ಪುಟ:ಓಷದಿ ಶಾಸ್ತ್ರ.djvu/೩೩೭

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

320 ಓಷಧಿ ಶಾಸ್ತ್ರ ) (XIV ನೆಯ ಕೆಲಸವು ಬೇರಿನ ರೋಮಗಳಿಗೆ ಸೇರಿದುದಾಗಿದೆ. ಕೆಲವು ಗಿಡಗಳ ಬೇರು ಗಳು ಈ ಕೆಲಸವನ್ನು ಮಾಡುವುದರ ಸಂಗಡ, ಆಹಾರಕ್ಕೆ ಬೇಕಾದ ಪದಾ ರ್ಥಗಳನ್ನು ಸೇರಿಸಿಡತಕ್ಕ ಕಣಜಗಳ ಆಗಿರುವುವು. ದಂಟು :-ಎತಿ ಮತ್ತು ಕಾಯಿಗಳನ್ನು ಹೊತ್ತಿರುವುದೂ, ದಾರು ಭಾಗವನ್ನು ಹೊಂದಿ, ಇದರಮಾರ್ಗವಾಗಿ ನೀರನ್ನು ಮೇಲಕ್ಕೇರಿಸಿ ಕೊಡು ವುದೂ ಬೇರಿನ ಸಂಗಡಸೇರಿರುವ ದಂಟುಗಳ ಕೆಲಸವಾಗಿದೆ. ಎಲೆಗಳು ಎಲೆಯಲ್ಲಿ ನಡೆಯುವ ಕಾರ್ಯಗಳು ಬೆಳಕಿನ ಸೇರುವೆ ಯಿಂದಾದ ಕೆಲಸವೂ ಜೀವಾಣು ಪದಾರ್ಥಗಳ ಸೇರುವಿಕೆಯ ಆಗಿದೆ. ನೀ. ರು ಎಲೆಯಿಂದ ಆವಿಯಾಗಿ ಹೊರಬೀಳುವುದು, ಇಂಗಾಲಾಮ್ಲವು ಒಳ ಹುಗು ವುದು ಮುಂತಾದ ಕಾರ್ಯಗಳು ಮೇಲೆ ಹೇಳಿದ ಕೆಲಸಗಳಿಗೆ ಅನುಕೂಲವಾ ದುವು, ಉಪ್ಪು, ನೀರು, ವಾಯು, ಮುಂತಾದ ಸಾಮಾನ್ಯ ವಸ್ತುಗಳನ್ನು ತೆಗೆದು ಕೊಂಡು, ಅವುಗಳಿಂದ ಆಹಾರ ಯೋಗ್ಯವಾಗಿರುವ ಪದಾರ್ಥಗಳನ್ನು ಮಾಡಿಕೊಳ್ಳುವುದೂ, ಆಹಾರ ಪದಾರ್ಥವನ್ನು ಜೀವಾಣುಪದಾರ್ಥಗಳನ್ನಾಗಿ ಬದಲಾಯಿಸುವುದೂ, ಇವೆಲ್ಲವೂ ಎಲೆಗಳಲ್ಲಿ ನಡೆಯುವ ಕೆಲಸವಾಗಿದೆ. * ಗಿಡಗಳ ಆಕಾರಗಳು ಬೆಳೆಯುವುದಕ್ಕೆ ಬೇಕಾದ ಪದಾರ್ಥಗಳು ಜೀವಾಣುವಿನಿಂದಲೇ ಒದಗಿಸಲ್ಪಡುವುವು. ಇವು ಜೀವಾಣುವಾಗಿಯ ಜೀವಾಣುವು ಗಿಡಗಳ ಭಾಗವಾದ ಗೂಡಿನ ಪರೆಗಳಾಗಿಯ, ಕೂಡಿಸಿಡುವು ದಕ್ಕೆ ಬೇಕಾದ ಹಿಟ್ಟಿನ ಪುಡಿ, ಎಣ್ಣೆ, ಸಕ್ಕರೆ ಮುಂತಾದ ಪದಾರ್ಥಗಳಾಗಿ ಯ, ವ್ಯತ್ಯಾಸಹೊಂದುವುದಕ್ಕೆ ಬೇಕಾದ ಶಕ್ತಿಯು ಜೀವಾಣುವಿನ ಸಂಗಡ ಗ್ರಾಣವಾಯುವು ಸಂಬಂಧಿಸುವುದರಿಂದಲೇ ಉಂಟಾಗುವುವು. ಗಾಳಿಯಲ್ಲಿ ರುವ ಪ್ರಾಣವಾಯುವೇ ಇದಕ್ಕೆ ಅವಶ್ಯವಾದ ವಾಯುವು - ಹೂಗಳ ಕೆಲಸವೇನಂದರೆ :-ಅಂಡಗಳನ್ನು ಹೊಂದಿ, ಗರ್ಭಾಧಾನ ಕ್ಕೆ ಸಹಾಯಕವಾದ ಸಾಧನಗಳುಳ್ಳವುಗಳಾಗಿ, ಬೀಜಗಳನ್ನುಂಟು ಮಾಡು ವುದೇ ಹೂಗಳ ಕೆಲಸವಾಗಿದೆ. -ಸE05