ಪುಟ:ಅಶೋಕ.djvu/೭೪

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಅಶೋಕ ಅಥವಾ ಪ್ರಿಯದರ್ಶಿ, W Mry/~~, r/ rr/ r, - *r 27, ಅಶೋಕನ ಗಿರಿಲಿಪಿಗಳಲ್ಲಿಯೂ ಶಾಸನಗಳಲ್ಲಿಯೂ ಆತನ ಅಣ್ಣತಮ್ಮಂದಿರ ಮತ್ತು ಅಕ್ಕತಂಗಿಯರ ಉಲ್ಲೇಖವು ಕಂಡುಬರುವದು. ಎಲ್ಲಕ್ಕೂ ಚಿಕ್ಕ ತಮ್ಮನು ಮಾತ್ರ ಬದುಕಿದ್ದರೆ " ಅಣ್ಣತಮ್ಮಂದಿರ ” ಮತ್ತು “ ಅಕ್ಕತಂಗಿಯರ ” ಎಂಬ ಅರ್ಥದ ಶಬ್ದಗಳು ಕಲ್ಲಮೇಲೆ ಕೊರೆದ ಶಾಸನಗಳಲ್ಲಿ ಕಂಡುಬರುತ್ತಿರಲಿಲ್ಲ. ಸುಮೀಮನ ಶೋಚನೀಯ ವಾದ ಮೃತ್ಯುವಿನ ತರುವಾಯ ಅಶೋಕನ ವಿಷಯವಾಗಿ ಮನೆಮನೆಗಳಲ್ಲಿ ಭ್ರಾತೃ ದ್ರೋಹಿ ಎಂಬ ಅಪವಾದವುಂಟಾದದ್ದೇ ಕ್ರಮವಾಗಿ ಬೆಳೆದು ಈ ಎಲ್ಲ ಕಥೆಗಳು ಹುಟ್ಟು ವದಕ್ಕೆ ಕಾರಣವಾಯಿತೆಂದು ತೋರುವದು, ಇಲ್ಲವೆ ಮುಂದಿನ ಕಾಲದ ಬೌದ್ದಧರ್ಮ ಗ್ರಂಥಕಾರರು * ಬೌದ್ಧ ಧರ್ಮ ಗ್ರಹಣಮಾಡುವದಕ್ಕೆ ಮುಂಚೆ ಅಶೋಕನಲ್ಲಿದ್ದ ಕೂರ ವಾದ ಪೈಶಾಚಿಕ ಆಚರಣೆಯು ಒಮ್ಮೆಲೆ ಬದಲಾವಣೆಹೊಂದಿದ್ದನ್ನು ತೋರಿಸಿ ಬೌದ್ಧ ಧರ್ಮದ ಪ್ರಭಾವವನ್ನು ಪ್ರಕಟಿಸುವದಕ್ಕಾಗಿ ಈ ರೀತಿಯಾಗಿ ಬೆಳೆಯಿಸಿರುವರೆಂಬದು ಅಸಂಗತವೆಂದು ತೋರುವದಿಲ್ಲ. ಈ ಕಥೆಗಳಲ್ಲಿ ಸತ್ಯಾಂಶವು ಸ್ವಲ್ಪವೂ ಇಲ್ಲವೆಂದು ಹೇಳುವದಕ್ಕೂ ಆಗುವದಿಲ್ಲ. ಅಶೋಕನು ರಾಜ್ಯಲೋಭದಿಂದ ಸುಸೀಮನನ್ನು ಇಲ್ಲವೆ ಬೇರೆ ಅಣ್ಣತಮ್ಮಂದಿರನ್ನು ಮತ್ತು ಅವರ ಪರಿವಾರದವರನ್ನು ಪೀಡಿಸಿರಬಹುದು; ಇಲ್ಲವೆ ಕೊಂದಿರಬಹುದು, ಆದರೆ ಸಾಮಾನ್ಯವಾದ ಒಂದು ಕಾರಣದಿಂದ ಸಭೆಯೊಳಗಿನ ಮಂತ್ರಿಗಳನ್ನು ಏಕೆ ಕೊಲ್ಲಬೇಕು ? ಇದನ್ನು ಸಹಜವಾಗಿ ನಿರ್ಣಯಿಸುವದಾಗುವದಿಲ್ಲ' ಅಶೋಕನ ಗಿರಿಲಿಪಿಗಳಲ್ಲಿ ಎಲ್ಲಿಯೂ ಅವನ ಪೂರ್ವಜೀವನದ ಇಂಥ ಕ್ರೂರವಾದ ಆಚರಣೆಯ ಇಲ್ಲವೆ ಅದರಿಂದುಂಟಾದ ಪಶ್ಚಾತ್ತಾಪದ ಉಲ್ಲೇಖವಿಲ್ಲ. ಒಂದುವೇಳೆ ಆ ಸಂಗತಿಗಳೆಲ್ಲ ನಿಜವಿದ್ದರೆ ಅಣ್ಣತಮ್ಮಂದಿರು, ಹೆಂಗಸರು, ನಿರಪರಾಧಿಗಳು ಇವರನ್ನು ಕೊಂದ ಪಾಪದಿಂದ ಕಲುಷಿತಮನಸ್ಸುಳ್ಳ ಅಶೋಕನು ಪಶ್ಚಾತ್ತಾಪದಿಂದ ಅದನ್ನು ಒಪ್ಪಿ ಕೊಳ್ಳುತ್ತಿದ್ದನು. ಬೌದ್ಧಧರ್ಮಗ್ರಹಣದಿಂದ ಹೊಸಜೀವನವುಂಟಾಗಿ ಆತನು ತಾನು ಮಾಡಿದ ದುಷ್ಕೃತಿಗಳನ್ನು ನಿಷ್ಕಪಟವಾಗಿ ಒಪ್ಪಿಕೊಳ್ಳು ವದಕ್ಕೆ ಸಂಕೋಚಪಡುತ್ತಿರ ಲಿಲ್ಲವೆಂದು ತೋರುವದು. ಆತನು ತನ್ನ ಜೀವನದಲ್ಲಿ ಒದಗಿದ ಈ ವಿಶಿಷ್ಟ ಸಂಗತಿಗ. ಳನ್ನು ಅನುಶಾಸನಗಳಲ್ಲಿ ಎಲ್ಲಿಯೂ ಉಲ್ಲೇಖಿಸದಿರುವದರಿಂದ ಹಲವರು ಈ ಕಥೆಗಳ ಸತ್ಯತೆಯ ವಿಷಯವಾಗಿ ಸಂದೇಹಬಡುವರು. ಏನೇ ಇರಲಿ, ಚಂಡಗಿರಿಕನೆಂಬ ದುಷ್ಯನ ಪಾಪದೊಡನೆ ಅಶೋಕನ ಹೆಸರು ಸಂಬಂಧಪಟ್ಟಿರುವದರಿಂದಾಗಲಿ, ತಂದೆಯು ತೀರಿದ ಬಳಿಕ ಅಣ್ಣನು ಶೋಚನೀಯ ಮರಣಹೊಂದಿದ್ದರಿಂದಾಗಲಿ ಅಶೋಕನ ಹೆಸ ರಿಗೆ ಈ ಮಹಾಕಲಂಕರಾಶಿಯು ಈ ಕಾಲದವರೆಗೂ ಸಂಬಂಧಿಸಿ ಬಂದಿರುವದು, ಈ ಸಂಗತಿಗಳಲ್ಲಿ ಐತಿಹಾಸಿಕ { ಸತ್ಯವು ಎಷ್ಟು ಮಟ್ಟಿಗೆ ಇರುವದೆಂಬದನ್ನು ಹೇಳುವದು

  • Vincent Snith, Asoke ↑ R. C, Dutt's Ancient Civilization Vol. [[[.