ಪುಟ:ಓಷದಿ ಶಾಸ್ತ್ರ.djvu/೧೩೦

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

ಅಧ್ಯಾ] ಪುಸ್ಮರೇಣು ಸ್ಪರ್ಶವೂ, ಗರ್ಭಧಾರಣವೂ. 113 ಧೂಳಿಯನ್ನು ಗಾಳಿಯು ಹಾರಿಸಿಕೊಂಡು ಹೋಗದಹಾಗೆ, ತನ್ನಲ್ಲಿಯೇ ನಿಲ್ಲಿಸಿಕೊಂಡು, ಅವುಗಳು ಮೊಳೆಯುವಂತೆ ಮಾಡುವುದೇ ಕೀಲಾಗದ ಕೆಲಸವಾಗಿದೆ. ಅಂಡಾಶಯವಾದರೆ ಅಂಡಗಳನ್ನು ವಹಿಸುವುದಕ್ಕೂ, ಅವುಗ ಳನ್ನು ಗರ್ಭಾಧಾನವಾದಮೇಲೆ, ಬೀಜಗಳಾಗುವವರೆಗೂ ಕಾಪಾಡಿ, ಆಮೇಲೆ ಬೀಜಗಳನ್ನು ಹೊರಬೀಳಿಸುವುದಕ್ಕೂ, ಏರ್ಪಡಿಸಲ್ಪಟ್ಟ ಒಂದು ಅಂಗವಾಗಿ ರುವುದು. ಚಿಕ್ಕ ಗೂಡುಗಳ ಮೊತ್ತವೇ ಅಂಡ ವೆನಿಸುವುದು. ಇದು ಪಕ್ಷ ವಾಗಿ, ಗರ್ಭಾಧಾನಕ್ಕೆ ಸಿದ್ದವಾಗಿರುವ ತರುಣದಲ್ಲಿಯೇ, ಅಂಡದಲ್ಲಿ ಕೆಲವು ವಿಭಾಗಗಳು ಏರ್ಪಡುವುವು. ಈ ಸಮಯದಲ್ಲಿಯೇ, ಅಂಡವು ಅಂಡಪಧಾ ನ ಭಾಗವಾಗಿಯೂ, ಅಂಡಕ್ಕಾಗಿಯ, ವಿಭಾಗಿಸಲ್ಪಟ್ಟಿರುವುವು. ಅಂಡ ತಕ್ಕುಗಳೆರಡುಂಟು. ಇವು ಅಂಡಪಧಾನವನ್ನು ಚೆನ್ನಾಗಿ ಎಲ್ಲಾ ಕಡೆಗೆ ಇಲ್ಲಿಯ ಮುಚ್ಚಿಕೊಂಡಿರುವುವು. ಒಂದು ಕಡೆಯಲ್ಲಿ ಮಾತು ಒಂದು ಚಿ ಕರಂಧವಿರುವುದು. ಈ ದ್ವಾರವೇ (ಅಂಡವಿವರ” ವೆನಿಸುವುದು, ಅಂಡಪ)ಧಾನದಲ್ಲಿ, ಎಲ್ಲಾ ಚಿಕ್ಕ ಗೂಡುಗಳಿಗಿಂತಲ, ಒಂದುವಾತ) ಬಹಳ ದೊಡ್ಡದಾಗಿ ಬೆಳೆದಿರುವುದು. ಇದೇ ಪಿಂಡಾಶಯ?, ವೆನಿಸುವುದು. ಪಿಂಡಾಶಯದಲ್ಲಿ, ಅಂಡವಿವರದ ಕಡೆಗೆ, ಮೂರು * ಜೀವಪರಮಾಣುಗಳು ಕಾಣುವುವು. ಇದಕ್ಕೆ ಇದಿರಾಗಿಯ ಮರು ಜೀವ ಪರಮಾಣುಗಳಿರುವು ವು. ಇವೆರಡು ಗುಂಪುಗಳಿಗೂ ನಡುವೆ, ಒಂದು ದೇವಪರಮಾಣು ವಿರುವುದು, ಎಲ್ಲಾ ಸೇರಿ ಮೊತ್ತಕ್ಕೆ ಪಿಂಡಾಶಯ ವೊಂದರಲ್ಲಿ ಏಳು

  • ಜೀವಪರಮಾಣುವೆಂಬುದು ಜೀವಾಣುವಿನೊಳಗೆ ಅಡಗಿರುವ ಉಂ ಡೆಯು, ಇದು ಜೀವಾಣುವಿನ ಪ್ರಧಾನಭಾಗವು.