ಪುಟ:ಕಥಾಸಂಗ್ರಹ ಸಂಪುಟ ೨.djvu/೧೦೦

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಆಂಜನೇಯನು ಸೀತೆಯನ್ನು ಕಂಡು ಲಂಕಾಪಟ್ಟಣವನ್ನು ಸುಟ್ಟು ದು 89 ಹರಿ ಹರ ಬ್ರಹ್ಮಾದಿಗಳನ್ನು ಒಕ್ಕಲಿಕ್ಕುವ ಸಾಮರ್ಥ್ಯವು ನನ್ನಲ್ಲಿದೆಯೋ ಇಲ್ಲವೋ ಚೆನ್ನಾಗಿ ಯೋಚಿಸಿ ನೋಡು. ಈ ಹದಿನಾಲ್ಕು ಲಕ್ಷ ಜನ ಸ್ತ್ರೀಯರ ಸಂಪತ್ತಿಗೆ ನೀನೇ ನಾಯಕಿಯಾಗಿ ಪಟ್ಟದರಸಿಯಾಗಿರು. ಇನ್ನು ಮೇಲಾದರೂ ಹೆಡ್ಡತನವನ್ನು ಬಿಟ್ಟು ಮನೆಗೆ ಬಾ. ದೇವತೆಗಳೆಲ್ಲಾ ನಿನಗೆ ಸೇವಕರಾಗುವರು. ದೇವ ಮುನಿಗಳಾದ ತುಂಬುರ ನಾರದಾದಿಗಳು ನಿನ್ನ ಗಾಯಕರಾಗುವರು. ದೇವತಾ ಸ್ತ್ರೀಯರು ನಿನಗೆ ದಾಸಿಯರಾಗುವರು. ಎಲೈ ಸೀತೆಯೇ ! ತ್ರಿಲೋಕದಲ್ಲಿ ಯಾರೂ ನನಗೆ ಸರಿಯಿಲ್ಲ, ನಾನು ಚತುರ್ದಶಭುವನಗಳ ಒಡೆಯನೆಂಬುದನ್ನು ನೀನರಿಯೆಯಾ? ನೀನು ಇಂಥಾ ಸೌಭಾಗ್ಯವನ್ನನುಭವಿಸದೆ ವ್ಯರ್ಥವಾಗಿ ಮನುಷ್ಯನನ್ನು ಧ್ಯಾನಿಸು ವುದು ಯೋಗ್ಯವಲ್ಲ ನರಾಧಮನನ್ನು ಪರಿಭಾವಿಸುವ ಮರುಳುತನವು ನಿನಗೆಲ್ಲಿಂದ ಬಂದಿತು ? ಈ ಅವಿವೇಕವನ್ನು ಬಿಡು. ಅರಮನೆಗೆ ನಡೆ. ನನಗೆ ಅರಸಿಯಾಗು ಎಂದು ಹೇಳಲು ಸೀತೆಯು ಮಹಾ ಕೋಪದಿಂದ ಕೂಡಿ ಕಣ್ಣುಗಳಿಂದ ಕಿಡಿಗ ಳನ್ನು ಗುಳುತ್ತ ಕೈಯಲ್ಲಿ ಒಂದು ತೃಣವನ್ನು ಹಿಡಿದುಕೊಂಡು ಅದರ ಸಂಗಡ ಮಾತಾ ಡುವ ಹಾಗೆ--ಎಲೋ ಬಣಗು ರಕ್ಕಸನೇ ! ಎಲೋ ದುಷ್ಪ ಚೋರನೇ ! ಪಾಪಿಷ್ಟ ನಾದ ನಿನ್ನ ಐಶ್ವರ್ಯವನ್ನು ಸುಡಬೇಕು. ಎಲೋ ಹಂದಿಯೇ ! ನಾಯಿಯೇ ! ಬಹು ವಿಕಾರವಾದ ಮಾತುಗಳನ್ನಾಡಬೇಡ, ಶ್ರೀರಾಮನು ಬ್ರಹೇಂದ್ರಾದಿಗಳಿಂದ ಪೂಜೆ ಯನ್ನು ತೆಗೆದುಕೊಳ್ಳುವಂಥ ಮಹಾತ್ಮನು. ನೀಚನಾದ ನೀನು ಯಾರಿಂದ ಪೂಜೆ ಯನ್ನು ಹೊಂದುವಿ ? ಎಲಾ ಪಾಪಕರ್ಮಿಯೇ ! ಮೂರ್ಖಾಧಮನೇ ! ಶ್ರೀರಾಮ ನನ್ನು ಸಾಮಾನ್ಯನೆಂದು ತಿಳಿದೆಯಾ ? ಪತಿವ್ರತೆಯರನ್ನು ಹಿಂಸೆಪಡಿಸುವುದರಿಂದುಂ ಟಾದ ಮಹಾಪಾಪವೆಂಬ ಸಮುದ್ರದಲ್ಲಿ ಮುಳುಗಿರುವ ನಿನ್ನ ಎದೆಯನ್ನಿರಿದು ಪ್ರಾಣ ಗಳನ್ನು ತೆಗೆದು ಕೊಂಡು ಹೋಗುವ ಅಂತಕನಲ್ಲ ವೇ ? ನೀನು ಈ ಮಾತನ್ನು ಚೆನ್ನಾಗಿ ಜ್ಞಾಪಕದಲ್ಲಿಟ್ಟು ಕೊಂಡಿರು. ನಿನ್ನ ಪತ್ನಿಯನ್ನು ಮತ್ತೊಬ್ಬನು ಅಪೇಕ್ಷಿಸಿದರೆ ನೀನು ಸುಮ್ಮನೆ ಇರುವಿಯಾ ? ನೀನು ನಿನ್ನ ಪತ್ನಿಯೊಡನೆ ಸುಖವಾಗಿ ಬದುಕಬೇಕೆಂಬ ಅಪೇಕ್ಷೆಯಿದ್ದರೆ ಈಗಲೇ ನನ್ನನ್ನು ಕರೆದು ಕೊಂಡು ಹೋಗಿ ನನ್ನ ಪತಿಯಾದ ಶ್ರೀರಾ ಮನಿಗೆ ಒಪ್ಪಿಸಿ ಶರಣಾಗತನಾಗು. ಹಾಗೆ ಮಾಡದಿದ್ದರೆ ನೀಚನಾದ ನಿನ್ನೊಬ್ಬನ ಅಪರಾಧದಿಂದ ನೀನೂ ನಿನ್ನ ಮಕ್ಕಳೂ ನೆಂಟರೂ ಇಷ್ಟರೂ ನಿನ್ನ ಸಕಲೈಶ್ವರ್ಯವೂ ನಿನ್ನ ಪಟ್ಟಣವೂ ನಿನ್ನ ರಾಷ್ಟ್ರವೂ ಹಾಳಾಗುವುದರಲ್ಲಿ ಸ್ವಲ್ಪವೂ ಸಂಶಯವಿಲ್ಲವು. ನಾನು ಶ್ರೀರಾಮಚಂದ್ರನಿಗೆ ಧರ್ಮಪತ್ನಿಯಾಗಿರುವೆನು. ನೀನು ಆತನಿಲ್ಲದ ಕಾಲದಲ್ಲಿ ಬಂದು ನನ್ನನ್ನು ಅಪಹರಿಸಿಕೊಂಡು ಬಂದೆ. ನೀನು ಆತನ ಮುಂದೆ ನನ್ನನ್ನು ಎತ್ತಿ ಕೊಂಡು ಬಂದಿದ್ದರೆ ಈ ನಿನ್ನ ಪಾಪಿದೇಹವು ನಾಯಿನುಗಳ ಪಾಲಾಗುತ್ತಿದ್ದಿತು. ಹುಲಿಯ ಎದುರಿನಲ್ಲಿ ನಾಯಿಗೂ ಸಿಂಹದ ಎದುರಿನಲ್ಲಿ ಮೊಲಕ್ಕೂ ಹೇಗೆ ನಿಲ್ಲುವ ಸಾಮರ್ಥವಿಲ್ಲವೋ ಹಾಗೆ ಮಹಾತ್ಮನಾದ ನನ್ನ ಪತಿ ಯ ಎದುರಿನಲ್ಲಿ ನೀಚನಾದ ನಿನಗೆ ನಿಲ್ಲುವ ಸಾಮರ್ಥವಿಲ್ಲ. ಕಳ್ಳನಾದ ನೀನು ನಿನ್ನ ತಾಯಿಯ ಹೊಟ್ಟೆ ಯನ್ನು ಬಗೆದು ಹೊಕ್ಕು ಮರೆಸಿಕೊಂಡಾಗೂ ರಾಮನ ಬಾಣವು ಒಂದು ನಿನ್ನನ್ನು ಕೊಂದು