ಪುಟ:ಅಶೋಕ.djvu/೬೪

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಅಶೋಕ ಅಥವಾ ಪ್ರಿಯದರ್ಶಿ. } ••••••Mಯ ಫಾಹಿಯಾನನು ತಕ್ಷಶಿಲೆಗೆ ಬಂದಿದ್ದನು. ಅವನು ಈ ಪಟ್ಟಣಕ್ಕೆ ( ಚು-ಸಾ-ಸಿಲೋ” ಅಂದರೆ ಖಂಡಿತ ಮಸ್ತಕ ಎಂದು ಉಲ್ಲೇಖಿಸಿರುವನು. ಈ ಸ್ಥಾನದಲ್ಲಿಯೇ ಬುದ್ಧದೇವನು ಯಾವದೋ ಒಂದು ಪೂರ್ವಜನ್ಮದಲ್ಲಿ ತನ್ನ ಮಸ್ತಕವನ್ನು ಭಿಕ್ಷಾರ್ಥವಾಗಿ ದಾನ ಮಾಡಿದ್ದನು. ಚೂ-ನಾ-ಸಿಲೋ ಎಂಬದು ಸಂಸ್ಕೃತ ಚ್ಯುತಶಿರ ಎಂಬ ಶಬ್ದದಿಂದ ಹುಟ್ಟಿದೆ. ಚ್ಯುತಶಿರ, ತಕ್ಷಶಿರ ಎಂಬಿವು ಒಂದೇ ಅರ್ಥದವು. ತಕ್ಷಶಿಲೆಯು ಪ್ರಾಚೀನ ಬೌದ್ಧಗ್ರಂಥಗ ಳಲ್ಲಿ ತಕ್ಷಶಿರ ಎಂದೇ ಹೇಳಲ್ಪಟ್ಟಿದೆ. ಕ್ರಿ. ಶ. ೫೧೮ರಲ್ಲಿ ಚೀನಪ್ರವಾಸಿಯಾದ ಸಂಗು ನನು ಈ ಸ್ಥಾನಕ್ಕೆ ಬಂದಿದ್ದನು, ಸಿಂಧುನದಿಯಿಂದ ಈ ಸ್ಥಳಕ್ಕೆ ಬರುವದಕ್ಕೆ ಅವನಿಗೆ ೩ ದಿವಸಗಳು ಹಿಡಿದಿದ್ದವು, ಪ್ರಸಿದ್ಧ ಚೀನಪ್ರವಾಸಕನಾದ ಹುಯೆನ್‌ತ್ಸಾಂಗನು ಕ್ರಿ. ೬೩೦ ರಲ್ಲಿಯೂ, ಸ್ವದೇಶಕ್ಕೆ ತಿರುಗಿ ಹೋಗುವಾಗ ಕ್ರಿ. ೬೪೩ರಲ್ಲಿಯೂ ಈ ಪಟ್ಟಣಕ್ಕೆ ಬಂದಿದ್ದನು. ಅವನು ಈ ಪಟ್ಟಣದ ಸುತ್ತಳತೆಯು ಸುಮಾರು ೧ಕ್ರೋಶವಿತ್ತೆಂದು ಹೇಳಿರುವನು. ಒಂದು ಕಾಲದಲ್ಲಿ ಈ ಪ್ರದೇಶವು ಕಪಿಶ ದೇಶಕ್ಕೆ ಒಳಪಟ್ಟಿತ್ತು. ಆದರೆ ಹುಯೆನ್‌ತ್ಸಾಂಗನ ಕಾಲದಲ್ಲಿ ಇದು ಕಾಶ್ಮೀರ ರಾಜ್ಯದ ಮಾಂಡಲಿಕ ರಾಜ್ಯವಾಗಿತ್ತು. ಇಲ್ಲಿಯ ಭೂಮಿಯು ಬೆಳೆಯುಳ್ಳದ್ದು. ಗುಡಿಗಳಿಂದಲೂ, ವಿಹಾರಗಳಿಂದಲೂ ನಗರವು ತುಂಬಿಹೋಗಿತ್ತು, ಆದರೆ ಎಲ್ಲವೂ ಧ್ವಂಸೋನ್ಮುಖವಾಗಿದ್ದವು, ಪಟ್ಟಣದಿಂದ ಒಂದು ಕ್ರೋಶದ ಮೇಲೆ ಅಶೋಕನು ಕಟ್ಟಿಸಿದ ಒಂದು ಸ್ಫೂ ಪವಿತ್ತು; ಈ ಸ್ಥಳದಲ್ಲಿ ಬುದ್ಧದೇ ವನು ತನ್ನ ಮಸ್ತಕವನ್ನು ದಾನಮಾಡಿದ್ದನೆಂದು ಪ್ರವಾದವುಂಟು.” ಆ ದಾನಪರಮ ಕಾಷ್ಠೆಯ ಸ್ಟಾರಕವೆಂದು ಅಶೋಕನು ಈ ಸ್ತೂಪವನ್ನು ಕಟ್ಟಿಸಿದ್ದನು, ಆದರೆ ಯಾವ ಕಾಲದಲ್ಲಿ ಯಾರಿಗೆ ಮಸ್ತಕದಾನಮಾಡಿದ್ದನೆಂಬದರ ಉಲ್ಲೇಖವನ್ನು ಮಾಡಿಲ್ಲ. ಹಲ ವರು ಹೇಳುವದೇನಂದರೆ ಒಂದು ಹೆಣ್ಣು ಹುಲಿ ಮತ್ತು ಅದರ ಏಳು ಮರಿಗಳು ಉಪವಾ ಸದಿಂದ ಬಳಲುತ್ತಿರುವದನ್ನು ನೋಡಿ, ಆ ಮಹಾಪುರುಷನು ತನ್ನ ಮಸ್ತಕವನ್ನು ದಾನ ಮಾಡಿದನು. ಬುದ್ಧನು ಬೇರೊಬ್ಬ ಮನುಷ್ಯನ ಪ್ರಾಣರಕ್ಷಣೆಗಾಗಿ ಮಸ್ತಕ ದಾನಮಾಡಿ ದನೆಂದು ಸಂಗುನನು * ಹೇಳುತ್ತಾನೆ, ಆದರೆ ಕನಿಂಗ್‌ಹ್ಯಾಮ್ ಮೊದಲಿನ ಪ್ರವಾ ದವೇ ಯುಕ್ತಿಯುಕ್ತವಾದದ್ದೆಂದು ಹೇಳುತ್ತಾರೆ, ಯಾಕಂದರೆ ಈಗಲೂ ಪಟ್ಟಣದ ಉತ್ತರದಲ್ಲಿ ( ಬಾಬರಖಾನಾ” (ವ್ಯಾಘಾವಾಸ) ಎಂಬ ಒಂದು ಸ್ಥಳವೂ, ದಕ್ಷಿಣದಲ್ಲಿ ಮಾರ್‌ಗಲ್ ” ( ಕುತ್ತಿಗೆ ಕೊಯ್ಯುವದು) ಎಂಬ ಒಂದು ಪರ್ವತ ಶ್ರೇಣಿಯೂ ಇರು ವವು ಮೇಲೆ ಹೇಳಿದ ಪ್ರವಾದಕ್ಕೆ ಈ ಎರಡೂ ಸ್ಥಾನಗಳ ನಿಕಟ ಸಂಬಂಧವಿರಬೇ ಕೆಂದು ಕನಿಂಗ್‌ಹ್ಯಾಮ್ ಮೊದಲಾದ ಇತಿಹಾಸಜ್ಞರ ಅಭಿಪ್ರಾಯವು, ಇದೇ ಸಾದೇ ರಿಯ ಅವಶೇಷಸ್ಥಾನದಲ್ಲಿಯೇ ಎಷ್ಟೊ ಪ್ರಾಚೀನ ಸ್ತೂಪಗಳು, ವಿಹಾರಗಳು, ದುರ್ಗ ವೇಷ್ಟಿತವಾದ ಒಂದು ಪಟ್ಟಣವು ಇವುಗಳ ಚಿಹ್ನೆಗಳು ಕಾಣುವವು, ತಕ್ಷಶಿಲೆಯ ವಾಯ

  1. Beal's Records of Western World VOI [.