ಪುಟ:ಕಥಾಸಂಗ್ರಹ ಸಂಪುಟ ೨.djvu/೧೩೪

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಕುಂಭಕರ್ಣಸಂಹಾರ 123 ನಾಶವಾಗಿ ರಕ್ತನದಿಯ ದಡಮೂಾರಿ ಹರಿಯಿತು. ಆಗ ರಾಮಾನುಯಾಯಿಯಾದ ವಿಭೀಷಣನು ಧನುರ್ಬಾಣಗಳನ್ನು ತೆಗೆದುಕೊಂಡು ಮಹಾಶೂರನಾದ ಮಿತ್ರ 4 ನೆಂಬ ರಕ್ಕಸನೊಡನೆ ಯುದ್ದಕ್ಕೆ ನಿಂತು ಬಲು ಹೊತ್ತು ಹೆಣಗಿ ಕಡೆಗೆ ಅವನನ್ನು ಕೊಂದು ಅವನ ದುರ್ನಾಮಧೇಯವನ್ನೂ ತೊಡೆದನು. ಅನಂತರದಲ್ಲಿ ಇಂದ್ರಜಿತ್ತು ಈ ವರ್ತಮಾನವನ್ನು ಕೇಳಿ ಮಹೋಗ್ರ ಕೋಪಕರಪಿತನಾಗಿ ಧನುರ್ಬಾಣಗಳನ್ನು ತೆಗೆ ದುಕೊಂಡು ತಾಮಸಿಯೆಂಬ ಮಹಾಮಾಯೆಯನ್ನವಲಂಬಿಸಿ ಈಶ್ವರನ ವರದಿಂದ ಹೊಂದಿದ್ದ ಅರಿಭೀಕರವಾದ ಮಹಾರಥವನ್ನೇರಿ ಆ ರಾತ್ರಿಯಲ್ಲೇ ಹೊರಟು ಕಪಿ ಬಲವನ್ನು ಹೊಕ್ಕು ಯಾರಿಗೂ ಕಾಣಿಸಿಕೊಳ್ಳದೆ ಕಾಂತಘನಗರ್ಜಿತದಂತೆ ಸಿಂಹ ನಾದವನ್ನು ಮಾಡಲು ಆ ಮಹೋಗಾರ್ಭಟಧ್ವನಿಯು ಸುಗ್ರೀವಾದಿ ವಾನರನಾಯ ಕರನ್ನು ಆಳುಕಿಸಿತು. ಆಗ ಕಪಿವೀರರು ದಿಗ್ಗಾಂತರಾಗಿ-ಎಲೈ! ಖಳರು ಈ ಕತ್ರ ಲೆಯಲ್ಲಿ ಬಂದು ಕವಿದು ಕಪಿಬಲವನ್ನು ಕೊಲ್ಲುತ್ತಿರುವರು. ತಡಮಾಡಬೇಡಿರಿ. ಏಳಿರಿ, ಏಳಿರಿ ಎಂದು ಕೂಗುತ್ತ ತೋರವಾದ ಗಿರಿಗಳನ್ನೂ ದೊಡ್ಡ ದೊಡ್ಡ ಮರಗ ಇನ್ನೂ ಕಿತ್ತು ತೆಗೆದುಕೊಂಡು ಸುತ್ತಲೂ ನೋಡುತ್ತ ವಿರೋಧಿಗಳಾದ ರಕ್ಕಸರನ್ನು ಕಾಣದೆ ಕಂಗೆಟ್ಟು ಆಶ್ಚರ್ಯಪಟ್ಟು ಹುಡುಕಿಕೊಂಡು ತಿರುಗುತ್ತಿದ್ದರು. ಆಗ ವಿಭೀ ಷಣನು ತನ್ನ ಮನಸ್ಸಿನಲ್ಲಿ ಇದು ಇಂದ್ರಜಿತ್ತಿನ ಭಯಂಕರವಾದ ಮಾಯಾಯುದ್ಧ ವೆಂದು ತಿಳಿದು ಆ ರಾತ್ರಿಯಲ್ಲಿ ಇವನಿಂದ ಕಪಿಬಲಕ್ಕೆ ಅಪಾಯವು ಸಂಭವಿಸದೆ ಇರದು ಎಂದು ಬಹಳವಾಗಿ ಮರುಗುತ್ತ ಶೀಘ್ರವಾಗಿ ಸುಗ್ರೀವನ ಬಳಿಗೆ ಬಂದು-ಎಲೆ ವಾನರರಾಜನೇ ! ನೀನು ತ್ವರಿತದಿಂದ ರಾಮಲಕ್ಷ್ಮಣರ ಮೈಗಾವಲಿಗೆ ನೀಲಾಂಗದ ರನ್ನು ಇರಿಸು, ಸುಷೇಣ ಜಾಂಬವಂತರನ್ನು ಮೇಲಾರೈಕೆಯಲ್ಲಿ ಜಾಗರೂಕತೆಯಿಂದಿ ರುವಂತೆ ನಿಲ್ಲಿಸು. ಉಳಿದ ನಳಕೇಸರಿ ಗವಾಕ್ಷ ದ್ವಿವಿದ ದುರ್ಮುಖ ಶರಭ ಶತಬಲಿ ಹನುಮಂತ ಇವರೇ ಮೊದಲಾದವರನ್ನು ಯುದ್ಧ ಮಾಡುವುದಕ್ಕೆ ನೇಮಿಸು. ಇದೆ, ಮೊಳಗುವಂತೆ ಸಿಂಹಗರ್ಜನೆಯನ್ನು ಮಾಡುತ್ತಿರುವವನು ರಾವಣನ ಮಗನಾದ ಇಂದ್ರಜಿತ್ತು. ಇವನು ಇರುಳಾಳಗದವನು. ಮಾಯಾ ಯುದ್ಧದಲ್ಲಿ ಬಹು ಸಮ ರ್ಥನು. ನೀನು ಬೇಗ ಹೋಗಿ ರಾಮಲಕ್ಷ್ಮಣರಿಗೆ ಈ ಸಂಗತಿಯನ್ನು ತಿಳಿಸುವವ ನಾಗು ಎಂದು ಹೇಳಿ ತಾನು ತನ್ನ ನಾಲ್ಕು ಜನ ಮಂತ್ರಿಗಳೊಡನೆ ಆಕಾಶಕ್ಕೆ ಹಾರಿ ಇಂದ್ರಜಿತ್ತಿನ ಮೇಲೆ ಎಡಬಿಡದೆ ಬಾಣಗಳನ್ನು ಸುರಿಸಲು ಇಂದ್ರಜಿತ್ತು ಆ ಬಾಣಗ ಳನ್ನೆಲ್ಲಾ ತುಮುರು ತುಮುರಾಗಿ ಕಡಿದುಬಿಟ್ಟು ಪ್ರತಿಬಾಣಗಳನ್ನು ಪ್ರಯೋಗಿಸಿ ವಿಭೀಷಣನನ್ನು ಬಾಣಸಮುದ್ರದೊಳಗೆ ಮುಳುಗಿಸಿದನು. ಅವನ ನಾಲ್ಕು ಜನ ಮಂತ್ರಿಗಳನ್ನು ಬಾಣಭಿತ್ತಿಯಿಂದ ಮುಚ್ಚಿದನು, ಆಹಾ ! ಇಂದ್ರಜಿತ್ತು ಎಂಥಾ ವೀರನೋ ! ಅನಂತರದಲ್ಲಿ ಕಪಿಸೇನೆಯ ಮೇಲೆಲ್ಲಾ ಬಾಣವೃಷ್ಟಿ ಯು ಸುರಿದು ಕೊಲ್ಲುತ್ತಿದ್ದಿತು. ವಿಶೇಷವೇಕೆ ? ಯುದ್ಧಾಂಗಣದಲ್ಲಿ ಅಪ್ರತಿಮಮನಾದ ಇಂದ್ರ ಜೆನೆದುರಿಗೆ ನಿಲ್ಲುವುದಕ್ಕೆ ಹರಹಿರಣ್ಯಗರ್ಭಾದಿಗಳಿಂದಲೂ ಸಾಧ್ಯವಲ್ಲ ವು. ಇಂದ್ರ ಚಿತ್ತಿನ ಒಂದೊಂದು ಬಾಣಕ್ಕೆ ತಪ್ಪದೆ ಒಂದೊಂದು ಕಪಿಯ ಹೆಣವು ಭೂಮಿಗುರುಳು