ಪುಟ:ಉತ್ತರ ಕರ್ನಾಟಕದ ಜಾನಪದ ಕಥೆಗಳು.pdf/೧೪೧

ವಿಕಿಸೋರ್ಸ್ದಿಂದ
ಈ ಪುಟವನ್ನು ಪ್ರಕಟಿಸಲಾಗಿದೆ

೧೧೪

ಜನಪದ ಕಥೆಗಳು

ಗಂಡಗ ಉಣಿಸಿದಳು. ನಾದಿನಿ ಮತ್ತು ಅವಳ ಮಕ್ಕಳಿಗೆ ನವಣಕ್ಕಿ ಬಾನ ತಪ್ಪಲಿಲ್ಲ.

ಅಣ್ಣ ಹರ್‍ಯಾಹೊತ್ತಿಗಿ ಹೊಲಕ್ಕೆ ಹೋಗುವಾಗ-"ತಂಗಿ ಮಕ್ಕಳೊಂದಗಿತ್ತಿ. 8-10 ರೊಟ್ಟಿ ಮಾಡಿ ಕಟ್ಟು" ಎಂದ. ಹೂ ಎಂದ ಹೆಂಡತಿ ನಸುಕಿನಾಗೆದ್ದು ರೊಟ್ಟಿ ಮಾಡಲಿಲ್ಲ. ದೊಡ್ಡ ದೊಡ್ಡ ಹಲುಪಿಕುಳ್ಳು ತಂದು, ಕುಂಚಿಗ್ಯಾಗ ಹಾಕಿ ಕಟ್ಟದಳು. ಅಲ್ಲೇ ಹೋಗಿ ಉಟುಗೋರಿ,ವ್ಉಟುಗೊಂಡು ಮೆರೀರಿ ಎಂದು ಅರಿಬಿ ಬಿಂಡೆ ತಂದಿಕ್ಕಿದಳು. ಮನಸ್ಯಾಗ ಒಂದೊಂದು ಬಿಲ್ಲೆ ರೊಟ್ಟಿ ಕೊಟ್ಟಳು.

ಹಾದ್ಯಾಗ ಅಣ್ಣನ ಹೊಲ. ಸೌತೀ ಬಳ್ಳಿಯ ಗುಂಟ ಕಾಯೀನೆ ಕಾಯಿ ಹರವಿದ್ದವು. ಪೋರಗೋಳಿಗಿ ಹಸಿವಿ ಆಗಿದ್ದವು. ಅವು ಸವತೀಕಾಯಿ ಕಡಕೊಂಡು ತಿಂದವು. ಹೊಲದೊಳಗಿದ್ದ ಆಳುಮಕ್ಕಳು -"ನೀ ಯಾರವ್ವ? ಇಲ್ಲಿಯಾಕ ಬಂದೀದಿ" ಎಂದು ಬೆದರಿಸಿದವು. "ಚಂದಪ್ಪನ ತಂಗಿ ಅಗಬೇಕು" ಎಂದಳು. ವವಾಳಿ ಸವತೀಕಾಯಿ ತಾಯಿಮಕ್ಕಳು ತಿಂದರು; ಕುಂಚಿಗ್ಯಾಗ ಕಟಗೊಂಡು ಮುಂದ ನಡೆದರು. ಹೊಂಟು ನಿಂತಾಗ ಮನಸು ತುಂಬಿ ಹರಕಿ ಕೊಟ್ಟಳು"ಕಂಟಿಕೊತ್ಹಂಗ ಹೊಲದ ಬೆಳೀ ಬೆಳೀಲಿ ಮುತ್ತು ರತ್ನ ಬೆಳೀಲಿ. ನಮ್ಮಣ್ಣ ಆಶುಳ್ಳವ ಆಗಲಿ. ಶಂಭರವರ್ಷ ಆಯುಷ್ಯಾಗಲಿ" ಎಂದು.

ಹಾದ್ಯಾಗ ಹಳ್ಳ ಹರೀತಿತ್ತು. ಕೂಸುಗಳು ಹಸಿದು ಕಂಗಾಲಾಗಿದ್ದವು.

"ಮಗಾ, ನಿಮ್ಮತ್ತಿ ಬುತ್ತಿ ಕೊಟ್ಟಾಳ ಬಿಚ್ಚಿರೋ" ಅಂದಳು. ಬಿಚ್ಚಿನೋಡುತಾನ ಬುತ್ತಾಗ ಕುಳ್ಳ ಅದೆ, ಹೆಂಡಿ ಅದೆ. ಅರಬೀಗಂಟನ್ನೂ ಬಿಚ್ಚಿನೋಡಿದರೆ ಅಲ್ಲಿ ಮಶಾಂಡದನ ಅರಬಿ ಅದ. ಅರಿಬಿ, ಕುಳ್ಳು ಎಲ್ಲಾ ಹರಿಯೂ ಗಂಗೆಯೊಳಗ ಒಗದು ಬಿಟ್ಟಳು. "ಶಿವ ನಮಗೆ ಹೆಂಥಾ ವೇಳೆ ತಂದೆಪ್ಪಾ" ಎಂದು ಅವ್ವಮಕ್ಕಳು ಗೋಳೋ ಎಂದು ಅತ್ತರು.

ಶಿವಪಾರ್ವತಿ ಆಕಡಿಂದ ಬಂದರು. "ಯಾಕವ್ವ, ಯಾಕಳತೀ" ಎಂದು ಕೇಳಿದರು. "ದೈವುಳ್ಳ ಅಣ್ಣನ ಮನೀಗಿ ಹೋದ್ರ ಅತ್ತಿಗಿ ಬಿಲ್ಲೆರೊಟ್ಟಿ ಮಕ್ಕಳ ಕೈಯಾಗ ಕೊಟ್ಟಳು. ಬುತ್ತಿ ಅಂತ ಹೇಳಿ ಕುಳಬಾನದಾಗಿನ ಕುಳ್ಳ ಕಟ್ಯಾಳ. ನಂದು ಖೊಟ್ಟಿ ನಸೀಬ" ಎಂದಳು.

ಶಿವಾ ಅಂದ "ತಂಗೀ ಮನೀಗಿ ಹೋಗು. ಶಿವಪೂಜಿ ಮಾಡು. ನೀ ಬಯಸಿದ್ದು ಸಿಗತಾದ."

ಆಕಿ ಮನೆಗೆ ಹೋದಳು. ಮೈತಕೊಂಡು, ದೀಪ ಹಚ್ಚಿ ದೇವರ ಮುಂದೆ ಅಡ್ಡಬಿದ್ದಳು. ಮನಸೀಗಿ ಬಂದದ್ದೆಲ್ಲ ಬೇಡಿದಳು. ಮನೀತುಂಬ ತುಂಬಿತು.