ಪುಟ:ಅಶೋಕ.djvu/೫೨

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಅಶೋಕ ಅಥವಾ ಪ್ರಿಯದರ್ಶಿ, ೩೬ (\vy\\r\/yyyy \ \y V/vvvvv//vvv r\r\ N v /su vy 14 vvvvvvvy ಮಕ್ಕಳಿದ್ದರು. ಆತನ ಮುಖ್ಯ ಪಟ್ಟದರಸಿಯ ಹೆಸರು ಧಮ್ಮಾ ಎಂಬದು, ಆಕೆಯ ಹೊಟ್ಟೆಯಲ್ಲಿ ಇಬ್ಬರು ಮಕ್ಕಳು ಹುಟ್ಟಿದರು, ಜೈಷ್ಯ ಪುತ್ರನಾದ ಅಶೋಕನು ಗರ್ಭ ದಲ್ಲಿರುವಾಗ ರಾಣಿಯು ಒಂದು ದಿವಸ ಒಂದು ಸ್ವಷ್ಟವನ್ನು ಕಂಡಳು; ಅದರಲ್ಲಿ ಅವಳು ಒಂದು ಪಾದವನ್ನು ಚಂದ್ರನಮೇಲೂ ಇನ್ನೊಂದನ್ನು ಸೂರ್ಯನಮೇಲೂ ಇಟ್ಟು ನಿಂತತೆಯೂ, ಆಕಾಶದಲ್ಲಿರುವ ನಕ್ಷತ್ರಪುಂಜವನ್ನು ಗ್ರಾಸಮಾಡುವಂತೆಯೂ, ಮೇಘ ಮಂಡಲವನ್ನು ಭಕ್ಷಣಮಾಡುವಂತೆಯೂ, ಒಮ್ಮೊಮ್ಮೆ ಗಿಡಗಳ ಎಲೆಗಳನ್ನು ಒಮ್ಮೊಮ್ಮೆ ಕೀಟಪತಂಗ ಮೊದಲಾದವುಗಳನ್ನು ತಿನ್ನುವಂತೆಯೂ ಕಂಡಳು, ಈ ಸ್ವಷ್ಟವನ್ನು ಕೇಳಿ ದೈವಜ್ಞರು ಅದರ ಅರ್ಥವನ್ನು ಈ ಮೇರೆಗೆ ಹೇಳಿದರು:-ಗರ್ಭ ಸ್ಥಿತನಾದ ಮಗನು ಸಮಗ್ರ ಜಂಬೂದ್ವೀಪದ ಅಧಿಪತಿಯಾಗುವನು; ಅಣ್ಣ ತಮ್ಮಂದಿ ರನ್ನು ಕೊಲ್ಲುವನು. ಭ್ರಷ್ಟಾಚಾರವುಳ್ಳವರನ್ನು ಸಂಘದಿಂದ ದೂರಮಾಡುವನು. ಮೇಲೂ ಕೆಳಗೂ ಒಂದು ಯೋಜನದವರೆಗೆ ಆತನ ಪ್ರಭಾವವು ಪಸರಿಸುವದು. ೧೬ ವರ್ಷದ ವಯಸ್ಸಿನವನಾದಾಗ ಅಶೋಕನು ಉಜ್ಜಯಿನಿಯ ರಾಜಪ್ರತಿನಿಧಿ ಯಾಗಿ ನಿಯಮಿಸಲ್ಪಟ್ಟನು. ಆತನು ೯ ವರ್ಷ ಅಲ್ಲಿ ಇದ್ದನು. ಈ ಸಮಯದಲ್ಲಿ ಅಶೋಕನು ತಂದಗೆ ಬಹಳ ಜಡ್ಡಾಗಿರುವದೆಂದು ಕೇಳಿ ಕೂಡಲೆ ಪಿತೃಭಕ್ತಿಯಿಂದ ಪಾಟಲಿಪುತ್ರಕ್ಕೆ ಬಂದನು. ಅವನು ಬಂದ ಸ್ವಲ್ಪ ದಿವಸಗಳಲ್ಲಿಯೇ ಬಿಂದುಸಾರನು ಮಡಿದನು. ತಂದೆಯ ಮರಣದ ತರುವಾಯ ಅರಸೊತ್ತಿಗೆಯ ವಿಷಯವಾಗಿ ಬಹಳ ಒಳ ತಂತ್ರಗಳು ನಡೆದವು, ಅಶೋಕನಿಗೆ ರಾಜಧಾನಿಯು ಶತ್ರು ಪುರಿ ಎಂಬಂತಾಯಿತು. ಅವನ ಅಣ್ಣ ತಮ್ಮಂದಿರೆಲ್ಲ ಅವನಿಗೆ ವಿರೋಧವಾಗಿ ನಿಂತರು, ಹಿರಿಯನಾದ ಸುಮನನು ಅವರೆಲ್ಲರಿಗೂ ಮುಖ್ಯನಾಗಿದ್ದನು. ಕೊನೆಗೆ ಬಹುದಿವಸ ಯುದ್ಧಾದಿಗಳು ನಡೆದ ಬಳಿಕ ಜಯಲಕ್ಷ್ಮಿಯು ಅಶೋಕನನ್ನು ವರಿಸಿದಳು. ಸುಮನನು ಓಡಿಹೋಗಿ ಮರಣ ಹೊಂದಿದನು. ಕ್ರಮದಿಂದ ಉಳಿದ ಅಣ್ಣ ತಮ್ಮಂದಿರನ್ನು ಕೊಂದು ಅಶೋಕನು ಪಾಟಲಿಪುತ್ರ ಸಿಂಹಾಸನವನ್ನೇರಿದನು. ಕಾಶ್ಮೀರದಲ್ಲಿ ಪ್ರಚಲಿತವಾಗಿರುವ ಕಥೆಯು. ಕಲ್ಲಣರಚಿತವಾದ ರಾಜತರಂಗಿಣಿ * ಯು ಪ್ರಸಿದ್ದವಾದ ಸಂಸ್ಕೃತ ಐತಿಹಾ ಸಿಕ ಗ್ರಂಥವು, ಈ ಗ್ರಂಥದಲ್ಲಿ ಕಾಶ್ಮೀರದ ಇತಿಹಾಸವು ವಿಸ್ತಾರವಾಗಿ ಹೇಳಲ್ಪಟ್ಟರು

  • ಇದುವರೆಗೆ ಪ್ರಸಿದ್ಧವಾಗಿರುವ ಸಂಸ್ಕೃತ ಗ್ರಂಥಗಳಲ್ಲಿ ರಾಜತರಂಗಿಣಿಯೊಂದೇ ಇತಿಹಾಸ ಎಂದು ಹೇಳುವದಕ್ಕೆ ಯೋಗ್ಯವಾಗಿರುವದು, ಅಕಬರನ ಪ್ರಸಿದ್ಧ ಮಂತ್ರಿಯಾದ ಅಬುಲ್ ಫಜಲನೇ ಎಲ್ಲಕ್ಕೂ ಮೊದಲು ಜನರ ದೃಷ್ಟಿಯನ್ನು ಇದರ ಕಡೆಗೆ ಎಳೆದನು. ಅಕಬರನ ಅಪ್ಪಣೆಯ ಮೇರೆಗೆ ಸಾರ್ಸಿಭಾಷೆಯಲ್ಲಿ ಇದರ ಭಾಷಾಂತರವು ಪ್ರಕಟಿಸಲ್ಪಟ್ಟಿತು. ಅಬುಲ್ ಫಜಲನು ಆ ಪಾರ್ಸಿ ಭಾಷಾಂತ