್ರವರ್ತಿ-ಅಶೋ ಕನು ನಮ್ಮ ದೇಶದವನೆಂದು ತಿಳಿದು ಗೌರವಹೊಂದಲಹ- ರಾಗಿರುವೆವು. ಇಂಗ್ಲಿಶ ಐತಿಹಾಸಿಕ ಪಂಡಿತರ ಪ್ರಯತ್ನ ದಿಂದ ನೇಪಾಲದಲ್ಲಿದ್ದ ಅಶೋಕಾವ ದಾನವು ಪ್ರಚಾರಕ್ಕೆ ಬಂದಿತು. ಸಿಂಹಲದಲ್ಲಿ ಪಾಲೀಭಾಷೆಯ ದ್ವೀಪವಂಶದಲ್ಲಿ ಅಶೋಕಚರಿತ್ರವು ವರ್ಣಿತವಾಗಿರುವದು. ವಿನಯದ ಭಾಷ್ಯದಲ್ಲಿ ಬುದ್ಧ ಘೋಷನು ಅಶೋಕಚರಿತ್ರದ ಸಮಾಲೋಚನೆ ಮಾಡಿರುವನು. ಸಿಂಹಲದ ಮಹಾವಂಶದಲ್ಲಿ ಹಲವು ಐತಿಹಾಸಿಕ ಮೂಲ ಸಂಗತಿಗಳು ಸಂಗ್ರಹಿಸಲ್ಪಟ್ಟಿರುವವು, ಈ ಎಲ್ಲ ವಿಷಯ ಗಳು ಇಷ್ಟು ದಿವಸಗಳವರೆಗೆ ಜನರ ಕಣ್ಣಿಗೆ ಮರೆಯಾಗಿದ್ದವು, ಯುರೋಪೀಯ ಐತಿಹಾಸಿಕರ ಪ್ರಯತ್ನ ದಿಂದಲೇ ಅವೆಲ್ಲವು ಜನಸಮೂಹದಲ್ಲಿ ಪ್ರಚಾರಕ್ಕೆ ಬಂದವು. ಅಸಾಧಾರಣ ಬುದ್ಧಿಶಕ್ತಿಯುಳ್ಳ ಜೇಮ್ಸ್ ಪ್ರಿನ್ಸಿಪನು ಭರತಖಂಡದ ಐತಿಹಾಸಿಕ ತತ್ವ ಗಳನ್ನು ಶೋಧಿಸುವದಕ್ಕಾಗಿ ಈ ದೇಶಕ್ಕೆ ಬಂದಿದ್ದನು. ಆ ಮಹಾರಾಯನು ಬಂದ ವೇಳೆಯು ಶುಭಮುಹೂರ್ತವೇ ಸರಿ. ಆತನ ಪ್ರತಿಭೆ, ಗಂಭೀರವಾದ ಅಂತರ್ದೃಷ್ಟಿ