ಪುಟ:ಓಷದಿ ಶಾಸ್ತ್ರ.djvu/೩೦೮

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

ಅಧ್ಯಾ] ಗಿಡಗಳ ಒಳಗಿನ ಸ್ವರೂಪ, 291 ನಾವು ಇದುವರೆಗೆ ಎಲ್ಲಾ ಭಾಗಗಳನ್ನೂ ಪರಿಶೋಧಿಸಿದುದರಿಂದ, ಒಂದು ವಿಸ್ಮಯವು ನನಗೆ ಚೆನ್ನಾಗಿ ಗೊತ್ತಾಗುವುದು, ಆವುದೆಂದರೆ-ಗಿಡ ಗಳ ಭಾಗಗಳ ಗೂಡುಗಳ ಮೊತ್ತವೇ ಆಗಿರುವುದೆಂಬುದು, ಗಿಡದ ಎಲ್ಲಾ ಭಾಗಗಳ ಮೊಗ್ಗೆಯ ತುದಿಯಿಂದಲೇ ಬೆಳೆಯುವುವಾದುದರಿಂದ, ಇವುಗಳನ್ನು ಮೊಗ್ಗೆಯ ತುದಿಯಲ್ಲಿರುವ ಗೂಡುಗಳ ಬದಲಾವಣೆಗಳೆಂದೇ ಎಣಿಸಬೇಕು ಎಂದರೆ, ಮೊಗ್ಗೆಯ ತುದಿಯಲ್ಲಿ ಜೀವಾಣುಗಳಿಂದ ತುಂಬಿದ ಗೂಡುಗಳು ಬೆಳೆದು ಕವಲೊಡೆವುದರಿಂದಲೇ ಸಮಸ್ತಭಾಗಗಳ ಉಂಟಾ ಗುವುವು. ಕೆಲವು ಗೂಡುಗಳು ಮುಂದವಾದ ಪರೆಗಳನ್ನು ಹೊಂದುವುದೂ ಕೆಲವು ನಾಳಗಳಾಗಿ ವ್ಯತ್ಯಾಸ ಹೊಂದುವುದೂ, ಇವೆಲ್ಲವೂ ಜೀವಾಣುವಿನ ಕೆಲಸವೇ. ಜೀವಾಣುವು ದಾರುವಿನ ಗೂಡುಗಳಲ್ಲಿಯ ನಾಳಗಳಲ್ಲಿ ಮತ್ತು ದಿಂಡಿನ ಗೂಡುಗಳಲ್ಲಿಯೂ ಕೆಟ್ಟು ಹೋಗುವುವು. ಇತರ ಕಡೆಗಳಲ್ಲಿರುವ ಗೂಡುಗಳಲ್ಲಿ ಸೇರಿ ಕೊಂಡು ನಿಂತಿರುವುವು, ಜೀವಾಣುವು ಹೇರಳವಾಗಿ ನಿಂತಿರುವುದು, ನಲ, ಎಲೆ, ಬೀಜ, ಇವುಗಳ ಗೂಡುಗಳಲ್ಲಿಯೇ, ಎಲೆಗಳ ಗೂಡುಗಳಲ್ಲಿರುವ ಜೀವಾಣುವಿನಲ್ಲಿ ಎಲೆಯ ಹಸುರು ರೇಣು ಗಳು ಹುದುಗಿರುವುವು. ಇವಲ್ಲದೆ ಬೇರೇ ರೇಣುಗಳ ಬೇವಾಣುವಿನಲ್ಲಿ ಕಾಣುವುವು. ಇವೇ ಹಿಟ್ಟಿನ ರೇಣುಗಳು. ಈ ಹಿಟ್ಟಿನ ರೇಣುಗಳೆ ಗಿಡಗ ಆಗೆ ಆಹಾರ ಪದಾರ್ಥವಾಗಿರುವುವು. ಇವು ಎಲೆಯ ಹಸುರುಳ್ಳ ಗಿಡಗಳ ಜೀವಾಣುವಿನಲ್ಲಿ ಮಾತ್ರವೇ ಇರುವುವು.