ಪುಟ:ಅಶೋಕ.djvu/೪೪

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

.ಅಶೋಕ ಅಥವಾ ಪ್ರಿಯದರ್ಶಿ. ರ್೨ MMಯ MMMJ/V//www - ಚಂದ್ರಗುಪ್ತ ಚಕ್ರವರ್ತಿಯು *೩೪ ವರ್ಷ ರಾಜ್ಯವಾಳಿದನು, ಅವನ ಮಗ ನಾದ ಬಿಂದುಸಾರನು ೨೮ ವರ್ಷ ಆಳಿದನು. ಬಿಂದುಸಾರನಿಗೆ ಆತನ ೧೬ ಜನ ರಾಣಿ ಯರಲ್ಲಿ ಅಶೋಕನನ್ನು ಹಿಡಿದು ೧೦೧ ಜನ ಮಕ್ಕಳು ಹುಟ್ಟಿದರು. ಅವರಲ್ಲಿ ಸುಮ ನನು ಜೈಷ್ಣನು, ತಿಷ್ಯನು ಕನಿಷ್ಠನು, ಕುಮಾರನಾದ ಅಶೋಕನು ಬಿಂದುಸಾರನ ಆಳಿಕೆಯಲ್ಲಿ ಭರತಖಂಡದ ಪಶ್ಚಿಮಭಾಗದ ರಾಜಪ್ರತಿನಿಧಿಯಾಗಿದ್ದನು. ಕೆಲವು ವರ್ಷಗಳು ಕಳೆದ ಬಳಿಕ ಬಿಂದುನಾರನು ದೊಡ್ಡ ಬೇನೆಯಿಂದ ಹಾಸಿಗೆಹಿಡಿದನು. ಅಶೋಕನು ಈ ಸುದ್ದಿಯನ್ನು ಕೇಳಿದೊಡನೆ ಉಜ್ಜಯಿನಿಯಿಂದ ಪಾಟಲಿಪುತ್ರಕ್ಕೆ ಬಂದನು. ಮುಂದೆ ಬಿಂದುನಾರನು ಮರಣಹೊಂದಲು ಅಶೋಕನು ರಾಜ್ಯಲೋಭ ದಿಂದ ಯುವರಾಜನಾದ ಸುಮನನನ್ನೂ ಉಳಿದ FF ಜನ ಅಣ್ಣ ತಮ್ಮಂದಿರನ್ನೂ ಕೊಂದನು. ಎಲ್ಲಕ್ಕೂ ಚಿಕ್ಕ ತಮ್ಮನಾದ ತಿಷ್ಯನನ್ನು ಮಾತ್ರ ಕೊಲ್ಲಲಿಲ್ಲ. ಈ ಪ್ರಕಾರ ರಕ್ತದ ಕಾಲುವೆಯನ್ನು ಹರಿಸಿ ಅಶೋಕನು ಮಗಧದ ಸಿಂಹಾಸನವನ್ನೇರಿದನು. ಕ್ರಮದಿಂದ ಆತನು ಭರತಖಂಡದಲ್ಲಿ ಏಕಚ್ಚತ್ರ ಸಾಮ್ರಾಜ್ಯವನ್ನು ಸ್ಥಾಪಿಸಿದನು. ಆದರೆ ಭ್ರಾತೃಹತ್ಯಾದೋಷದಿಂದ ಎಲ್ಲರೂ ಆತನಿಗೆ ಚಂಡಾಶೋಕನೆಂದು ಕರೆಯ ಲಾರಂಭಿಸಿದರು. ಯುವರಾಜನಾದ ಸುಮನನ ಕೊಲೆಯಾದಾಗ ಆತನ ಹೆಂಡತಿಯು ಗರ್ಭಿಣಿ ಯಾಗಿದ್ದಳು, ಈ ಭಯಂಕರವಾದ ಕೊಲೆಯ ವರ್ತಮಾನವನ್ನು ಕೇಳಿ ಆಕೆಯ ಎದೆ ಯೊಡೆಯಿತು. ಜೀವದ ಅಂಜಿಕೆಯಿಂದಲೂ, ಗರ್ಭವನ್ನು ಕಾಯ್ದು ಕೊಳ್ಳುವ ಆಶೆ ಯಿಂದಲೂ ಅವಳು ಯಾರಿಗೂ ತಿಳಿಯದಂತೆ ಅರಮನೆಯನ್ನು ಬಿಟ್ಟು ಪಟ್ಟಣದ ಪೂರ್ವ ದಿಕ್ಕಿನ ಅಗಸೆಯಿಂದ ಹೊರಬಿದ್ದು ಸಮೀಪದ ಒಂದು ಕಾಡನ್ನು ಸೇರಿದಳು. ಆ ಕಾಡಿನಲ್ಲಿ ಅಲ್ಲಲ್ಲಿ ಚಂಡಾಲರು ವಾಸಮಾಡಿಕೊಂಡಿದ್ದರು. ಅನಾಥಳೂ ನಿರಾಶ್ರ ಯಳೂ ಆದ ಯುವರಾಜಪತ್ನಿ ಯು ಅರಣ್ಯದಲ್ಲಿ ದಾರಿಯ ನಡೆದು ಬಳಲಿದಳು. ಎಂದೂ ಸೂರ್ಯದರ್ಶನವಿಲ್ಲದ ಯುವರಾಜಪತ್ತಿ ಯು ಮುಂದೆ ಒಬ್ಬ ಚಂಡಾಲನಾಯ ಕನ ಕಣ್ಣಿಗೆ ಬಿದ್ದಳು, ಚಂಡಾಲರೊಡೆಯನು ಆಕೆಯ ವರ್ತಮಾನವನ್ನು ಕೇಳಿ ಕೊಂಡು ಅತ್ಯಾದರದಿಂದ ಅವಳಿಗೆ ನಿನ್ನ ನ್ನು ಕಾಪಾಡುತ್ತೇನೆಂದು ಮಾತುಕೊಟ್ಟನು. ಈ ವಿಪನ್ನಾವಸ್ಥೆಯಲ್ಲಿ ಆಕೆಯು ಸರ್ವಲಕ್ಷಣಸಂಪನ್ನ ನಾದ ಕುಮಾರನನ್ನು ಹೆತ್ತಳು. ಚಂಡಾಲರಾಜನು ಕನಿಕರಬಟ್ಟು ಮನಃಪೂರ್ವಕವಾಗಿ ಆ ತಾಯಿಮಕ್ಕಳ ಪರಾಮರಿ ಕೆಯನ್ನು ಮಾಡತೊಡಗಿದನು, ಚಂಡಾಲರ ಆದರಪೂರ್ವಕವಾದ ಸೇವೆಯಿಂದ ಆ ಕೂಸು ದಿನದಿನಕ್ಕೆ ಬಿದಿಗೆಯ ಚಂದ್ರನಂತೆ ಬೆಳೆದು ತನ್ನ ಲಾವಣ್ಯದಿಂದ ವನಪ್ರದೇಶ ವನ್ನೆಲ್ಲ ಬೆಳಗಹತ್ತಿತು, ಚಂಡಾಲಬಾಲಕರೊಡನೆ ಆ ಕುಮಾರನು ಆಡಹತ್ತಿದನು. --> +4

  • ನಿಜವಾದ ಆಳಿಕೆಯ ಕಾಲನು ೨೪ ವರ್ಷಗಳು.