ಪುಟ:ಓಷದಿ ಶಾಸ್ತ್ರ.djvu/೩೦೯

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

292 ಓಷಧಿ ಶಾಸ್ತ್ರ ) [XIV ನೆಯ ೧೪ ನೆಯ ಅಧ್ಯಾಯ. ಗಿಡಗಳ ಬಾಳಿಕೆಯ ಕೆಲಸವೂ. -೫೯೫-– ಗಿಡಗಳ ಸ್ವರೂಪವನ್ನೂ, ಅವುಗಳ ಅವಯವಗಳೆಳಗಿನ ವ್ಯತ್ಯಾಸ ನನ್ನಾ ತಿಳಿದುಕೊಂಡೆವು. ಇನ್ನು ಮೇಲೆ ಈ ಆವಯವಗಳು ಮಾಡುವ ಕೆಲಸಗಳನ್ನೂ, ಆ ಕೆಲಸಗಳು ನಡೆಯುವ ರೀತಿಯನ್ನೂ ಕುರಿತು ವಿವರಿ ಸಲ್ಪಡುವುದು. ಗಿಡಗಳು ಮತ್ತು ಜಂತುಗಳು ಇವುಗಳ ಬಾಳ್ವಿಕೆಗೆ ಆಧಾರವಾದ ವಸ್ತುವು ಜೀವಾಣುವೆಂದೂ, ಈ ವಸ್ತುವು ಕೆಡದೆ ಒಳ್ಳೆಸ್ಥಿತಿಯಲ್ಲಿರುವ ವರಿಗೆ ಮಾತ್ರವೇ ದೇವವುಳ್ಳವುಗಳಲ್ಲಿ ಎಲ್ಲಾ ಚಲ್ಯಗಳೂ ನಡೆಯುವು ಎಂದೂ ಮೊದಲೇ ಹೇಳಲ್ಪಟ್ಟಿದೆ. ಗಿಡವೆಂಬುದು ಜೀವಾಣುಗಳಿಂದ ತುಂ ಬಿದ ಗೂಡುಗಳ ಸಮುದಾಯವೆನಿಸುವುದು. ಗಿಡವು ಚಿಕ್ಕದಾಗಿದ್ದರೆ, ದೇ ವಾಣುಕೋಶಗಳು ಸಂಖ್ಯೆಯಲ್ಲಿ ಸ್ವಲ್ಪವಾಗಿರುವುವು. ದೊಡ್ಡದಾಗಿದ್ದರೂ ಅವೂ ಹೆಚ್ಚಿ ಹೇರಳವಾಗಿರುವುವು. ದೊಡ್ಡ ಗಿಡಗಳಲ್ಲಿ ಗೂಡುಗಳು ಹೆಚ್ಚಾಗಿದ್ದರೂ, ವ್ಯತ್ಯಾಸಹೊಂದದೆ ನಿಲ್ಲುವ ಗೂಡುಗಳು ಕಡಿಮೆ. ಇ೦ತ ಹಗಿಡಗಳಲ್ಲಿ ನಡೆಯುವ ಕೆಲಸವು ಹಲವು ಬಗೆಯಾಗಿರುವುದರಿಂದ, ಕೆಲಸಕ್ಕೆ ತಕ್ಕಂತೆ ಗೂಡುಗಳ ಮಾರ್ಪಡುವುವು. ದಾರು, ಶಣ, ಇವುಗಳ ಭಾಗ ಗಳು ಹೀಗೆ ಮಾರ್ಪಟ್ಟ ಗೂಡುಗಳೇ, ಈ ಭಾಗಗಳಲ್ಲಿರುವ ನಾಳಗಳ, ಗೂಡುಗಳು ಒಂದಾಗಿ ಸೇರುವುದರಿಂದಾದ ಬದಲಾವಣೆಗಳೇ. ಬಹು ಸೂಕ್ಷವಾದ ಗಿಡಗಳಲ್ಲಿಯ, ಪಾಚಿ, ಅಣಬೆ, ಇವು ಗಳಂತಿರುವ ಗಿಡಗಳಲ್ಲಿಯ, ಗೂಡುಗಳು ಹೆಚ್ಚು ವ್ಯತ್ಯಾಸಹೊಂದುವುದೇ.