ಪುಟ:ಅಶೋಕ.djvu/೭೧

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಕ್ಲ ಅಶೋಕ ಅಥವಾ ಪ್ರಿಯದರ್ಶಿ. ೧'rrowmvvvvvvvvvvrmMAA ಅಶೋಕನು ಪಾಟಲಿ ಪುತ್ರದಲ್ಲಿ ರಾಜ್ಯಸೂತ್ರವನ್ನು ವಹಿಸಿದಾಗ ಆತನ ಅಣ್ಣ ನಾದ ಸುಷೀಮನು ತಕ್ಷಶಿಲೆಯಲ್ಲಿ ದಂಗೆಯನ್ನಡಗಿಸುವದರಲ್ಲಿ ತೊಡಗಿದ್ದನು. ಅವನು ಅಲ್ಲಿ ಅಪಜಯ ಹೊಂದಿ ನಿರಾಶನಾಗಿ ಪಾಟಲಿಪುತ್ರಕ್ಕೆ ತಿರುಗಿ ಬಂದನು. ದಾರಿಯಲ್ಲಿ ಅವನು ಬಿಂದುಸಾರನು ಮರಣ ಹೊಂದಿದನೆಂದೂ, ಅಶೋಕನು ಸಿಂಹಾಸನವನ್ನೆ ರಿರು ವನೆಂದೂ, ರಾಜ್ಯದ ಪ್ರಜೆಗಳೂ ರಾಜಕೀಯ ಅಧಿಕಾರಿಗಳೂ ಇವರಲ್ಲಿ ಎರಡು ಪಂಗ ಡಗಳಾಗಿವೆಯೆಂದೂ ಕೇಳಿದನು. ಕೂಡಲೆ ಸುಸೀಮನು ಪಾಟಲಿಪುತ್ರದ ಸೀಮಾಂತ ದಲ್ಲಿ ಸೇನೆಯೊಡನೆ ಬಂದಿಳಿದನು, ಮತ್ತು ತನ್ನ ವಿರುದ್ಧವಾಗಿ ತಂತ್ರ ನಡೆಸಿದವರನ್ನು ಸೋಲಿಸಿ ಮಗಧ ಸಿಂಹಾಸನವನ್ನು ಆಕ್ರಮಿಸಬೇಕೆಂದು ಸಂಕಲ್ಪ ಮಾಡಿದನು. ಇತ್ತ ರಾಧಾಗುಪ್ತನೂ ರಾಜಧಾನಿಯ ಕಾವಲಿಗೆ ಬಲಿಷ ವಾದ ಸೈನ್ಯವನ್ನು ದುರ್ಗದಲ್ಲಿ ಕ್ರಮ ಗೊಳಿಸಿ ನಿಲ್ಲಿಸಿದನು, ಮತ್ತು ಕಟ್ಟಿಗೆ ಮೊದಲಾದ ದಾಹ್ಯ ಪದಾರ್ಥಗಳಿಂದ ಅಗಳತೆ ಯನ್ನು ತುಂಬಿಸಿ ಬೆಂಕೆಯ ಹಚ್ಚಿಸಿದನು, ಅದರಿಂದ ಅಗಳತೆಯನ್ನು ದಾಟಿಹೋಗುವದು ಅಸಾಧ್ಯವೆನಿಸಿತು. ಆಗ ಸುಸೀಮನು ಯಾವದೋ ಒಂದು ರೀತಿಯಿಂದ ಅಗಳತೆಯನ್ನು ದಾಟ ಕೋಟೆಯ ಗೋಡೆಯೊಳಗೆ ದುಮುಕಬೇಕೆಂದು ಆಲೋಚಿಸಿದನು. ಆದರೆ ದೈವಾನುಕೂಲ್ಯವಿಲ್ಲದ್ದರಿಂದ ಗೋಡೆಗೆ ಕೈ ಹಚ್ಚಿದೊಡನೆಯೆ ಅಗಳತೆಯಲ್ಲಿ ಪ್ರಜ್ವಲಿ ಸುತ್ತಿದ್ದ ಬೆಂಕೆಯಲ್ಲಿ ಬಿದ್ದು ಅಗ್ನಿ ನಾರಾಯಣನಿಗೆ ಆಹುತಿಯಾದನು. ಸುಸೀಮನ ಈ ಶೋಚನೀಯ ಮರಣದಿಂದ ಹಲವರು ಅಶೋಕನ ಮೇಲೆ ಸಿಟ್ಟಾದರು, ಮತ್ತು ಆತ ನಿಗೆ ಚಂಡಾಶೋಕನೆಂದು ಕರೆಯಹತ್ತಿದರು. ೭ನೆಯ ಅಧ್ಯಾಯ. ಹಿಟ್ ಅಶೋಕನ ಮೇಲೆ ಅಪನಾದವು. ಶೋಕನು ರಕ್ತಪ್ರವಾಹವನ್ನು ಹರಿಯಿಸಿ, ಅಣ್ಣ ತಮ್ಮಂದಿರ ರಕ್ತದಲ್ಲಿ ಖಡ್ಗವನ್ನು ಮುಳುಗಿಸಿ ಮಗಧ ಸಿಂಹಾಸನವನ್ನೇರಿದನೆಂದು ಪ್ರವಾದ ವುಂಟು, ಬೌದ್ಧ ಧರ್ಮವನ್ನು ಸ್ವೀಕರಿಸುವದಕ್ಕೆ ಮುಂಚೆ ಭರತಖಂಡ ೫8ಳ ದಲ್ಲಿಯೂ, ಸಿಂಹಲದ್ವೀಪದಲ್ಲಿಯೂ ಎಲ್ಲ ಕಡೆಗಳಲ್ಲಿ ಅಶೋಕನು ಕ್ರೂರ

  • “ನಾದ ನರಪಿಶಾಚನಾಗಿದ್ದನೆಂದು ವರ್ಣಿಸಲ್ಪಟ್ಟಿದೆ. ಮಹಾವಂಶದಲ್ಲಿ ಅಶೋಕನು ಹಿರಿಯ ಅಣ್ಣನನ್ನು ಕ್ರೂರತನದಿಂದ ಕೊಂದದ್ದಲ್ಲದೆ ಬೇರೆ ೯೮ ಜನ ಮಲ ಅಣ್ಣ ತಮ್ಮಂದಿರನ್ನು ಕೊಂದನೆಂದೂ, ಸ್ನೇಹವಶನಾಗಿ ಎಲ್ಲಕ್ಕೂ ಚಿಕ್ಕ ತಮ್ಮನನ್ನು ಮಾತ್ರ ಕೊಲ್ಲಲಿಲ್ಲವೆಂದೂ ಹೇಳಿರುವದು, ಭಾರತೀಯ ಇತಿಹಾಸದಲ್ಲಿಯೂ ಅಶೋಕನ