ಪುಟ:ಅಶೋಕ.djvu/೭೭

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೨ ಅಶೋಕ ಅಥವಾ ಪ್ರಿಯದರ್ಶಿ V/////vvvvv//*J• vy

    • v Y * * * * * * ** Pv ++ * * * \ vy*** ** * * *-2 v 7, 4 - 2 - * *y

ವಂಶದ ಅರಸರಿಗೂ ಶರೀರಸಂಬಂಧವಿತ್ತೆಂದೂ ಉಲ್ಲೇಖವುಂಟು, ಕೌರವರಾಜನಾದ ದುರ್ಯೋಧನನು ಒಬ್ಬ ಕಲಿಂಗ ರಾಜಕುಮಾರಿಯ ಸ್ವಯಂವರಸಭೆಗೆ ಹೋಗಿದ್ದನು. ಮತ್ತು ವೀರಶ್ರೇಷ್ಟನಾದ ಕರ್ಣನ ಸಹಾಯದಿಂದ ಅವಳನ್ನು ಹರಣಮಾಡಿಕೊಂಡು ಒಯ್ದನು. ಅರ್ಜುನನ ದಿಗ್ವಿಜಯವರ್ಣನೆಯು ಈ ಮೇರೆಗೆ ಇರುವದು;-ಅಂಗ, ವಂಗ, ಕಲಿಂಗ ಮೊದಲಾದ ದೇಶಗಳಲ್ಲಿರುವ ತೀರ್ಥಗಳು, ದೇವಾಲಯಗಳು, ಸಿದ್ಧಾಶ್ರಮಗಳು ಇವುಗಳ ದರ್ಶನವನ್ನು ಅರ್ಜುನನು ತೆಗೆದುಕೊಂಡು ಬಂದಬಳಿಕ ಸಂಗಡ ಬಂದ ಬ್ರಾಹ್ಮ ಣರು ಕಲಿಂಗರಾಜ್ಯದ ದ್ವಾರದವರೆಗೆ ಬಂದು ಆತನ ಸಮ್ಮತಿಯನ್ನು ಪಡೆದು ತಿರುಗಿ ಹೋದರು, ವೀರಶ್ರೇಷ್ಠನಾದ ಧನಂಜಯನು ಅತಿ ಸ್ವಲ್ಪ ಸಾಹಾಯ್ಯದೊಡನೆ ಸಮುದ್ರ ತೀರಕ್ಕೆ ಸಾಗಿದನು. ಅವನು ಅಲ್ಲಿಯ ತೀರ್ಥ ಮೊದಲಾದವನ್ನು ನೋಡುತ್ತ ನೋಡುತ್ತ ಮುಂದೆ ನಡೆದನು. ಬಳಿಕ ತಾಪಸಗಣದಿಂದ ಶೋಭಿಸುವ ಮಹೇಂದ್ರಪರ್ವತವನ್ನು ನೋಡಿ, ಸಮುದ್ರತೀರದ ಮಾರ್ಗದಲ್ಲಿ ಮಣಿಪುರಕ್ಕೆ ಹೋದನು. ಮಹಾಭಾರತದ ವನಪರ್ವದಲ್ಲಿ ಹೇಳಿದ್ದೇನಂದರೆ- ಯುಧಿಷ್ಠಿರ ಮೊದಲಾದ ಐವರು ಗಂಗಾಸಾಗರಸಂಗಮವನ್ನು ದಾಟಿ ಸಮುದ್ರತೀರದಗುಂಟ ಕಲಿಂಗದಕಡೆಗೆ ಪ್ರಯಾಣಮಾಡಿದರು. स सागरं समासाद्य गङ्गायां सङ्गम नृप ।। नदीशतानां पञ्चानां मध्ये चक्रे समाप्लवम् ॥ ततः समुद्रतीरेण जगाम वसुधाधिपः ।। भ्रातृभिःसहिता वीरःकलिंगान् प्रतिभारत ॥ ಮತ್ತೊಂದೆಡೆಗೆ ಲೋಮಶಮುನಿಯು ಕಲಿಂಗವರ್ಣನಾಪ್ರಸಂಗದಲ್ಲಿ ಈ ಮೇರೆಗೆ ಹೇಳಿರುತ್ತಾನೆ:- एते कलिङ्गाः कौन्तेय यत्र वैतरिणी नदी । यत्रायजत धर्मोपि देवाञ्शरणमत्यवै ।। ऋषिभि:समुपायुक्तं यज्ञियं गिरिशोभितम् ।। उत्तरं तीरमेतद्धि सततं द्विजशोभितम् ॥ (F MIT Tagಕೆ). ಅರ್ಥ~ಎಲೈ ಕೌಂತೇಯನೇ ಇದು ಕಲಿಂಗವೆಂಬ ಪ್ರಸಿದ್ಧ ದೇಶವು, ಈ ದೇಶ ದಲ್ಲಿ ವೈತರಣಿ ಎಂಬ ನದಿಯಿರುವದು, ಧರ್ಮರಾಜನು ಇಲ್ಲಿ ದೇವತೆಗಳಿಗೆ ಶರಣು • ಪ್ರಾಚೀನ ಕಲಿಂಗದೇಶದೊಳಗಿನ ಒಂದು ಪಟ್ಟಣವು; ಬಭ್ರುವಾಹನನ ರಾಜಧಾನಿಯಾದ ಮಣಿಪುರವಲ್ಲ.