ಪುಟ:ಓಷದಿ ಶಾಸ್ತ್ರ.djvu/೧೭೨

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

ಅಧ್ಯಾ.. ಬೀಜಗಳು ಮೊಳೆತು ಬೆಳೆಯುವ ಕುಮ, 155 ಗಡಗಿರುವ ಅದರ ಮೇಲಿನದಂಟ ಬೆಳೆಯಲಾರಂಭಿಸುವುದು. ಅಂಕು ರದ ಕೆಳ ದಂಟು ಭೂಮಿಯನ್ನು ಹುಡುಕಿಕೊಂಡೇ ಹೋಗುವಂತೆ, ಅದರ ಮೇಲಿನದಂಟು ಭೂಮಿಯನ್ನು ಬಿಟ್ಟು, ಬೆಳಕನ್ನೂ ಗಾಳಿಯನ್ನ ಹುಡುಕಿ ಕೊಂಡು ಮೇಲಕ್ಕೆ ಎದ್ದು ಊರ್ಧ್ವಮುಖವಾಗಿಯೇ ಬೆಳೆಯುವುದು. _132ನೆಯ ಪಥದಲ್ಲಿ ಐದನೆಯದಾಗಿ ತೋರಿಸಿರುವ ಚಿತ್ರದಲ್ಲಿ, ಅಂಕು ರದಳವು ಅಂಟಿಕೊಂಡಿರುವ ರೀತಿಯ, ಅಂಕುರದ ಮೇಲಿನ, ಮತ್ತು ಕೆಳ ಗಿನ ದಂಟುಗಳ ಚೆನ್ನಾಗಿ ಕಾಣಿಸಲ್ಪಟ್ಟಿರುವುವು. ಅಂಕುರದಳದಲ್ಲಿ ದಂಟು ಸೇರಿರುವ ಜಾಗಕ್ಕೆ ಕೆಳಭಾಗದಲ್ಲಿ ಇರುವುದೇ ಮೊಳೆಯ ಕೆಳಭಾಗವು; ಎಂ ದರೆ ಕೆಳಗಿನದಂಟು, ಬೀಜದಳದ ಮೇಲೆ ನಿಂತಿರುವುದೇ ಅಂಕುರದ ಮೇಲಿನ ದಂಟು, ಅಂಕುರದ ಮೇಲಿನ ದಂಟಿನಲ್ಲಿ ಸೂಕ್ಷ್ಮವಾದ ಎಳೇ ಎಲೆಗಳೆರಡು ಸೇರಿಕೊಂಡಿರುವುದನ್ನೂ ನೋಡಿರಿ. ಪಾರಿವಾಳದ ಬೀಜಗಳನ್ನಾಗಲಿ, ಬೇರೆ ಯಾವ ಬೀಜಗಳನ್ನಾಗಲಿ, ನೆಲ ದಲ್ಲಿ ನಟ್ಟು, ನೀರು ಸುರಿಯುತ್ತಾ ಬಂದರೆ, ನಾಲೈದು ದಿನಗಳ ಮೇಲೆ ಮೊಳೆ ಗಳು ಕೊಕ್ಕೆಯಂತೆಬಗ್ಗಿ, ನೆಲವನ್ನು ಭೇದಿಸಿಕೊಂಡು ಹೊರಕ್ಕೆ ಬರುವುದು. ಈ ಕೊಕ್ಕೆಯಂತಿರುವ ಭಾಗವು ಅಂಕುರದ ಕೆಳಗಿನದಂದೇ. ಹೀಗೆ ಬಗ್ಗಿ ರು ವುದು ಭೂಮಿಯನ್ನು ಭೇಧಿಸಿಕೊಂಡು ಬರುವುದಕ್ಕೆ ಸಹಾಯಕವಾಗಿದೆ. ಈ ಕೊಕ್ಕೆಯು ಸ್ವಲ್ಪ ಸ್ವಲ್ಪವಾಗಿ ಉದ್ದವಾಗುತ್ತಾ ಅದರ ಒಂದುಮೊನೆಯು ಭೂಮಿಯಲ್ಲಿ ಸೇರಿನಿಲ್ಲುವುದು, ಮತ್ತೊಂದು, ಅಂಕುರ ದಳಗಳೊಡನೆ ಭೂ ಮಿಯನ್ನು ಬಿಟ್ಟು ಹೊರಕ್ಕೆ ಎದ್ದು ಬರುವುದು. ಹೀಗೆ ಬೆಳೆಯು ದದರಿಂದ ಕೆಳ ದಂಟು, ಮೇಲಿನದಂಟು ಇವೆರಡೂ ದಂಡಾಕಾರವಾಗಿ ಉದ್ದವಾಗುವುದು. ನೆಲವು ಕಠಿನವಾಗಿರುವುದರಿಂದ, ಬೀಜಕ್ಕು ಒಳಗೇನಿಂತು ಬಿಡುವುದು. ಮ ಣ್ಣು ಮೃದುವಾಗಿದ್ದರೆ, ಅಂಕುರ ದಳದೊಡನೆ ತೂಕ ಸೇರಿಕೊಂಡು, ದಳ ಗಳು ವಿಭಾಗಹೊ೦ದುವಾಗ ಬಿದ್ದು ಹೋಗುವುದುಂಟು. ಬೀಜದಳಗಳು ಬೇರೆ