ಪುಟ:ಕಥಾಸಂಗ್ರಹ ಸಂಪುಟ ೨.djvu/೧೦೨

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಆಂಜನೇಯನು ಸೀತೆಯನ್ನು ಕಂಡು ಲಂಕಾಪಟ್ಟಣವನ್ನು ಸುಟ್ಟು ದು 91 ಆಂಜನೇಯನು-ಎಲೈ ರಾಜೀವಲೋಚನೆಯಾದ ದೇವಿಯೇ ! ನಿನ್ನ ಪತಿಯ ಲಕ್ಷ ಣನೂ ಕ್ಷೇಮದಲ್ಲಿದ್ದಾರೆ ಎಂದು ಹೇಳಲು ಆ ಮಾತನ್ನು ಕೇಳಿ ಸೀತಾದೇವಿಯು ಮೊಗವೆತ್ತಿ ನೋಡಿ ಇದು ಮಾಯಾವಿಗಳಾದ ರಾಕ ಸರ ನುಡಿಯೇ ಸರಿ ಎಂದು ತಲೆ ಯನ್ನು ಬೊಗ್ಗಿಸಿಕೊಂಡಳು. ಆಗ ಆಂಜನೇಯನು ಪನಃ- ಎಲೈ ಸೀತೆಯೇ ! ಖಳನಾದ ರಾವಣನು ನಿನ್ನನ್ನು ಕಳವಿನಿಂದ ತೆಗೆದು ಕೊಂಡು ಬಂದ ಬಳಿಕ ರವಿಕುಲತಿಲಕನು ಜಟಾಯು ವನ್ನು ಕಂಡು ಅವನಿಂದ ನಿನ್ನ ವೃತ್ತಾಂತವನ್ನು ತಿಳಿದು ಆ ಮೇಲೆ ಸತ್ತು ಹೋದ ಜಟಾಯುವಿನ ಪ್ರೇತಕೃತ್ಯಗಳನ್ನು ನೆರವೇರಿಸಿ ಪಂಪಾಸರಸ್ಸಿನ ಬಳಿಗೆ ಬಂದು ಸುಗ್ರೀ ವನೊಡನೆ ಸಖ್ಯವನ್ನು ಬೆಳಿಸಿ ವಾಲಿಯನ್ನು ಸಂಹರಿಸಿ ಸುಗ್ರೀವನಿಗೆ ಕಿಂಧಾರಾ ಜ್ಯಾಭಿಷೇಕವನ್ನು ಮಾಡಿಸಿದನು. ಅನಂತರದಲ್ಲಿ ನಿನ್ನೆ ನ್ನು ಹುಡುಕುವುದಕೋಸ್ಕರ ಚತುರ್ದಿಕ್ಕುಗಳಿಗೂ ಕಪಿವೀರರನ್ನು ಕಳುಹಿಸಲು ಆಗ ನಾನು ಅಂಗದ ಜಾಂಬವಾದಿ ಗಳೊಡನೆ ದಕಿಣದಿಕ್ಕಿಗೆ ಬಂದು ಅವರ ಅಪ್ಪಣೆಯ ಮೇರೆಗೆ ಕಡಲನ್ನು ದಾಟಿ ಈ ಲಂಕೆಯನ್ನು ಹೊಕ್ಕು ಖಳೇಂದ್ರಾದಿ ಸಮಸ್ತ ರಾಕ್ಷಸರ ಮನೆಗಳಲ್ಲೂ ನಿನ್ನನ್ನು ಹುಡುಕಿ ಅಲ್ಲೆಲ್ಲೂ ಕಾಣದೆ ವ್ಯಸನದಿಂದ ವಿಮಾನಾರೂಢನಾಗಿ ಕುಳಿತಿರುವ ಸಮ ಯ ದಲ್ಲಿ ಚಂದ್ರೋದಯವಾಗಲು ಈ ರಮ್ಯವಾದ ಅಶೋಕವನವನ್ನು ಕಂಡು ಬಂದು ನೀನು ಕುಳಿತಿರುವ ಈ ಶಿಂಶುಪವೃಕ್ಷ ವನ್ನೇರಿ ರಾಕ್ಷ ಸನು ನಿನ್ನ ಬಳಿಗೆ ಬಂದು ನಡಿಸಿದ ವೃತ್ತಾಂತವನ್ನೆಲ್ಲಾ ನೋಡಿ ತಿಳಿದು ಅನಂತರ ತ್ರಿಜಟೆಯು ಹೇಳಿದ ಸ್ವಪ್ನದ ಸಂಗತಿ ಯನ್ನೂ ಕೇಳಿದೆನು ಎಂದು ಹೇಳಿ, ಆ ಮೇಲೆ ಆಂಜನೇಯನು ಮರದಿಂದ ಕೆಳಗಿಳಿದು ಸೀತೆಯ ಸಮೀಪಕ್ಕೆ ಬರುತ್ತಿರಲು ಆಕೆಯು ಹೆದರಿಕೆಯಿಂದ ಹಿಂದಕ್ಕೆ ಸರಿಯುತ್ತಿರಲು ಆಗ ಹನುಮಂತನು-ಎಲೈ ತಾಯಿಯೇ ! ಅಂಜಬೇಡ. ನಾನು ರಾಕ್ಷಸನಲ್ಲ ಎಂದು ಹೇಳಲು ಸೀತೆಯು-ಎಲೈ ವಾನರಶ್ರೇಷ್ಟನೆ ! ನೀನು ಕಪಿಯು. ಶ್ರೀರಾಮನು ದೊರೆಯು. ನಿಮ್ಮಿಬ್ಬರಿಗೂ ಸ್ವಾಮಿಭತ್ಯತ್ವವು ಹೇಗೆ ಸಂಭವಿಸಿತು ? ನಿನಗೆ ಸಮುದ್ರ ವನ್ನು ದಾಟುವ ಶಕ್ತಿಯುಂಟೇ ? ನಿನ್ನ ಕಪಟವಚನಗಳಿಗೆ ಭಯಪಡುತ್ತೇನೆ ಎಂದು ನುಡಿಯಲು ಆಂಜನೇಯನು- ಎಲೈ ಲೋಕಮಾತೃವೇ ! ಶ್ರೀರಾಮನ ಪಾದಸೇವಕ ನಾದ ನನಗೆ ಈ ಸಮುದ್ರವನ್ನು ದಾಟುವುದು ಎಷ್ಟರಕೆಲಸ ? ಹಾಗಾದರೆ ನೋಡು ಎಂದು ತ್ರಿವಿಕ್ರಮನ ರೂಪಿಗೆ ಇಮ್ಮಡಿಯಾದ ಘೋರಾಕಾರವನ್ನು ಧರಿಸಿ ನಿಲ್ಲಲು ಸೀತೆಯು ಆ ಅತ್ಯದ್ಭುತಾಕಾರವನ್ನು ನೋಡಲಂಜಿ ಕಣ್ಣು ಮುಚ್ಚಿ ಕೊಳ್ಳಲು ಆ ಮೇಲೆ ಆಂಜನೇಯನು ಆ ರೂಪವನ್ನ ಡಗಿಸಿ ಪೂರ್ವದ ರೂಪವನ್ನು ಧರಿಸಿಕೊಳ್ಳಲು ಸೀತೆಯು ಇನ್ನೂ ಅನುಮಾನಿಸುತ್ತಿರಲು ಆಗ ಮಾರುತಿಯು-ಎಲೈ ತಾಯಿಯೆ ! ಅರಣ್ಯದಲ್ಲಿ ನೀನೂ ಶ್ರೀರಾಮನೂ ನಡಿಸಿದ ಕೆಲವು ಕಾರ್ಯಗಳನ್ನು ಗುರುತಿಗಾಗಿ ಹೇಳುತ್ತೇನೆ ಕೇಳು. ಒಂದು ದಿನ ನೀನೂ ರಾಮನೂ ಚಿತ್ರ ಕೂಟದಲ್ಲಿ ಸ್ನಾನಮಾಡುವಾಗ ಆಶ್ಚರ್ಯ ವಿಧದಿಂದ ಕೊಳದ ನೀರನ್ನು ಕಲಕಿದರಂತೆ. ಇದು ನಿಜವೋ ಸುಳ್ಳೋ ? ಮಾನವತಿ ಯಾದ ನಿನಗೆರಡು ಬಗೆದ ಕಾಕಾಸುರನನ್ನು ಶ್ರೀರಾಮನು ದಯದಿಂದ ಸಲಹಿದನಂತೆ.