ಪುಟ:ಓಷದಿ ಶಾಸ್ತ್ರ.djvu/೧೩೧

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

114 ಓಷಧಿ ಶಾಸ್ತ್ರ ) [VIII SoJy ಜೀವ ಪರಮಾಣುಗಳಿರುವುವು. ಅಂಡ ಪಧಾನದಲ್ಲಿರುವ ಪಿಂಡಾಶಯದಲ್ಲಿ, ಅಂಡವಿವರಕ್ಕೆ ಸಮೀಪವಾಗಿ, ಮರು ದೇವಪರಮಾಣುಗಳಿದ್ದರೆ, ಅದನ್ನೇ ಗರ್ಭಾಧಾನಕ್ಕೆ ಅ೦ಡವು ಸಿದ್ದವಾಗಿರುವುದೆಂಬ ಸೂಚನೆಯಾಗಿ ಗಹಿಸಿಕೊ ಳ್ಳಬೇಕು. ಈ ತರುಣದಲ್ಲಿಯೇ ಕೀಲಾಗುಗಳ ಅ೦ಟುಳ್ಳವುಗಳಾಗಿರು ವುವು. ಮಕರಂದ ರೇಣುಗಳ ಮೊಳೆಯಾಗಿ, ಅವುಗಳ ನಾಳಗಳು ಕೀಲದ ಒಳಹೊಕ್ಕು ಹೋಗುವುವು. ಮಕರಂದ ರೇಣುನಾಳವು ಅಂಡವಿವರವನ್ನು ಸವಿಾಪಿಸಿದೊಡನೆ, ಒಳ ಹೊಕ್ಕು, ಅ೦ಡಪಧಾನದ ಅಂಚಿನಲ್ಲಿ ಬರುವಾಗ, ಅಲ್ಲಿ ಇದರ ಜೀವಪರಮಾಣುವು ಪಿಂಡಾಶಯದಲ್ಲಿ ನುಗ್ಗಿ, ಅಂಡವಿವರಕ್ಕೆ ಸಮೀಪದಲ್ಲಿರುವ ಮರು ಜೀವ ಪರಮಾಣುಗಳ ನಡುವೆ ಇರುವುದ ರೊಡನೆ ಕಲೆತು ಹೋಗುವುದು. ಎರಡಸೇರಿ ಐಕ್ಯ ಹೊಂದಿ ಒಂದೇ ಜೀವ ಪರಮಾಣುವಿನ ಉಂಡೆಯಾಗಿ ಬಿಡುವುದು. ಹೂಗಳಲ್ಲಿ ಇದೇ ಗರ್ಭಾಧಾನ ವೆನಿಸುವುದು (99 ನೆಯ ಪಟದಲ್ಲಿ ನೋಡಿರಿ, ಗರ್ಭಾಧಾನದಿಂದುಂಟಾದ ಈ ಜೀವಪರಮಾಣುವು, ಪುನಃ ವಿಭಾಗ ಹೊ೦ದುವುದಕ್ಯಾರಂಭಿಸಿ, ಸಣ್ಣ ಗೂಡುಗಳು ಹೆಚ್ಚಾಗಿ ಉಂಟಾಗು ವುವು. ಈ ಚಿಕ್ಕ ಗೂಡುಗಳು ಗರ್ಭಕೋಶದಲ್ಲಿಯೇ ಮೊಳೆಯುರೂಪವಾಗಿ ಬದಲಾಯಿಸುವುವು. ಮೊಳೆಯು ಬೆಳೆದಹಾಗೆಲ್ಲಾ ಪಿಂಡಾಶಯದ ಸುತ್ತಲೂ ಇರುವ ಅಂಡಪಧಾನದ ಟಿಕಗೂಡುಗಳು ಕೆಡುತ್ತ, ಗರ್ಭವು ಬೆಳೆಯುತ್ತ ಲೇ ಬರುವುದು, ಅಂಡಕ್ಕುಗಳು ಕೂಡ ಬೆಳೆಯಲಾರಂಭಿಸುವುವು. ಅಂಡ ತಕ್ಕುಗಳಿಂದ ಮುಚ್ಚಲ್ಪಟ್ಟು, ಬೆಳೆದ ಪಿಂಡಾಶಯವೂ, ಪಿಂಡವೂ, ಸೇರಿ ಬೀಜ ವೆನಿಸುವುದು. ಗರ್ಭಾಧಾನಕ್ಕೆ ಮಕರಂದರೇಣುವಿನ ಸ್ಪರ್ಶವು ಅವಶ್ಯವಾದುದರಿಂದ ಈ ರೇಣುಗಳು ಕೀಲಾಗದ ಮೇಲೆ ಬಿಳುವುದಕ್ಕೆ ಸಹಾಯಕಗಳರಬೇಕಲ್ಲವೆ?