ಪುಟ:ಕಥಾಸಂಗ್ರಹ ಸಂಪುಟ ೨.djvu/೧೫

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಕಥಾಸಂಗ್ರಹ-೪ ನೆಯ ಭಾಗ ಆಗ ಭೂಮ್ಯಾಕಾಶಗಳಲ್ಲಿ ಭಯಂಕರವಾದ ಉತ್ಪಾತಗಳಾದುವು. ಇಂದ್ರಾದಿದೇವತೆ ಗಳೆಲ್ಲಾ ಗಡಗಡನೆ ನಡುಗಿದರು. ಮೇಘಗಳು ರಕ್ತವೃಷ್ಟಿಯನ್ನು ಸುರಿಸಿದವು. ನಕ್ಷತ್ರಗಳು ಭೂಮಿಗೆ ಉದುರಿದವು. ಇಂದ್ರಧನುಸ್ಸು ಮಡಿ ಆಕಾಶದಲ್ಲಿ ಕವಿ ಯಿತು. ಆಮೇಲೆ ವಿಶ್ರವಸ್ಸು ಅನ್ವರ್ಥವಾಗಿ ಆ ಶಿಶುವಿಗೆ ದಶಮುಖನೆಂದು ನಾಮ ಧೇಯವನ್ನಿಟ್ಟನು. ಅನಂತರದಲ್ಲಿ ಮತ್ತೂ ಕೆಲವು ದಿನಗಳು ಗತಿಸಲು ಈ ಲೋಕ ಗಳನ್ನೆಲ್ಲಾ ಒಂದೇ ತುತ್ತು ಮಾಡಿ ನುಂಗುವ ದ್ವಿತೀಯ ಯಮನಂತಿರುವ ಕರಾಳಾ ಕಾರನಾದ ಮತ್ತೊಬ್ಬ ಮಗನನ್ನು ಕೈಕಸೆಯು ಹೆತ್ತಳು. ಅವನ ಕಿವಿಗಳು ಬಾನೆಗೆ ಳಿಗಿಂತ ದೊಡ್ಡವುಗಳಾಗಿದ್ದುದರಿಂದ ಅವನ ತಂದೆಯು ಅವನನ್ನು ಕುಂಭಕರ್ಣನೆಂದು ಕರೆದನು. ಮತ್ತು ಕೆಲವು ದಿವಸಗಳು ಕಳೆದಮೇಲೆ ಆ ಕೈಕಸೆಯು ಸೌಮ್ಯಾ ಕಾರವೂ ಹುಣ್ಣಿಮೆಯ ಚಂದ್ರನಂತೆ ಮುಖವೂ ಕಮಲದೆಸಳುಗಳಂತಿರುವ ಕಣ್ಣಳೂ ವಿಸ್ತಾರ ವಾದ ವಕ್ಷಸ್ಥಲವೂ ತೋರವಾದ ತಲೆಯ ನೀಳವಾದ ತೋಳುಗಳೂ ಆನೆಗಳ ಸೊಂಡಿಲುಗಳಂತಿರುವ ತೊಡೆಗಳ ಉಳ್ಳವನಾಗಿ ಸೂರ್ಯನಂತೆ ತೇಜಸ್ಸಿನಿಂದ ಪ್ರಕಾ ಶಿಸುತ್ತಿರುವವನಾದ ಇನ್ನೊಬ್ಬ ಸುಕುಮಾರರನ್ನು ಹೆತ್ತಳು. ಆ ಮುನಿಯು ಆ ಮಗ ನನ್ನು ನೋಡಿ ಬಹಳವಾಗಿ ಸಂತೋಷಿಸಿ ಅವನಿಗೆ ವಿಭೀಷಣನೆಂದು ನಾಮವನ್ನಿ ಟೈನು, ಮತ್ತು ಕೆಲವು ದಿನಗಳು ಗತಿಸಿದಮೇಲೆ ಮೊರದೋಪಾದಿಯಲ್ಲಿ ಉಗುರುಗ ಳುಳ್ಳವಳೂ ವಿಕಾರವಾದ ಒಡಲುಳ್ಳವಳೂ ಆದ ಒಬ್ಬ ಮಗಳನ್ನು ಹೆತ್ತಳು. ಮುನಿಯು ಅವಳಿಗೆ ಶೂರ್ಪನಖಿ ಎಂದು ಹೆಸರಿಟ್ಟನು. ಈ ನಾಲ್ಕು ಮಂದಿಗಳಲ್ಲಿ ದಶಮುಖಕುಂಭಕರ್ಣರೆಂಬವರೇ ಮೊದಲು ವೈಕುಂಠದ್ವಾರಪಾಲಕರಾಗಿದ್ದು ಮುನಿ ಶಾಪದಿಂದ ಎರಡನೆಯ ಜನ್ಮದಲ್ಲಿರುವ ಜಯವಿಜಯರು. ಅನಂತರದಲ್ಲಿ ಆ ಮುನಿಯು ಮರುಮಂದಿ ಮಕ್ಕಳಿಗೂ ಚೌಲೋಪನಯ ನಾದಿ ಕರ್ಮಗಳನ್ನು ವಿಧ್ಯನುಸಾರವಾಗಿ ಮಾಡಿಸಿದನು. ಹಿರಿಯ ಮಗನಾದ ದಶಾನ ನನಿಗೆ ಲೋಕದ ಜನರಿಗೆ ತೊಂದರೆಯನ್ನೂ ಸಂಕಟವನ್ನೂ ಕೊಡುವುದೇ ಬಲುಗೆಲಸ ವಾಗಿದ್ದಿತ್ತು. ಎರಡನೆಯವನಾದ ಕುಂಭಕರ್ಣನಿಗೆ ಸಿಕ್ಕಿದ ಜನರನ್ನು ಹಿಡಿದು ಭಕ್ತಿ ಸುವುದೇ ಮಜ್ಯೋದ್ಯೋಗವಾಗಿದ್ದಿತು. ವೇದಶಾಸ್ತ್ರಾಗಮಾದಿಗಳ ವಿನೋದವು ವಿಭೀಷಣನ ಕೃತ್ಯವಾಯಿತು. ಹೀಗಿರಲು ಮತ್ತೊಂದು ದಿವಸ ಪಿತೃ ದರ್ಶನಾರ್ಥ ವಾಗಿ ಲಂಕಾನಗರದಿಂದ ಬಂದು ಹೋಗುತ್ತಿದ್ದ ವೈಶ್ರವಣನನ್ನು ನೋಡಿದ ಕೈಕ ಸೆಯು ತನ್ನ ಹಿರಿಯ ಮಗನನ್ನು ಕರೆದು ಎಲೈ ದಶವದನನೇ ! ಬ್ರಹ್ಮ ಕುಲಸಂಜಾ ತನಾದುದಕ್ಕೆ ಈ ಕುಬೇರನಂತೆ ಪೂರ್ಣೈಶ್ವರ್ಯಸಂಪನ್ನನಾದರೆ ಸಾಫಲ್ಯವು. ಹಾಗಾ ಗದಿದ್ದರೆ ಯಲಹದ ಮರವು ಕಾಯಿಬಿಟ್ಟಂತಾಗುವುದು ಎನಲು ಆಗ ದಶಮು ಖನು ಎಲೈ ತಾಯಿಯೇ ! ನಾನು ಹೆಚ್ಚಾಗಿ ಮಾತಾಡಿದರೆ ನನ್ನನ್ನು ಗಳಹುವವ ನೆನ್ನು ವಿರಿ, ನಾನು ನಿಮ್ಮ ದಯೆಯಿಂದ ಇನ್ನು ಮೇಲೆ ತಪಸ್ಸನ್ನು ಮಾಡುವುದಕ್ಕೆ ಆರಂಭಿಸುವೆನು. ಅದರಿಂದ ನಮ್ಮ ಮುತ್ತಜ್ಞನಾದ ಬ್ರಹ್ಮದೇವರನ್ನು ಮೆಚ್ಚಿಸಿ ಬಹು ವಿಧವಾದ ವರಗಳನ್ನು ಪಡೆದು ನಮ್ಮಣ್ಣನಾದ ಈ ಕುಬೇರನ ಭಾಗ್ಯಕ್ಕಿಂತಲೂ