ಪುಟ:ಓಷದಿ ಶಾಸ್ತ್ರ.djvu/೩೫

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

18 ಓಸ್ಮಧಿ ಶಾಸ್ತ್ರ | (III ನೆಯ ನಾಲ್ಕು ಕಡೆಗೂ ವ್ಯಾಪಿಸುವುವು. ಗಿಡಗಳ ಬಲವಾಗಿ ನಿಂತು ಸ್ಥಿರಪಡು ವುವು, ದೊಡ್ಡ ಮರಗಳ ಬೇರು, ನೇರವಾಗಿ ಕೆಳಕ್ಕೆ ಹೊರಟು, ಹತ್ತು ಹದಿನೈದುಗಜಗಳ ಉದ್ದಕ, ಪಕ್ಕಗಳಲ್ಲಿ ಐವತ್ತು,ಅರವತ್ತು, ಕೆಲವು ವೇಳೆ ನೂರುಗಜಗಳ ದೂರಕ, ವ್ಯಾಪಿಸುವುದುಂಟು. ಇದಕ್ಕೆ ಉದಾಹರಣ ವಾಗಿ, ಆಲ, ಹುಣಿಸೆ, ಮುಂತಾದ ಮರಗಳ ಬೇರನ್ನು ಹೇಳಬಹುದು. ಈ ಮರಗಳಲ್ಲಿ ಕೊಂಬೆಗಳ, ಎಲೆಗಳ ಬಹಳವಾಗಿರುವುದರಿಂದ, ಅವೆಲ್ಲವುಗ ೪ಂದ ಆವಿಯಾಗಿ ಹೋಗುವ ಜಲಾಂಶವು ಬಹಳ ಹೆಚ್ಚು. ಆದುದರಿಂದ ಮೇಲೆಮೇಲೆ ಭೂಮಿಯೊಳಗಿಂದ ನೀರು ಒದಗಿ ಬಂದ ಹೊರತು, ಆಮರಗಳಿಗೆ ಬೇಕಾದಷ್ಟು ನೀರು ದೊರಕಲಾರದು. ಒಳಗಿನಿಂನ ವ್ಯಾಪಿಸಿಬರುವ ನೀರು, ಹೊರಗೆ ಆವಿಯಾಗಿ ಹೋಗುವ ನೀರಿಗಿಂತಲೂ ಹೆಚ್ಚು ಪ್ರಮಾಣವುಳ್ಳದಾ ಗಿರದಿದ್ದರೆ, ಒಳಗಿನಿಂದ ಬರುವ ನೀರು ಸಾಲದೆ, ದಿನದಿನಕ್ಕೆ ಅವು ಬಾಡಿ ಒಣಗಿ ಹೋಗುವುವು. ಹೀಗೆ ನೀರಿನ ಕೊರತೆಯು ಗಿಡಗಳಿಗೆ ಉಂಟಾಗದಂತಿರುವು ದಕ್ಕಾಗಿಯೇ, ಬೇರು ನಾಲ್ಕು ಕಡೆಗೂ ವ್ಯಾಪಿಸಿ, ನೀರನ್ನು ಹುಡುತುತ್ತಾ ಓಡು ತಿರುವುವು. ನೀರು ಭೂಮಿಯಲ್ಲಿ ಒಂದೇ ಕಡೆ ಬೇಕಾದಷ್ಟು ಇಲ್ಲದಿರುವುದ ರಿಂದಲೂ, ನೆಲದ ಮೇಲೆ ಮೇಲೆ ಬಹಳ ಸ್ಪಲ್ಪವಾಗಿರುವುದರಿಂದಲೂ, ಆ ಬೇ ರುಗಳು, ತೇವವಿರತಕ್ಕ ಕಡೆಗಳನ್ನೇ ಹುಡುಕಿಕೊಂಡು ಹೋಗುತ್ತಿರುವುವು. ಹೀಗೆ ಬೇರುಗಳು ಭೂಮಿಯಲ್ಲಿ ನಾಲ್ಕು ಕಡೆಯ ವ್ಯಾಪಿಸಿಬರುವುದರಿಂದ, ಮರಗಳು ಭೂಮಿಯಲ್ಲಿ ದೃಢವಾಗಿ ನಿಂತಿರುವುದ ಕ ಸಹಾಯಕವಾಗು ವುದು. ಬೇರುಗಳಲ್ಲಿ ನೀರು ಹೇಗೆ ಹೋಗುತ್ತಿರುವುದೆಂಬುದನ್ನು ತಿಳಿದು ಕೊಳ್ಳುವುದಕ್ಕೆ, ಬೇರಿನ ಕೊನೆಯ ಭಾಗಗಳನ್ನು ಚೆನ್ನಾಗಿ ಗಮನಿಸಿ ನೋ ಡಬೇಕು. ಹೊಸಬೇರುಗಳ ತುದಿಗಳು ಚಿಕ್ಕವುಗಳಾಗಿಯೂ ಸ್ವಲ್ಪ ದಪ್ಪ ನಾಗಿಯೂ ಇರುವುವು. ಬೇರಿನ ಕೊನೆಭಾಗಗಳು ಸ್ವಲ್ಪ ದೂರದಮಟ್ಟಿಗೆ ಒಂದು ಒರೆಯಿಂದ ಮುಚ್ಚಲ್ಪಟ್ಟಿರುವುವು. ತಾಳೆಗಿಡದ ಎಳೆ ಬಿಳಲುಗ ಳಲ್ಲಿ ಈ ಒರೆಗಳು ಚೆನ್ನಾಗಿ ಕಾಣುವುವು. ಬೇರಿನ ಕೆನೆ ಮತ್ತು ಅದರ