ಪುಟ:ಅಶೋಕ.djvu/೪೭

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೬೨ ಅಶೋಕ ಅಥವಾ ಪ್ರಿಯದರ್ಶಿ. ••••••••••. ” # # # # # # " ** ' +"/> /_ //// "* * ”” •••••4, ಸವು ಮುಕ್ತದ್ವಾರವಾಯಿತು, ಪ್ರತಿದಿವಸ ಬೊಕ್ಕಸದಿಂದ ೪ ಲಕ್ಷ ರತ್ನ ಗಳು ಖರ್ಚಾ ಗುತ್ತಿದ್ದವೆಂದು ಪ್ರವಾದವುಂಟು, ಅಶೋಕನು ವಾಸನಾರಹಿತರಾದ ವಿರಕ್ತ ಭಿಕ್ಷುಗ. ಳೊಡನೆ ಧರ್ಮವಿಚಾರದಲ್ಲಿ ಕಾಲಕಳೆಯತೊಡಗಿದನು. ಭಿಕ್ಷುಗಳು ಬುದ್ದದೇವನ ಅಮೃತಮಯವಾದ ಉಪದೇಶಗಳನ್ನು ಚಕ್ರವರ್ತಿಗೆ ಶ್ರವಣಮಾಡಿಸಹತ್ತಿದರು. ಒಂದು ದಿವಸ ಅಶೋಕನು ನೆರೆದ ಭಿಕ್ಷುಗಳನ್ನೆಲ್ಲ ಏಕಾಂತದಲ್ಲಿ ಕರೆದು ಎಲೈ ಭಿಕ್ಷು ಗಳೇ ತಾವು ನನ್ನ ಬಳಿಯಲ್ಲಿ ದಿನಾಲು ಶ್ರವಣಮಾಡಿಸುತ್ತಿರುವಂಥ, ಲೋಕ ಕಲ್ಯಾಣ ಕ್ಯಾಗಿ ಬುದ್ದ ದೇವನು ಕೊಟ್ಟ ಉಪದೇಶಗಳ ಸಂಖ್ಯೆಯು ಎಷ್ಟು? ಎಂದು ಕೇಳಿದನು. ಅದಕ್ಕೆ ಅವರು ( ಅವುಗಳನ್ನೆಣಿಸುವದು ಅನಾಧ್ಯವು; ಕ್ಷುಬ್ದ ವಾದ ಮಹಾನಾಗರ ದಲ್ಲಿ ಮೇರೆಯಿಲ್ಲದೆ ಅಸಂಖ್ಯವಾಗಿ ಏಳುವ ಅಲೆಗಳನ್ನು ಯಾರಾದರೂ ಎಣಿಸಬಲ್ಲ ರೋ? ಮಹಾರಾಜರೇ, ಪ್ರಾಣಿಗಳ ಕಷ್ಟವನ್ನು ನೋಡಿ ವ್ಯಥೆಬಟ್ಟು ಸರ್ವಸಂಗ ವನ್ನು ತೊರೆದ ಕರುಣಾಮಯನಾದ ಬುದ್ದದೇವನು ಎಷ್ಟು ಪ್ರಾಣಿಗಳನ್ನು ಎಷ್ಟು ಉಪದೇಶಗಳಿಂದ ಅಜ್ಞಾನಾಂಧಕಾರದಿಂದ ಬಿಡುಗಡೆಮಾಡಿದನೆಂಬದರ ಲೆಕ್ಕವನ್ನು ಯಾರು ಮಾಡಬಲ್ಲರು ? ಆದರೂ ಭಾವಿ- ಮಾನವ-ಸಮಾಜದ ಕಲ್ಯಾಣಕ್ಕಾಗಿ ಸ್ಥವಿರ ರೇವತನೂ ಆನಂದನೂ ಪ್ರಯತ್ನದಿಂದ ಕಾಯ್ದಿಟ್ಟಂಥ ಆ ಉಪದೇಶಗಳ ಸಂಖ್ಯೆಯು ೮೪ ನಾವಿರವಾಗುವದು. ” ಎಂದು ಹೇಳಿದರು. ಭಿಕ್ಷುಗಳು ಹೇಳಿದ ಈ ಮಾತನ್ನು ಕೇಳಿ ಅಶೋಕನು ಭರತಖಂಡದ ೮೪ ನಾವಿರ ಗ್ರಾಮಗಳಲ್ಲಿ ಬುದ್ದದೇವನ ೮೪000 ಉಪದೇಶಗಳಲ್ಲಿ ಒಂದಕ್ಕೊಂದರಂತೆ ಸಂಭವನ್ನೂ ವಿಹಾರವನ್ನೂ ಕಟ್ಟಿಸುವ ಸಂಕಲ್ಪ ಮಾಡಿದನು. ರಾಜನೇ ನಿಶ್ಚಯಿಸಿದ ಬಳಿಕ ಕೇಳುವದೇನು ? ಒಡನೆಯೆ ಪಾಟಲಿಪುತ್ರದಲ್ಲಿ ಅಶೋಕಾರಾಮ ”ವು ಕಟ್ಟ ಲ್ಪಟ್ಟಿತು. ಬೇರೆ ವಿಹಾರಗಳನ್ನು ಕಟ್ಟಿಸುವದಕ್ಕೆ ರಾಜಾಜ್ಞೆಯಾಯಿತು. ಮೂರು ವರ್ಷಗಳಲ್ಲಿ ಎಲ್ಲ ವಿಹಾರಗಳ, ಸ್ಮಾರಕ ಸ್ತಂಭಗಳೂ ಸಿದ್ಧವಾದವು. ಎಲ್ಲವೂ ಸಿದ್ಧ ವಾದ ಸುದ್ದಿಯು ಒಂದೇ ದಿವಸ ರಾಜನಿಗೆ ಮುಟ್ಟಿತು. ಆಗ ಅಶೋಕನು ದಿವ್ಯದೃಷ್ಟಿ ಯನ್ನು ಪಡೆದು, ಇದ್ದಲ್ಲಿಯೇ ತಾನು ಕಟ್ಟಿಸಿದ ವಿಹಾರಗಳನ್ನು ನೋಡಿ ರೋಮಾಂಚಿ ತನಾದನೆಂದು ದಂತಕಥೆಯುಂಟು. ಆಗ ಮಹಾರಾಜನು ಒಂದು ದೊಡ್ಡ ಸಭೆಯನ್ನು ಕರೆದನು, ಆ ಸಭೆಗೆ ಲಕ್ಷಾವಧಿ ಬೌದ್ಧ ಭಿಕ್ಷುಗಳೂ, ಭಿರ್ಕ್ಷುಣಿಗಳೂ ಬಂದಿದ್ದರು. ಅಶೋಕನು ತಾನೂ ಭಿಕ್ಷುಸಂಘದ ನಡುವೆ ಬಂದು ಕುಳಿತನು. ಆತನ ಆಶ್ಚರ್ಯಕರ ವಾದ ಧರ್ಮಾನುರಾಗವನ್ನು ನೋಡಿ ಎಲ್ಲರೂ ಆತನಿಗೆ ( ಧರ್ಮಾಶೋಕ ”ನೆಂದು ಕರೆದರು. ಅಶೋಕನು ತ್ರಿರತ್ನ ವನ್ನು ಆಶ್ರಯಿಸಿ ಸಂಪಾದಿಸಿದ ಗೌರವವು ಅಂತರಿಕ್ಷ ದಲ್ಲಿಯೂ, ಪಾತಾಲದಲ್ಲಿಯೂ ಸಾವಿರ ಯೋಜನಗಳವರೆಗೆ ಹಬ್ಬಿತು. * ಸ್ವರ್ಗವಾಸಿ ಈ ಮಹಾವಂಶ ೫ನೆಯ ಅಧ್ಯಾಯ.