ಪುಟ:ಕಂಬನಿ-ಗೌರಮ್ಮ.pdf/೩೧

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿದೆ

ನಾನಈ೦ಡ ಗೌರಮ್ಮನವರು

೧೫

“ಹಾಗಾದರೆ ನೀವೇ ಹಾಕಿಸಿದ ಆ ಆಸನದ ಮೇಲೆ ಕುಳಿತು ನೀವು ನೋಡುತ್ತಿರುವದೇನು ?” ಎಂದು ಕೇಳಿದೆ. ಈ ದೃಷ್ಟಿ ದೂರ ಹರಿಯ ಲೆಂದೇ ಅದನ್ನು ಹಾಕಿಸಿರುವೆ. ನನ್ನ ಕಣ್ಣಿನ ಆವಸ್ಥೆ ಇನ್ನೂ ಒಸಭೆ ಜನಕ್ಕೆ ಗೊತ್ತಾಗಿಲ್ಲ. ಚಿಕ್ಕ ಚಿಕ್ಕ ಅಕ್ಷರ ಓದಿ ನನ್ನ ಪಾಡು ಹೀಗೆ ಗಿದೆ!” ಎಂದರು. ಅಲ್ಲಿಂದ ಹೊಳೆಯು ತೀರಕ್ಕೆ ಬಂದೆವು. ಒಂದು ಸೀಳು ದಾರಿಯಿಂದ ಮುಂದೆ ಸಾಗಿದೆವ, ನಾವು ಹಿಂದಿನ ದಿನ ತಿರುಗಾಡಲು ಹೋದ ಹೊಳೆಗೆ ಮತ್ತೊಂದು ಬದಿಯ ಬೆಟ್ಟದಿಂದ ಇನ್ನೊಂದು ಹೊಳೆ ಹರಿದು ಬಂದು ಕೂಡಿದೆ. ಆ ದೃಶ್ಯ ಬಹಳ ರಮಣೀಯವಾಗಿದೆ. ನಾವು ಸುತ್ತಲೂ ಸಿರಿದ್ದ ಒಂದು ಕಲ್ಲಾದಿಬ್ಬಕ್ಕೆ ಬಂದೆವು. ಅಲ್ಲಿ ಕುಳಿತು ಹಿಂದೆ ತಿರುಗಿ ನೋಡಿದರೆ ಆ ಕಡಹೊಳೆದ ಹರಿದು ಬರುವದು; ಅದು ಹಿಂದೆ ಎರಡೂ ಬದಿಯಿಂದ ಬೆಟ್ಟಹಬ್ಬಿ ಒಂದೆಡೆಗೆ ಕೂಡಿರುವುದು. ಬೆಟ್ಟದ ಮೇಲಿನ ಮರಗಳು ಮುಗಿಲನ್ನು ಹಚ್ಚುವ ಸೊಕ್ಕಿನಲ್ಲಿ ಬೆಳೆದಿವೆ. ನಾವು ಕೂತಲ್ಲಿಂದ ಮುಂದೆ ಸ್ವಲ್ಪ ಮರಳು. ಅಲ್ಲಿಂದ ದಾಟಿ ನೀರಿನಲ್ಲಿ ಬಟ್ಟೆ ಯಂತೆ ಬೆಳೆದು ನಿಂತ ಒಂದು ಹುಲ್ಲುಗಡ್ಡ-ಕತ್ತರಿಸಿ ಬೆಳಸಿದಂತೆ-ಬೆಳೆದು ನಿಂತಿದೆ. ಬಹಳ ದಿವಸಗಳಿಂದಲೂ ಅದು ಹಾಗೆಯೇ ಇದೆಯಂತೆ. ಆ ಸ್ಥಳ ನಿಜವಾಗಿಯೂ ಸುಂದರವಾಗಿದೆ. 'ನೋಡಿ ಕುಲಕರ್ಣಿಯವರೇ, ನನ್ನ ಸ್ಥಳ ! ಬೇಂದ್ರೆಯವರನ್ನು ಇಲ್ಲಿಗೆ ಕರೆದುತಂದು ಕೂರಿಸಿದರೆ ಎಂತಹ ಕವಿತೆ ಹುಟ್ಟಬಹುದು ?' ಎಂದು ಕೇಳಿದರು. ಬೇಂದ್ರೆಯವ ರೆಂದರೆ ಅಷ್ಟು ಇಷ್ಟ ಅವರಿಗೆ. ಒಬ್ಬ ಲೇಖಕರಿಗೆ ಇವರು ಬೇಂದ್ರೆಯವರ ವಿಷಯವನ್ನು ಹೇಳುತ್ತಿದ್ದಾಗ ಅವರು ' ಬೇಂದ್ರೆ ಎಂದರೆ ಯಾರು ?? ಎಂದರಂತೆ; ಅದಕ್ಕಿವರು ಹೀಗೆ ಹೇಳಿದರಂತೆ:

"ನಮಗವರ ಮಾತನ್ನು ಕೇಳಿ ಆಶ್ಚರ್ಯವಾಯಿತೆಂದರೆ- ಆಶ್ಚರ್ಯವೇನು ಹೇಳಿ! - ಬೇಂದ್ರೆ ಎಂದರೆ ಯಾರು ?' ಕನ್ನಡದಲ್ಲಿ ನೂರಾರು ಕತೆಗಳನ್ನು ಬರೆದು ಹೆಸರು ಹೊಂದಿದ ಇವರಿಗೆ ಬೇಂದ್ರೆ ಎಂದರೆ ಯಾರು ಎಂದು ಗೊತ್ತಿಲ್ಲವಂತೆ! ಉಕ್ಕುತ್ತಿದ್ದ ನಗು ವನ್ನು ತಡೆದುಕೊಂಡು ಹೇಳಿದೆ:- ಅಂಬಿಕಾತನಯದತ್ತರು