ಪುಟ:ಅಶೋಕ.djvu/೭೮

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಅಶೋಕ ಅಥವಾ ಪ್ರಿಯದರ್ಶಿ. ಹೋಗಿ ಯಜ್ಞ ವನ್ನು ಮಾಡಿರುವನು. ಪರ್ವತಗಳಿಂದ ಶೋಭಿತವಾಗಿಯೂ, ಋಷಿ ಗಳಿಂದಲೂ ಬ್ರಾಹ್ಮಣರಿಂದಲೂ ಯುಕ್ತವಾಗಿಯೂ ಇರುವ ಈ ಯಜ್ಞಭೂಮಿಯು ವೈತರಣಿಯ ಉತ್ತರತೀರದಲ್ಲಿರುವದು. ಮಹಾಭಾರತದ ವರ್ಣನೆಯಲ್ಲಿ ಗಂಗಾನಾಗರಸಂಗಮಕ್ಕೆ ಸ್ವಲ್ಪ ದೂರದಲ್ಲಿಯೇ ಕಲಿಂಗರಾಜ್ಯದ ಮೇರೆ ಇರುವಂತೆ ಹೇಳಿದೆ. ಬಹು ಪ್ರಾಚೀನಕಾಲದಲ್ಲಿ ಉತ್ತರಕ್ಕೆ ವೈತರಣಿ, ದಕ್ಷಿಣಕ್ಕೆ ರಾಜಮಹೇಂದ್ರಿ, ಪೂರ್ವಕ್ಕೆ ವಂಗೋಪನಾಗರ, ಪಶ್ಚಿಮಕ್ಕೆ ಮಹೇಂದ್ರಗಿರಿ ಈ ಮೇರೆಗಳ ನಡುವಿನ ಪ್ರದೇಶವು ಕಲಿಂಗವೆಂದು ಹೇಳಲ್ಪಡುತ್ತಿತ್ತು. ಹರಿವಂಶದಲ್ಲಿ ತಾವುಲಿಪ್ತಿಯಿಂದ ಕಲಿಂಗರಾಜ್ಯದ ಸೀಮೆಯು ಆರಂಭವಾಯಿತೆಂದು ಹೇಳಿದೆ. ಟಲೇಮಿಯು (Ptolemy) ಗಂಗಾಸಾಗರಸಂಗಮದ ಸಮೀಪಪ್ರದೇಶಕ್ಕೆಲ್ಲ ಕಲಿಂಗವೆಂದು ಹೆಸರು ಕೊಟ್ಟಿರುವನು. ಮಹಾಕವಿ ಕಾಲಿದಾಸನು ರಘುರಾಜನ ದಿಗ್ವಿಜಯವರ್ಣನೆಯಲ್ಲಿ ಕಲಿಂಗದ ಉಲ್ಲೇಖಮಾಡಿರುವನು. स तीत्व कपिशां सैन्यैःबद्धद्विरदसेतुभिः । * |उत्कलादतिपथः कलिङ्गाभिमुखो ययौ ।। [ ರಘುರಾಜನು ತನ್ನ ಸೈನ್ಯದಿಂದ ರಚಿಸಲ್ಪಟ್ಟ ಗಜಸೇತುವಿನಿಂದ ಕಪಿಶಾನದಿ ಯನ್ನು ದಾಟಿ ಅಲ್ಲಿಂದ ಉತ್ಕಲದೇಶವಾಸಿಗಳು ತೋರಿಸಿದ ಮಾರ್ಗದಿಂದ ಕಲಿಂಗ ದೇಶಕ್ಕೆ ಹೋದನು.] ಪ್ರಸಿದ್ದ ಚೀನ ಪ್ರವಾಸಿಯಾದ ಹುಯೆನ್‌ತ್ಸಾಂಗನು ಕ್ರಿ. ೭ನೆಯ ಶತಕದಲ್ಲಿ ಹಿಂದುಸ್ತಾನದಲ್ಲಿ ಪ್ರವಾಸ ಮಾಡುವಾಗ ಕಲಿಂಗದೇಶಕ್ಕೆ ಬಂದಿದ್ದನು. ಅವನು ಕೋನ್ನೊಧಪ್ರದೇಶವನ್ನು ದಾಟಿ ಕಲಿಂಗವನ್ನು ಸೇರಿದ್ದನು. ಚೀನೀ ಭಾಷೆಯನ್ನು ಬಲ್ಲ ಮನಸ್ಕೂಕ ನ್ಯಾನಿಸ್ಲಾಡ್ಯೂಲೆಯು ಕೋಂಗ್-ಯು-ಲೋ ಎಂಬದು ಹಿಂದುಸ್ತಾನದ ಕೋಧ ಎಂದು ಹೇಳಿರುವನು. ಹಲವರು ಈಗಿನ + ಗಂಜಾಮಪ್ರದೇಶವೆ ಕೋನ್ನೊಧವೆಂದು ಹೇಳುವರು. ಹುಯೆನ್ತ್ವಾಂಗನ ಪ್ರವಾಸಕಾಲದಲ್ಲಿ ಲಲಿತೇಂದ್ರ

  • ರಘುವಂಶ ೪ನೆಯ ಸರ್ಗ.

• ಲ್ಯಾ ಸೆನ್‌ ಎಂಬ ಪಂಡಿತನು ಈಗಿನ ಸುವರ್ಣರೇಖಾನದಿಯು ಪ್ಯಾಚಿನ ಕಪಿಶಾನದಿಯಂದು ಹೇಳುವನು. ಆದರೆ ಮೇದಿನೀಪುರ ಜಿಲ್ಲೆಯಲ್ಲಿದ್ದ ಕಾ೦ಸಾಯಿ ನದಿಯು ಕಪಿಶಾನದಿಯಂದು ನಮಗೆ ತೋರುವದು, ಕಾ೦ಸಾಯಿ ಇದರ ಶುದ್ಧ ರೂಪವು ಕಂಗಾವತಿ, ಕಸಿ ಶಾವತಿ ಎ೦ಬದರಿಂದ ಕಂಗಾವತಿ ರೂಪವು ಹುಟ್ಟಿರಬೇಕೆಂದು ತೋರುವದು. + ಕನಿಂಗ್ ಹ್ಯಾಮ್ ಮೊದಲಾದ ಐತಿಹಾಸಿಕರು ಈಗಿನ ಗಂಜಾವು (Ganjamಪ್ರದೇಶಕ್ಕೆ ಪ್ರಾಚೀನ ಕೋ ನೊದ ( Koniyodla ) ಎಂದು ಹೇಳುವರು.