ಪುಟ:ಅಶೋಕ.djvu/೯೪

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಅಶೋಕ ಅಥವಾ ಪ್ರಿಯದರ್ಶಿ. Absoooohnsorys Anonno ಹವು ನಿರ್ಮಿಸಲ್ಪಟ್ಟಿತು, ಭಿಕ್ಷುಗಳು ಕುಳಿತುಕೊಳ್ಳುವದಕ್ಕೆ ತರತರದ ಶಿಲ್ಪನೈಪುಣ್ಯವುಳ ಆಸನಗಳು ಮೊದಲಾದವುಗಳಿಂದ ಸಭಾಗೃಹವು ಸಜ್ಜು ಮಾಡಲ್ಪಟ್ಟಿತು, ಅದರ ನಡುವೆ ಪೂರ್ವಮುಖವಾಗಿ ಒಂದು ಸುಂದರವಾದ ಆಸನವು ಬುದ್ದದೇವನ ಸಲುವಾಗಿ ನಿರ್ಮಿಸ ಲ್ಪಟ್ಟಿತು, ವರ್ಷಾವಾಸದ ಎರಡನೆಯ ತಿಂಗಳ +ಎರಡನೆಯ ದಿವಸ ಧರ್ಮಸಂಗೀತಿಯ ಕೆಲಸವು ಆರಂಭಿಸಲ್ಪಟ್ಟಿತು, ಕ್ರಮದಿಂದ ಭಿಕ್ಷುಗಳೆಲ್ಲರು ಆ ಸುಂದರವಾದ ದೊಡ್ಡ ಸಭಾ ಗೃಹದಲ್ಲಿ ಸಮ್ಮಿಲಿತರಾದರು. ಆದರೆ ಅನಂದನು ಮಾತ್ರ ಇನ್ನೂ ಬರಲಿಲ್ಲ. ಆತನು ಬಾರ ದಿರುವ ಕಾರಣವನ್ನು ಒಬ್ಬರನ್ನೊಬ್ಬರು ಕೇಳತೊಡಗಿದರು. ಅಷ್ಟರಲ್ಲಿ ಅರ್ಹತ್ಪದವನ್ನು ಹೊಂದಿದ ಆನಂದನು ಅಲೌಕಿಕ ಶಕ್ತಿಯಿಂದ ಆಕಾಶಮಾರ್ಗದಿಂದ ಬಂದು ತನಗಾಗಿ ಕಾದಿಟ್ಟ ಆಸನದಲ್ಲಿ ಕುಳಿತನಂತೆ. ಆ ಧರ್ಮಸಭೆಯಲ್ಲಿ ಎಲ್ಲರ ಸಮ್ಮತಿಯಿಂದ ಪಿಟಿಕತ್ರ ಯದ ವಿನಯ, ಸೂತ್ರ, ಅಭಿಧರ್ಮ ಎಂಬ ಮೂರು ಭಾಗಗಳನ್ನು ಸಂಗ್ರಹಿಸುವ ಭಾರವು ಕ್ರಮದಿಂದ ಉಪಾಲಿ, ಆನಂದ, ಮಹಾಸ್ಥವಿರ ಕಾಶ್ಯಪ ಇವರಿಗೆ ಅರ್ಪಿಸಲ್ಪಟ್ಟಿತು. ಮಹಾಕಾಶ್ಯಪನು ಸಭಾಪತಿಯ ಸ್ಥಾನವನ್ನು ಸ್ವೀಕು ಉಪಾಲಿಯನ್ನು ಕುರಿತು ವಿನಯ ಸಂಬಂಧವಾಗಿ ಪ್ರಶ್ನೆಗಳನ್ನು ಮಾಡತೊಡಗಿದನು, ಉಪಾಲಿಭಿಕ್ಷುವು ಆತನ ಪ್ರಶ್ನೆಗಳಿಗೆ ಸ್ಪಷ್ಟವಾಗಿ ವಿವರಣೆಯನ್ನು ಹೇಳಿ ಸಮಾಧಾನಮಾಡಿದನು. ಈ ರೀತಿಯಿಂದ ವಿನಯ ದಲ್ಲಿ ಸೇರಿದ ಎಲ್ಲ ನಿಯಮಗಳು ಸಂಗ್ರಹಿಸಲ್ಪಟ್ಟವು, ಮಹಾಕಾಶ್ಯಪನು ಇದೇಮೇರೆಗೆ ಧರ್ಮವಿಷಯಕವಾಗಿ ಆನಂದನನ್ನು ಕುರಿತು ಪ್ರಶ್ನೆ ಮಾಡಿದನು. ಅನಂದನು ಧರ್ಮದ ಸುಂದರವಾದ ವ್ಯಾಖ್ಯೆಯನ್ನು ಹೇಳಿ ಗೌತಮಬುದ್ಧನ ಉಪದೇಶಗಳ ಯಥಾರ್ಥಸ್ವರೂ ಪವನ್ನು ಪ್ರಕಟಮಾಡಿದನು. ಈ ರೀತಿಯಾಗಿ ಸೂತ್ರಪಿಟಕವು ಸಂಗ್ರಹಿಸಲ್ಪಟ್ಟಿತು. ವಿನಯ ಮತ್ತು ಸೂತ್ರ ಇವುಗಳಲ್ಲಿ ಬಾರದ ಬೌದ್ಧ ಧರ್ಮದ ಬೇರೆ ತತ್ವಗಳನ್ನು ಸರಿ ಯಾಗಿ ವಿಚಾರಮಾಡಿ ಮಹಾಕಾಶ್ಯಪನು ತಾನೇ ಅಭಿಧರ್ಮವೆಂಬ ಭಾಗವನ್ನು ರಚಿಸಿ ದನು. ಈ ಮೇರೆಗೆ ಏಳುತಿಂಗಳವರೆಗೆ ನಡೆದ ಧರ್ಮಸಭೆಯು ಮುಗಿಯಿತು. ಮಹಾವಂಶದಲ್ಲಿ ಹೇಳಿರುವದೇನಂದರೆ-ಅಜಾತಶತ್ರುವಿನ ಘಾತುಕಪುತ್ರನಾದ ಉದಯಿಭದ್ರನು ತಂದೆಯ ಕೊಲೆಮಾಡಿ ಸಿಂಹಾಸನವನ್ನಾಕ್ರಮಿಸಿ ೧೬ ವರ್ಷ ರಾಜ್ಯ ವಾಳಿದನು. ಉದಯಿಭದ್ರನ ಮಗನಾದ ಅನುರುದ್ದ ಕನೂ ಅನುರುದ್ದ ಕನ ಮಗನಾದ ಮುಂಡನೂ ಇದೇಮೇರೆಗೆ ತಮ್ಮ ತಂದೆಯ ಕೊಲೆಮಾಡಿ ಸಿಂಹಾಸನದ ಮೇಲೆ ಕುಳಿ ತರು, ದೇಶದ ಜನರೆಲ್ಲರು ಇದನ್ನು ನೋಡಿ ಅಸಹ್ಯಪಟ್ಟರು, ಈ ಪ್ರಕಾರದ ದುಷ್ಟ ಕೃತಿಯನ್ನು ನೋಡಿ ಇನ್ನು ತಾಳಲಾರದೆ ಪಿತೃಘಾತಮಾಡುವ ಈ ವಂಶವನ್ನೇ ಇಲ್ಲ + ಶ್ರಾವಣ ಶುಕ್ಲ ಪಕ್ಷದ ಪ್ರತಿಸದೆ ಅಥವಾ ದ್ವಿತೀಯ. - + ಇದ್ದಯುಗದಲ್ಲಿ ನೆರೆದ ೪ ಸಭೆಗಳಿಗೆ ಧರ್ಮಸ೦ಗೀತಿ ಎಂದು ಹೇಳುವರು. ಯಾಕಂದರೆ ಈ ಸಭೆಗಳಲ್ಲಿ ಸ್ಥವಿರರು ಶಾಸ್ತ್ರಗ್ರಂಥಗಳನ್ನೆಲ್ಲ ಸಂಗೀತ ಸ್ವರದಿಂದ ಓದುತ್ತಿದ್ದರು, ಅದರಿಂದ ಆ ಸಭೆಗಳಿಗೆ ಧರ್ಮ ಸ೦ಗೀತಿ ಎನ್ನು ತ್ತಿದ್ದರು.