ಪುಟ:ಕಥಾಸಂಗ್ರಹ ಸಂಪುಟ ೨.djvu/೧೧೦

ವಿಕಿಸೋರ್ಸ್ ಇಂದ
Jump to navigation Jump to search
ಈ ಪುಟವನ್ನು ಪರಿಶೀಲಿಸಲಾಗಿಲ್ಲ.


ಆ೦ಜನೇಯನು ಸೀತೆಯನ್ನು ಕಂಡು ಲಂಕಾಪಟ್ಟಣವನ್ನು ಸುಟ್ಟು ದು 99 ಈ ಲಂಕಾ ನಗರಕ್ಕೆ ಪ್ರಳಯಾಗ್ನಿಯು ಹೊಕ್ಕು ಪಟ್ಟಣವನ್ನೇ ನಿರ್ಮೂಲಮಾಡುತ್ತಿ ರುವುದಲ್ಲಾ ಎಂದು ಕೂಗಿ ದುಃಖಿಸುತ್ತ ಓಡಿದರು. ಕೆಲರು ಅಗ್ನಿ ಜ್ವಾಲೆಯು ತಮ್ಮನ್ನು ಸುಡುವುದಕ್ಕೆ ಬಂದುದನ್ನು ಕಂಡು-ಹಾ, ಕೆಟ್ಟೆವಲ್ಲಾ, ಗತಿಯೇನು ಎಂದು ಮೊರೆಯಿಡುತ್ತ ಹಸುಗೂಸುಗಳನ್ನೆತ್ತಿಕೊಂಡು ಓಡಿಹೋದರು. ಆಗ ರಾಕ್ಷಸಿ ಯರು ಮೈಮೇಲಿನಿಂದ ಜಾರಿ ಬೀಳುತ್ತಿರುವ ವಸ್ತ್ರವನ್ನೆತ್ತಿ ಕಟ್ಟದೆ ಬಿಚ್ಚಿ ಕೆದರಿ ಹೋದ ತಲೆಗೂದಲುಳ್ಳವರಾಗಿ ತೋರಿದ ಕಡೆಗೊಡಿದರು. ಲಂಕಾ ನಗರದಲ್ಲಿ ಎಲ್ಲಿ ನೋಡಿದರೂ-ಹಾ, ಮಗನೇ ! ಹಾ, ತಂದೆಯೇ ! ಅಯ್ಯೋ, ಅತ್ತಿಗೆಯೇ ! ಇಂದಿಗೆ ಭೂಲೋಕದ ಹಂಗು ಹರಿಯಿತೆ ? ಅಗ್ನಿಯಲ್ಲಿ ಸಿಕ್ಕಿ ನಿಮೇಷಮಾತ್ರದಲ್ಲಿ ಮಾಯ ವಾದಿರಲ್ಲಾ, ಮಹಾಜ್ವಾಲೆಯಲ್ಲಿ ಅವನು ಬಿದ್ದನು. ಇವಳು ಸಿಕ್ಕಿದಳು. ಅವನ ಕಾಲು ಸೀದು ಹೋಯಿತು. ಅವನ ಬೆನ್ನು ಬಂದಿತು. ಹಾ, ಅವನು ಓಡುತ್ತ ಬಂದು ಬೆಂಕಿಗೆ ಸಿಕ್ಕಿ ಸತ್ತನು ಎಂದು ಲಂಕಾನಗರದಲ್ಲಿ ಕೂಗುತ್ತಿದ್ದರು. ಲಂಕಾನಗರವು ದುಃಖಧ್ವನಿಮಯವಾಯಿತು. ವೀರರೆಲ್ಲರೂ ತಮ್ಮ ತಮ್ಮ ಶರೀರರಕ್ಷಣೆಯಲ್ಲೇ ಆಸಕ್ತರಾದರು. ಹೇಳತಕ್ಕುದೇನು ? ಓಡುತ್ತಿರುವ ಜನರಿಗೆ ಲಂಕಾದುರ್ಗದ ಹೆಚ್ಚಾಗಿ ಲುಗಳು ಇಕ್ಕಟ್ಟಾದುವು. ವಿರೋಧಿಗಳನ್ನು ತಡೆಯುವುದಕ್ಕಾಗಿ ಕಟ್ಟಿದ್ದ ಕೋಟೆ ಗಳು ತಮ್ಮ ವಿಪತ್ತಿಗೆ ಕಾರಣವಾದವು. ತೇರು ಆನೆ ಕುದುರೆ ಮಂದಿ ಒಂಟಿ ಎತ್ತು ಹಸು ಮೊದಲಾದುವುಗಳೂ ಅಸಂಖ್ಯಾತರಾಕ್ಷಸರೂ ಬೆಂಕಿಯಲ್ಲಿ ಸುಟ್ಟು ಬೂದಿ ಯಾಗಿ ಹೋದರು. ಪಾಪಿಯಾದ ಈ ರಾವಣನು ಮಳಿಯಾದ ಶೂರ್ಪನಖಿಯ ದುರ್ಬೋಧೆಯನ್ನು ಕೇಳಿ ಮಹಾರಾಜನಾದ ರಾಮನ ಧರ್ಮಪತ್ನಿ ಯನ್ನು ತಂದು ನಮ್ಮನ್ನು ಈ ಪಾಡಿಗೆ ಗುರಿಮಾಡಿದನು. ತಾನಾದರೂ ಬದುಕುವನೇ ? ಅದೂ ಇಲ್ಲ. ಮಕ್ಕಳುಮರಿಗಳೊಡನೆ ನಿರ್ಮಲವಾಗಿ ಹೋಗುವನು. ಲೋಕದಲ್ಲಿ ಪರನಾರಿಯ ರಿಗೆ ಆಶೆಪಟ್ಟವರು ಎಂದಿಗೂ ಬಾಳುವುದಿಲ್ಲ, ಕರಾತ್ಮಳಾದ ಶೂರ್ಪನಖಿಯು ಈ ನಗರವನ್ನು ತನ್ನ ಮುಖದಂತೆ ಅಮಂಗಲಕ್ಕೆ ಗುರಿಮಾಡಿದಳು ಎಂದು ಆ ಪಟ್ಟಣದವ ರೆಲ್ಲಾ ಮೊರೆಯಿಡುತ್ತಿದ್ದರು. ಅನಂತರದಲ್ಲಿ ಧೀರನಾದ ಆಂಜನೇಯನು ಈ ರೀತಿಯಾಗಿ ಲಂಕಾನಗರವನ್ನೆಲ್ಲಾ ದಹಿಸಿ ಸರ್ವರಾಕ್ಷ ಸಪ್ರಜೆಯನ್ನೂ ಕಂಗೆಡಿಸಿ ಪುನಃ ಸೀತೆಯ ಬಳಿಗೆ ಬಂದು ವೃತ್ತಾಂತವನ್ನೆಲ್ಲಾ ತಿಳಿಸಿ ಆಕೆಗೆ ಧೈರ್ಯವಚನವನ್ನು ಹೇಳಿ ಅಪ್ಪಣೆ ಯನ್ನು ತೆಗೆದುಕೊಂಡು ಅಲ್ಲಿಂದ ಹೊರಟು ಒಂದೇ ಲಂಘನದಿಂದ ಸಮುದ್ರವನ್ನು ದಾಟಿ ಜಾಂಬವತಾದಿ ಕಪಿವೀರರಿರುವಲ್ಲಿಗೆ ಬಂದು ವೃದ್ಧನಾದ ಜಾಂಬವಂತನ ಪಾದಗಳಿಗೆರಗಲು ಆಗ ಆತನು ಹನುಮಂತನನ್ನು ಅಪ್ಪಿಕೊಂಡು ಎಲೈ ಬಾಲಕನೇ ! ಸೌಖ್ಯದಿಂದ ಬಂದೆಯಾ ? ಅವನಿಜಾತೆಯನ್ನು ನೋಡಿದಿಯಾ ? ನೀನು ಹೋದಂದಿ ನಿಂದ ಈ ವರೆಗೂ ನಡೆದ ಸಂಗತಿಯನ್ನೆಲ್ಲಾ ಸಂಪೂರ್ಣವಾಗಿ ಹೇಳು ಎನ್ನಲು ಹನು ಮಂತನು ತಾನು ನಡಿಸಿದ ಕೃತ್ಯಗಳನ್ನೆಲ್ಲಾ ಕ್ರಮವಾಗಿ ವಿವರಿಸಿದನು. ಆಗ ಜಾಂಬ ವಂತನು ಕಪಿವೀರರೊಡನೆ ಆಂಜನೇಯನನ್ನು ಶ್ಲಾಘಿಸಿ ಅಲ್ಲಿಂದ ಹೊರಟು ಸುಗ್ರೀವ ನಿದ್ದ ಮಧುವನಕ್ಕೆ ಬಂದು ಅವನಿಗೆ ಸಂಗತಿಯನ್ನೆಲ್ಲಾ ಸಾಂಗವಾಗಿ ತಿಳಿಸಿ ಯಥೇಚ್ಛ