ಪುಟ:ಕಥಾಸಂಗ್ರಹ ಸಂಪುಟ ೨.djvu/೧೩೫

ವಿಕಿಸೋರ್ಸ್ ಇಂದ
Jump to navigation Jump to search
ಈ ಪುಟವನ್ನು ಪರಿಶೀಲಿಸಲಾಗಿಲ್ಲ.


124 ಕಥಾಸಂಗ್ರಹ-೪ ನೆಯ ಭಾಗ ತಿದ್ದಿತು. ಒಂದೆಡೆಯಲ್ಲಿ ಶೂರನಾದ ಇಂದ್ರಜಿತ್ತಿನ ತೇರಿನ ಚೀತ್ಕಾರಧ್ವನಿಯ ಇನ್ನೊಂದು ಕಡೆಯಲ್ಲಿ ಅವನ ರಥಾಶ್ವಗಳ ಹೇಷಾರವ ಮತ್ತೊಂದು ದೆಸೆಯಲ್ಲಿ ವಿರೋಧಿವಕ್ಷಸ್ಥಲಕ್ಕೆ ಕಂಪನವನ್ನು ಕಟುಮಾಡುತ್ತಿರುವ ಕೋದಂಡಠಾ೦ಕಾರದ್ಧಾ ನವೂ ಒಂದು ಸ್ಥಳದಲ್ಲಿ ಇಂದ್ರಜಿತ್ತಿನ ಸಿಂಹನಾದರಭಸವೂ ಕೇಳಿಸುತ್ತ ಕಪಿಸೇನೆಯೆ " ವೂ ಇಂದ್ರಜಿನ್ನ ಯವಾಗಿ ಹೋಯಿತೋ ಎಂಬಂತೆ ಅರಿಗಳ ಮನಸ್ಸಿಗೂ ನೇತ್ರಗ ಳಿಗೂ ಗೋಚರನಾಗದೆ ಸರ್ವದಿಕ್ಕುಗಳಲ್ಲೂ ಸರ್ವವಿಧದಿಂದಲೂ ಕಾಲಭೈರವನಂತೆ ಕಪಿ ಬಲವನ್ನು ಕೊಲ್ಕು ತ್ತಿದ್ದನು. ಆಗ ಕಪಿವೀರರು ಮಾಡತಕ್ಕುದೇನು? ಕೆಲರು ಒಂದು ಕಡೆಯಲ್ಲಿ ನೋಡಿದರು. ಇನ್ನು ಕೆಲರು ತಮ್ಮ ಹಸ್ತಗಳಲ್ಲಿರುವ ಗಿರಿಗಳನ್ನು ಮುಂದಕ್ಕೆ ಮರೆಮಾಡಿ ಇಣಿಕಿ ನೋಡಿದರು. ಕೆಲರು ತಮ್ಮ ಬಾಹುಬಲಪ್ರಚಾರಕ್ಕೆ ಉಪಾಯ ವನ್ನು ಹುಡುಕುತ್ತಿದ್ದರು. ಮತ್ತು ಕೆಲರು-ನಾವು ಅರಿಯನ್ನು ಕಾಣುವರೀತಿ ಯಾವುದು ಎಂದು ನಾನಾವಿಧವಾಗಿ ಯೋಚಿಸುತ್ತ ಯಾವ ಉಪಾಯವನ್ನೂ ಕಾಣದೆ ಕಂಗೆಟ್ಟು ಕಳವಳಿಸುತ್ತ ಹಗೆಯನ್ನು ಮನಸ್ಸಿನಲ್ಲಿ ಹಿಡಿದು ಹಿಂಡುತ್ತ ಅರಿಬಾಣಘಾತ ಗಳಿಂದ ತನು ಗಳನ್ನು ಕಳೆದು ಕೊಳ್ಳುತ್ತ ಮಹಾಚಿಂತಾಸಮುದ್ರದಲ್ಲಿ ಮುಳುಗಿದ್ದರು. ಅನಂತರದಲ್ಲಿ ಗಜಗನಯನೀಲಾದಿ ಕಪಿಸೇನಾನಾಯಕರು ಹಗೆಯಿರುವೆಡೆಯನ್ನರಿಯದೆ ಗಿರಿತರುಗಳನ್ನೆಸೆದು ಆಕಾಶಾಂತರಾಳವನ್ನು ತುಂಬಿಸಿದರು. ಆಗ ರಾವಣಿಯು ವಿಪರೀ ತವಾದ ಸರಳಳೆಯನ್ನು ಸುರಿದು ಕಪಿಸೇನಾನಾಯಕರೆಲ್ಲರನ್ನೂ ನೆಲದಲ್ಲಿ ಒರಗಿಸಿ ರಾಮಲಕ್ಷ್ಮಣರ ಸಮೀಪಕ್ಕೆ ಬಂದು ಅವರ ಮೇಲೆ ಬಾಣಗಳನ್ನು ಪರಂಪರೆಯಾಗಿ ಸುರಿಸುತ್ತಿರಲು ಕಪಿವೀರರೊಳಗೆ ರಾಮಲಕ್ಷ್ಮಣರ ಮೈಗಾವಲಿನಲ್ಲಿದ್ದ ಆಂಜನೇಯನ ಸಾಹಸವೆಷ್ಟು ಮಿಗಿಲಾದುದೊ ? ಆ ರಾವಣಿಯ ಕರಗತವಾದ ಬಿಲ್ಲ ನಿಯ ಜಾಡಿ ನಿಂದ ಅವನಿರುವ ಸ್ಥಾನವನ್ನ ರಿದು ಗರುಡಪಕ್ಷಿಯಂತೆ ಆಕಾಶಕ್ಕೆ ಹಾರಿ ಅವನನ್ನು ಒದೆಯಲು ರಾವಣನ ಮಗನು ಮಾಯಾಬಲದಿಂದ ರಥವನ್ನು ಬಿಟ್ಟು ಆಚೆಗೆ ಹಾರಿ ತಪ್ಪಿಸಿಕೊಂಡನು. ರಥವು ನುಚ್ಚು ನೂರಾಗಿ ಭೂಮಿಗುದುರಿತು. ಆಗ ಅರಿವೀರನು ಮತ್ತೊಂದು ರಥವನ್ನೇರಿ ಬಾಣಗಳನ್ನು ಪ್ರಯೋಗಿಸಿ ಹನುಮಂತನ ಮೈಯೊಳಗೆ ಎಡೆ ಯಿಲ್ಲದಂತೆ ತೂರಿಸಿ ತಿರಿಗಿ ರಾಮನಮೇಲೆ ಕಣೆಗಳನ್ನು ಸುರಿಸುತ್ತಿರಲು ಆಗ ರಾಮನು ಕೋದಂಡವನ್ನು ತೆಗೆದು ಕೊಂಡು ಹೆದೆಯಲ್ಲಿ ದಿವ್ಯಾಸ್ತ್ರಗಳನ್ನು ತೊಡಿಸಿ ಅರಿಬಾಣ ಗಳು ಬರುವ ಮಾರ್ಗದಲ್ಲಿಯೇ ಪ್ರಯೋಗಿಸಿ ಅವನ ರಥರಥಾಶ್ವ ಸಾರಥಿಪತಾಕೆಗಳನ್ನು ಕತ್ತರಿಸಿ ಕೆಡಹಲು ಇದುವರೆಗೂ ನನ್ನೊಡನೆ ಯುದ್ಧ ಮಾಡಿದ ಸುರಾಸುರ ಯಕ್ಷ ಕಿನ್ನರಾದಿ ಮಹಾವೀರರಲ್ಲಿ ಈ ರಾಮನಿಗೆ ಸಮಾನನಾದ ಪರಾಕ್ರಮಶಾಲಿಯನ್ನು ನಾನು ಕಾಣೆನು. ಆದುದರಿಂದಲೇ ಪ್ರಚಂಡರಾದ ಖರದೂಷಣಾದಿ ರಾಕ್ಷಸವೀರರನ್ನೂ ಪ್ರಸಿದ್ದ ವೀರನಾದ ವಾಲಿಯನ್ನೂ ಕೊಂದನು ಎಂದು ಮನಸ್ಸಿನಲ್ಲಿ ರಾಮನನ್ನು ಹೊಗ ಳುತ್ತ ಮತ್ತೆ ರಾಮನ ಮೇಲೆ ಬಾಣವೃಷ್ಟಿ ಯನ್ನು ಕರೆಯಲು ಶ್ರೀರಾಮನು ತಿರಿಗಿ ದಿವ್ಯ ಮಾರ್ಗಣಗಳನ್ನು ಪ್ರಯೋಗಿಸಿದನು. ಆ ಬಾಣಗಳು ನಡುದಾರಿಯಲ್ಲೇ ರಾವಣಿಯ ಅಂಬುಗಳನ್ನು ಕತ್ತರಿಸಿ ಹೊರಟು ಅವನ ಸರ್ವಾಂಗಗಳಲ್ಲೂ ಹೊಕ್ಕು ರಕ್ತಪ್ರವಾಹ