ಪುಟ:ಕಥಾಸಂಗ್ರಹ ಸಂಪುಟ ೨.djvu/೧೦೮

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

M ಆಂಜನೇಯನು ಸೀತೆಯನ್ನು ಕಂಡು ಲಂಕಾಪಟ್ಟಣವನ್ನು ಸುಟ್ಟು ದು97, ಇದೇನು ಪ್ರಹಸ್ತನೇ ! ಪರಮಾಶ್ಚರ್ಯವಾಗಿದೆ ! ಆಗಲಿ, ಕಪಿಗಳಿಗೆ ಬಾಲವು ಪ್ರಧಾನವಾದುದರಿಂದ ಈ ಕಪಿಯ ಬಾಲಕ್ಕೆ ಬಟ್ಟೆಗಳನ್ನು ಸುತ್ತಿ ಎಣ್ಣೆಯನ್ನು ಹೊಯ್ತು ಅಗ್ನಿಯನ್ನು ಹೊತ್ತಿಸಿಬಿಡಿರೆಂದು ಹೇಳಲು ಇದು ಸರಿಯೆಂದು ಒಪ್ಪಿ ಎಲ್ಲರೂ ಆಂಜನೇಯನ ಒಳಗೆ ಬರಲು ಆಗ ಮಾರುತಿಯು-ಚೀರಿ ಕಿರಿ ಕಿರುಗು ಟ್ಟುತ್ತಾ ಹಾರಿಬಿದ್ದು ಹಲ್ಲಿ ರಿದು ಹುಬ್ಬುಗಳನ್ನು ಹಾರಿಸುತ್ತ ತಲೆಯನ್ನು ಕುಣಿಸುತ್ತ ಹೆದರಿಸುತ್ತ ಮೈತುರಿಸಿಕೊಳ್ಳುತ್ತ ಅರವತ್ತು ಸಾವಿರ ಯೋಜನಗಳಷ್ಟುದ್ದವಾಗಿ ತನ್ನ ಬಾಲವನ್ನು ಬೆಳೆಸುವುದಕ್ಕೆ ಆರಂಭಿಸಿದನು. ರಾವಣನ ಆಳುಗಳು ಕಪಿಯನ್ನು ಮುತ್ತಿ ಕೊಂಡು ಬಾಲಕ್ಕೆ ಬಟ್ಟೆಗಳನ್ನು ಸುತ್ತುತ್ತ ಬಂದ ಹಾಗೆಲ್ಲಾ ಬಾಲವು ಮುಂದಕ್ಕೆ ಬೆಳೆಯುತ್ತ ಸಾಗುತ್ತಿರಲು ಆಗ ಲಂಕಾಪಟ್ಟಣದಲ್ಲಿದ್ದ ವಸ್ತ್ರಗಳನ್ನೆಲ್ಲಾ ತಂದು ಸುತ್ತಿ ಎಣ್ಣೆಯನ್ನು ಹೊಯ್ತು ನೆನಸಿದರು. ಆ ಮೇಲೆ ರಾವಣನ ಅಪ್ಪಣೆಯನ್ನು ಹೊಂದಿ ರಾಕ್ಷಸದೂತರು ಹಕ್ಕಿಗಳ ಹೊರೆಗಳನ್ನು ತಂದು ಬಾಲದ ಕೊನೆಗೆ ಸುತ್ತಿ ಕಟ್ಟಿ ಕಣಜಗಳನ್ನು ಒಡೆದು ಸರ್ಜರಸ ಗುಡ ಕರ್ಪೂರ ಈ ಮೊದಲಾದುವುಗಳನ್ನು ಮೆತ್ತಿ ಬೆಂಕಿಯನ್ನು ಹೊತ್ತಿಸಿ ಅವನ ಸೊಂಟಕ್ಕೆ ಹಗ್ಗವನ್ನು ಕಟ್ಟಿ ಹಿಡಿದು ಊರಲ್ಲೆಲ್ಲಾ ಡಂಗುರವನ್ನು ಹೊಡೆದು ಕೊಂಡು ಮೆರೆಯಿಸುತ್ತ ಬರುತ್ತಿರುವಲ್ಲಿ ಆ ಪಟ್ಟಣದ ಸಮಸ್ತ ರಾಕ್ಷಸ ಸ್ತ್ರೀ ಪುರುಷರೆಲ್ಲಾ ಧಗ ದ ಗಾಯಮಾನವಾಗಿ ಉರಿಯುತ್ತಿರುವ ಮಹಾದೀರ್ಘವಾದ ಬಾಲವುಳ್ಳ ಆಂಜನೇ ಯನನ್ನು ನೋಡಿ ಕೈತಟ್ಟಿ ನಕ್ಕು ಸಂತೋಷಪಟ್ಟರು. ಆಗ ಹನುಮಂತನು ನಾನು ನಿನ್ನೆಯ ರಾತ್ರಿಯಲ್ಲಿ ಈ ಲಂಕಾಪಟ್ಟಣವನ್ನು ಚೆನ್ನಾಗಿ ನೋಡಲಿಲ್ಲ. ಅದು ಕಾರಣ ಈಗ ಈ ಲಂಕಾಪಟ್ಟಣದ ಹೆಬ್ಬಾಗಿಲುಗಳನ್ನೂ ದಿಡ್ಡಿ ಬಾಗಿಲುಗಳನ್ನೂ ಕನ್ನ ಗಂಡಿಗ ಇನ್ನೂ ಸುರಂಗಗಳನ್ನೂ ಯಂತ್ರಗಳನ್ನೂ ಅವುಗಳ ಕೀಲುಗಳನ್ನೂ ಸ್ಪಷ್ಟವಾಗಿ ನೋಡಿ ಈ ಪಟ್ಟಣದ ವಿಶೇಷಸ್ಥಿತಿಗಳನ್ನೂ ರಹಸ್ಯ ವಿಷಯಗಳನ್ನೂ ತಿಳಿದುಕೊಂಡು ಕಡೆಗೆ ಇವರನ್ನೆಲ್ಲಾ ಕೊಂದು ರಾಮನ ಬಳಿಗೆ ಹೋಗಬೇಕು. ಇನ್ನು ಸ್ವಲ್ಪ ಕಾಲದವರೆಗೂ ಇವರು ನನ್ನನ್ನು ಹಿಡಿದು ಸಾರಿಕೊಂಡು ಈ ಪಟ್ಟಣದಲ್ಲಿ ತಿರುಗುತ್ತಿರಲಿ ಎಂದು ಮನ ಸ್ಸಿನಲ್ಲಿ ನಿಶ್ಚಯಿಸಿಕೊಂಡು ಸುಮ್ಮನಿದ್ದನು. ಆಗೆ ಸೀತೆಯನ್ನು ಕಾಯ್ದು ಕೊಂಡಿದ್ದ ರಾಕ್ಷಸಿಯರು ಈ ಸಂಗತಿಯನ್ನೆಲ್ಲಾ ಕಂಡು ಕೇಳಿ ಸೀತೆಯ ಬಳಿಗೆ ಹೋಗಿ ಎಲೈ ಜಾನಕಿಯೇ ! ಕಳೆದ ರಾತ್ರಿಯಲ್ಲಿ ನಿನ್ನ ಸಂಗಡ ಮಾತಾಡಿದ ಕೆಂಪು ಮೊಗ ವುಳ್ಳ ಕೋತಿಯ ಬಾಲಕ್ಕೆ ಬಟ್ಟೆಗಳನ್ನು ಸುತ್ತಿ ಎಣ್ಣೆಯಲ್ಲಿ ಬೆಂಕಿಯನ್ನು ಹೊತ್ತಿಸಿ ನಡುವಿಗೆ ಹಗ್ಗವನ್ನು ಕಟ್ಟಿ ಹಿಡಿದುಕೊಂಡು ಊರಲ್ಲೆಲ್ಲಾ ಸಾರುತ್ತಾ ತಿರುಗಿಸುತ್ತಾರೆ ಎಂದು ಹೇಳಿದರು. ವೈದೇಹಿಯು ಆ ಮಾತುಗಳನ್ನು ಕೇಳಿ ಬಹಳವಾಗಿ ದುಃಖಿಸಿ ಅಗ್ನಿ ಪುರುಷನಿಗೆ ನಮಸ್ಕರಿಸಿ---ಎಲೈ ಮಹಾತ್ಮನಾದ ಅಗ್ನಿ ದೇವತೆಯೇ ! ನಾನು ಈವರೆಗೂ ಸತ್ಯವಾಗಿ ಪತಿಶಿಶೂಷೆಯನ್ನು ಮಾಡಿ ಪಾತಿವ್ರತ್ಯ ಧರ್ಮವನ್ನು ಕಾಪಾಡಿರುವವಳೂ ಒಳ್ಳೆಯ ನಡತೆಯಿಂದ ಕೂಡಿದವಳೂ ಆಗಿರುವುದೂ ಶ್ರೀರಾಮಚಂದ್ರನು ಪುನಃ ನನ್ನನ್ನು ಕೊಡುವುದರಲ್ಲಿ ಆಶೆಯುಳ್ಳವನಾಗಿ ಬಂದು