ಪುಟ:ಅಶೋಕ.djvu/೮೪

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಅಶೋಕ ಅಥವಾ ಪ್ರಿಯದರ್ಶಿ, LF MMMvvvv vvvvvvvvvvvvvvvv ಒM ಧರ್ಮದ ಮೇಲೆ ಪ್ರೀತಿವಿಶ್ವಾಸಗಳು ಉಂಟಾಗುವಂತೆ ದೃಢಪ್ರಯತ್ನ ಮಾಡಿದೆನು " ಎಂದು ಪ್ರಕಟಿಸಿರುವನು. ಈ ಮೇರೆಗೆ ಅಶೋಕನ ಜೀವನದ ೪ ವರ್ಷಗಳ ಇತಿಹಾಸವು ದೊರೆಯುವದು. ಕ್ರಿ. ಪೂ. ೨೬೧ ರಲ್ಲಿ ಅಥವಾ ಪಟ್ಟಾಭಿಷೇಕವಾದ ೯ ವರ್ಷಗಳ ತರು ವಾಯ ಕಲಿಂಗರಾಜ್ಯವು ಜಯಿಸಲ್ಪಟ್ಟಿತು. ಮುಂದೆ ೪ ವರ್ಷಗಳ ತರುವಾಯ ಇಲ್ಲವೆ ಅಭಿಷೇಕವಾದ ೧೩ ವರ್ಷಗಳ ತರುವಾಯ . ಪೂ. ೨೫೭ ರಲ್ಲಿ ಕಲಿಂಗರಾಜ್ಯವನ್ನಾ ಕ್ರಮಿಸಿದ ಮತ್ತು ಜಯಿಸಿದ ವರ್ಣನೆಯುಳ್ಳ ಶಿಲಾಲಿಸಿಯು + ಪ್ರಕಟಿಸಲ್ಪಟ್ಟಿತು, ಈ ಲಿಪಿಯನ್ನ ಮೇಲೆ ಹೇಳಿದ ಲಿಪಿಯನ್ನೂ ಏಕಕಾಲದಲ್ಲಿ ಆಲೋಚಿಸಿ ನೋಡಿದರೆಅಶೋಕನು ತನ್ನ ಪಟ್ಟಾಭಿಷೇಕವಾದ ೯ನೆಯ ವರ್ಷ ಅಥವಾ ಕಲಿಂಗವಿಜಯವಾದ ಸ್ವಲ್ಪ ಕಾಲದಲ್ಲಿಯೆ ಗೃಹಸ್ಥ ಶಿಷ್ಯನಾಗಿ ಬೌದ್ಧ ಧರ್ಮವನ್ನು ಸ್ವೀಕರಿಸಿದನೆಂದು ಸಿದ್ದಾಂತ ಮಾಡಬಹುದು, ಆದರೆ ಆಗ ಆ ಧರ್ಮದಲ್ಲಿ ಅವನ ಆಸ್ಥೆಯೂ, ಪ್ರೀತಿಯೂ ಪ್ರಬಲ ವಾಗಿರಲಿಲ್ಲ. ಮುಂದೆ ಕ್ರಮವಾಗಿ ಆತನ ಧರ್ಮಾನುರಾಗವು ಹೆಚ್ಚಾಗುತ್ತ ಪೂರ್ಣ ವಿಕಾಸಹೊಂದಿತು. ಅಷ್ಟು ಹೊತ್ತಿಗೆ ಪಟ್ಟಾಭಿಷೇಕವಾಗಿ ೧೦ ವರ್ಷಗಳು ಸಂದಿದ್ದವು. ಕ್ರಿ. ಪೂ. ೨೫೭ ರಲ್ಲಿ ಇಲ್ಲವೆ ಪಟ್ಟಾಭಿಷೇಕವಾಗಿ ೧೩ ವರ್ಷಗಳಾದ ಬಳಿಕ ಆತನು ತನ್ನ ಪ್ರಸಿದ್ದವಾದ ಧರ್ಮಶಾಸನ ಲಿಪಿಗಳನ್ನು ಒಂದೊಂದಾಗಿ ಜಗತ್ತಿನಲ್ಲಿ ಪ್ರಕಟಿಸಿ ದನು. ಆ ವರ್ಷದಿಂದಲೇ ಕಲ್ಲಿನಲ್ಲಿ ಲಿಪಿಗಳನ್ನು ಕೊರೆಯುವದಕ್ಕೆ ಆರಂಭವಾಯಿತೆಂದು ಆತನೇ ಪ್ರಕಟಿಸಿರುವನು, ಮೇಲೆ ಹೇಳಿದ ಸಣ್ಣ ಗಿರಿಲಿಪಿಯು ಹೊಸದಾಗಿ ಧರ್ಮ ದೀಕ್ಷೆಯನ್ನು ಹೊಂದಿದ ಚಕ್ರವರ್ತಿಯ ಧರ್ಮಾನುರಾಗದ ಮೊದಲನೆಯ ಗುರುತು. ಆತನು ಆ ಧರ್ಮದ ವಿಷಯವಾಗಿ ತನ್ನಲ್ಲಿ ಉಂಟಾದ ಅನುರಾಗವನ್ನೂ, ಉತ್ಸಾಹ ವನ್ನೂ, ಸಮಸ್ತ ನರನಾರಿಯರಲ್ಲಿ ಉಂಟುಮಾಡುವದಕ್ಕೂ, ಬೌದ್ಧಧರ್ಮದ ಜಗದ್ವಾಪಿ ಯಾದ ಮಹಿಮೆಯನ್ನು ಚಿರಸ್ಮರಣೀಯವಾಗುವಂತೆ ಮಾಡುವದಕ್ಕೂ ಬದ್ಧ ಕಂಕಣ ನಾಗಿ ನಿಂತನು, ಸಮೀಪದಲ್ಲಿಯೂ, ದೂರದಲ್ಲಿಯೂ ಪರ್ವತಗಳ ಮೇಲೂ ಶಿಲಾಸ್ತಂಭ ಗಳ ಮೇಲೂ ಎಲ್ಲೆಲ್ಲಿಯೂ ತನ್ನ ಮನಸ್ಸಿನಲ್ಲಿ ಮೂಡಿದ ಭಾವವನ್ನು ಪ್ರತ್ಯಕ್ಷರದಲ್ಲಿ ಕೊರೆಯಿಸಿರುವನು. ಇಂಥ ಲಿಪಿಗಳು ಈಗ ಎಷ್ಟೋ ದೊರೆತಿರುವವು , ಇನ್ನೂ ಎಷ್ಟೋ ದೊರೆಯಬಹುದು. ಅಶೋಕನ ಬೌದ್ಧ ಧರ್ಮಗ್ರಹಣವಿಷಯದಲ್ಲಿ ಬೇರೆ ಬೇರೆ ಕಥೆಗಳು ಪ್ರಚಲಿತವಾಗಿರುವವ, ಮಹಾವಂಶದಲ್ಲಿ ಈ ಮೇರೆಗೆ ಹೇಳಿದೆ:- ಯುವರಾಜನಾದ ಸುಮನನ ಮಗನಾದ ನಿದ್ರೋಧನೆಂಬ ಶ್ರಮಣನು ಒಂದು ದಿವಸ ಅರಮನೆಯ ಮುಂದಿನ ಮಾರ್ಗದಿಂದ ಹೋಗುತ್ತಿದ್ದನು. ಆಗ ಅಶೋಕನ ದೃಷ್ಟಿಯು ಆತನ ಮೇಲೆ ಬಿತ್ತು. ತಲೆಗೂದಲುಗಳನ್ನೆಲ್ಲ ಪರಿದು, ಕಾಷಾಯ ವಸ್ತ್ರವನ್ನು ಧರಿಸಿ ಕಂಗೊಳಿಸುತ್ತಿದ್ದ ಆ ಬಾಲ ಸನ್ಯಾಸಿಯ ಸುಂದರ ಮೂರ್ತಿಯನ್ನು ನೋಡಿದೊಡನೆ ಆತನ ಹೃದಯದಲ್ಲಿ ಅತ್ಯಂತ ಪ್ರೀತಿಯೂ, ವಿಶ್ವಾಸವೂ ಉಂಟಾದವು. ಮಹಾರಾಜನು ಮರುಳಾಗಿ ಆತನನ್ನು ರಾಜ ಸಭೆಗೆ ಕರೆಯಿಸಿದನು, ಆ ಬಾಲಭಿಕ್ಷುವಿನ ಮುಖದಿಂದ ಅಮೃತಸಿಕ್ತವಾದ ಬುದ್ಧದೇವನ