ಪುಟ:ಅಶೋಕ.djvu/೯೧

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಅಶೋಕ ಅಥವಾ ಪ್ರಿಯದರ್ಶಿ, tuverrwwwxrwxrwwwm ಅರಸನು ಸಂಕಲ್ಪಮಾಡಿದನು, ಆದರೆ ದುಷ್ಟನಾದ ಮಾರನು ಪ್ರತಿಬಂಧಕನಾಗಿ ಕೊನೆ ಯಲ್ಲಿ ಉತ್ಸವದ ಫಲವನ್ನೆಲ್ಲ ವ್ಯರ್ಥಮಾಡಿಯಾನೆಂದು ತಿಳಿದು ಆತನು ಉಪಗುಪ್ತನೆಂಬ ಸಾಧುವಿಗೆ ಶರಣುಹೋದನು, ಮತ್ತು ಮಹಾವೈಭವದಿಂದ ಆತನನ್ನು ಮಥುರೆಯಿಂದ ನೌಕೆಯ ಮೇಲೆ ಪಾಟಲಿಪುತ್ರಕ್ಕೆ ಕರೆಯಿಸಿದನು. ಮಾರನು ಉತ್ಸವವನ್ನು ಕೆಡಿಸುವ ದಕ್ಕೆ ತೊಡಗಿದ್ದನೆಂದೂ, ಅಸಾಧಾರಣ ಬುದ್ಧಿಶಕ್ತಿ ಸಂಪನ್ನನಾದ ಉಪಗುಪ್ತನು ದೈವಿಕ ಶಕ್ತಿಯ ಪ್ರಭಾವದಿಂದ ಮಾರನನ್ನು ಸಂಪೂರ್ಣವಾಗಿ ಓಡಿಸಿದನೆಂದೂ ಪ್ರವಾದವುಂಟು. ಲೋಕಪಂಚತಿ... ಎಂಬ ಒಂದು ಪಾಲೀಗ್ರಂಥದಲ್ಲಿ ಉಪಗುಪ್ತನು ಮಾರನೊಡನೆ ಮಾಡಿದ ಈ ಸಂಗ್ರಾಮದ ಸವಿಸ್ತರವಾದ ವರ್ಣನೆಯುಂಟು, ಬ್ರಹ್ಮ ದೇಶದಲ್ಲಿ ಪ್ರಚಲಿತ ವಾದ ಈ ಉಪಾಖ್ಯಾನದಿಂದ ತಿಳಿಯುವದೇನಂದರೆ-ಉಪಗುಪ್ತನು ಒಬ್ಬ ಮಹಾಸ್ಯ ವಿರ ಭಿಕ್ಷುವಾಗಿದ್ದನು. ಆತನ ಕೀರ್ತಿಯು ನಾಲ್ಕೂ ದಿಕ್ಕುಗಳಲ್ಲಿ ಹಬ್ಬಿತ್ತು. ಸಂಘವು ಆತನಿಗೆ ಯೋಗ್ಯವಾದ ಸಮ್ಮಾನವನ್ನು ತೋರಿಸಿ ಅಗ್ರಸ್ಥಾನವನ್ನು ಕೊಟ್ಟಿತ್ತು. ಅಶೋ ಕನು ಆತನ ಪವಿತ್ರವಾದ ಸಂಗವನ್ನು ಹೊಂದಿ ಉಪಕೃತನಾಗಿದ್ದನು. ೧೦ನೆಯ ಅಧ್ಯಾಯ. - - ಮಲಿ ೩ ನೆಯ ಬೌದ್ದ ಧರ್ಮಮಹಾಸಭೆ. ಧ ) ರ್ಮಮಹಾಸಭೆಯು ಅಶೋಕನ ಕಾಲದಲ್ಲಿ ಒದಗಿದ ಒಂದು ಮುಖ್ಯ ವಿಷಯವು ಪುಣ್ಯಕ್ಷೇತ್ರವೆನಿಸಿದ ಭರತಖಂಡವು ಪ್ರಾಚೀನಕಾಲದಿಂದಲೂ * ಧರ್ಮಕ್ಕೆ ಲೀಲಾಭೂಮಿಯು, ವೈದಿಕಯುಗದಲ್ಲಿ ದೃಶದ್ವತೀ-ಸಿಂಧು ನದಿಗಳ ತೀರದಲ್ಲಿ ವಸಿಷ್ಠವಾಮದೇವ ಮೊದಲಾದ ಮಹರ್ಷಿಗಳು ಗಂಭೀರಸ್ವರದಿಂದ ಯಾವ ವಾಗಿ ಗಾಯನವನ್ನು ಮಾಡಿದರೋ ಆ ಗಾನಮಯವೇದಧ್ವನಿಯಿಂದ ಶಬ್ಲಾಯಮಾನ ಯೂ, ಧರ್ಮಾಚಾರ್ಯರ ಪಾದಧೂಲಿಯಿಂದ ಪವಿತ್ರವಾಗಿಯೂ ಇರುವ ಭರತಭೂಮಿ ಯು ಈಗಲೂ ಜಗತ್ತಿನಲ್ಲಿ ಮುಖ್ಯ ತೀರ್ಥವೆನಿಸಿರುವದು, ಸೌಂದರ್ಯಶಾಲಿನಿಯಾದ ಪ್ರಕೃತಿದೇವಿಯ ಲೀಲಾಸ್ಥಾನವೆನಿಸಿದ ಭರತಖಂಡದ ಮನೋಹರವಾದ ಪ್ರಾಕೃತಿಕ ದೃಶ್ಯದಿಂದ ಮನುಷ್ಯರ ಚಿತ್ರವು ಸಹಜವಾಗಿಯೇ ಮೋಹಿತವಾಗುವದು. ಉತ್ತರ ದಿಕ್ಕಿ ನಲ್ಲಿ ಶುಭ್ರವಾದ ಹಿಮಕಿರಿಟವನ್ನು ಧರಿಸಿದ ಪರ್ವತರಾಜನು ತನ್ನ ಅನಂತವಾದ ಔನ್ನ ತ್ಯದಿಂದ ಆಕಾಶವನ್ನು ಸ್ಪರ್ಶಮಾಡುತ್ತಿರುವನು. ಆತನ ಪಾದದೇಶದಲ್ಲಿ ತೃಣಾಚ್ಛಾದಿತ ವಾದ ಶ್ಯಾಮಲಪ್ರದೇಶವು ಫಲಪುಷ್ಪಗಳಿಂದ ಸುಶೋಭಿತವಾಗಿ ಸಹೃದಯರಾದ ಪ್ರೇಕ್ಷ ... Legered of Upagupta, Buddhism Vol, I, No. 2.