ವಿಷಯಕ್ಕೆ ಹೋಗು

ಪುಟ:ಉತ್ತರ ಕರ್ನಾಟಕದ ಜಾನಪದ ಕಥೆಗಳು.pdf/೧೩೯

ವಿಕಿಸೋರ್ಸ್ದಿಂದ
ಈ ಪುಟವನ್ನು ಪ್ರಕಟಿಸಲಾಗಿದೆ
೧೧೨
ಜನಪದ ಕಥೆಗಳು

“ನಾನು ಹುಚ್ಚಿ ಸತ್ತವರನ್ನು ನೆನೆಯಲಿಲ್ಲ. ಬಿದ್ದು ಹೋದ ಹಲ್ಲುಗಳನ್ನು
ನೆನಪಿಸಿಕೊಂಡು ಹಾಗೆ ನುಡಿದೆ - ಏನು ಹೋದೆಯೋ ನನ್ನ ರುಚಿಗಾರ -
ಸವಿಗಾರ ಎಂದು.” ಮುದಿಕೆ ಅರ್ಥವನ್ನು ಸ್ಪಷ್ಟಗೊಳಿಸಿದಳು.
“ಅಹುದೇ ಅಜ್ಜಿ ? ನಾನು ಬೇರೆಯೇ ತಿಳಿದಿದ್ದೆನಲ್ಲ !” ಎಂದು ನೆರೆಯವಳು
ವಿಷಯವನ್ನು ಪೂರ್ತಿಗೊಳಿಸಿದಳು.