ಪುಟ:ಕಥಾಸಂಗ್ರಹ ಸಂಪುಟ ೨.djvu/೧೫೨

ವಿಕಿಸೋರ್ಸ್ ಇಂದ
Jump to navigation Jump to search
ಈ ಪುಟವನ್ನು ಪರಿಶೀಲಿಸಲಾಗಿಲ್ಲ.


ಕುಂಭಕರ್ಣಸಂಹಾರ 141 ಲೋಶಿಯದಲ್ಲೂ ಇಲ್ಲ. ನೀನು ನಮ್ಮಲ್ಲಿ ಹಗೆತನವನ್ನು ಮಾಡಿದವನಲ್ಲ. ಆದುದ ರಿಂದ ನಾನು ನಿನ್ನನ್ನು ಕೊಲ್ಲುವುದಕ್ಕೆ ಕಾರಣವಿಲ್ಲ. ನಮ್ಮ ಈ ಅಮೋಘವಾದ ಮಹಾಸ್ಯಕ್ಕೆ ಗುರಿಯಾಗತಕ್ಕವನು ಅಪರಾಧಿಯಾದ ನಿನ್ನಣ್ಣನು. ಅವನನ್ನು ಕಳು ಹಿಸು, ಹೋಗು, ನೀನು ನಮ್ಮೊಡನೆ ಬಳಲಿ ವ್ಯರ್ಥವಾಗಿ ನಾಶವನ್ನು ಹೊಂದಬೇಡ. ನಮ್ಮ ಆಹವದಲ್ಲಿ ನಿನ್ನಣ್ಣನು ಅಳಿದುಹೋದ ಮೇಲೆ ನಿನ್ನ ತಮ್ಮ ನಾದ ವಿಭೀಷಣನಂತೆ ನೀನೂ ಸುಖದಿಂದ ಬದುಕುವುದು ಲೇಸು. ಸತ್ತು ಸೇರುವ ಸ್ವರ್ಗಕ್ಕಿಂತಲೂ ಬದುಕಿ ಹೊಂದಿರುವ ನರಕವು ಲೇಸೆಂಬ ಲೋಗರ ಮಾತನ್ನು ಕೇಳರಿಯೆಯಾ ? ಈ ಸಂಗತಿ ಯನ್ನು ನಿನ್ನ ಮನಸ್ಸಿನಲ್ಲಿ ಚೆನ್ನಾಗಿ ಯೋಚಿಸಿ ತಿಳಿದು ನೋಡು, ಮೂರ್ಖತನದಿಂದ ಕೆಟ್ಟು ಹೋಗಬೇಡ ಎಂದು ಹೇಳಿದನು. ಆ ಮಾತುಗಳನ್ನು ಕೇಳಿ ಕುಂಭಕರ್ಣನುಎಲೈ ರಾಮನೇ ! ನೀನು ಹೀಗೆ ಹೇಳಬಹುದೇ ? ನಾವು ತಾಮಸರು. ಅದರ ಮೇಲೆ ನಮಗೆ ಆಸುರಕರ್ಮದ ಬಳಕೆಯು, ಪರಹಿಂಸೆಯೇ ನಮ್ಮ ದೃಢವ್ರತವು. ನಾವು ಇಳೆಯ ಮರ್ಖರಿಗೆಲ್ಲಾ ಗುರುಗಳು. ತಲೆಹೊದರೂ ಅಟ್ಟೆಯಿಂದ ಕಾದುವರೆಂಬು ದನ್ನು ನೀನು ತಿಳಿದಿಲ್ಲವೇ ? ನೀವು ಸಾತ್ವಿಕರು. ಕರುಣಾಶಾಲಿಗಳು. ಇದು ವಿಶ್ವ ಯವು. ನಿನ್ನ ಕೋಮಲಹೃದಯವನ್ನು ನನ್ನ ತಮ್ಮನಾದ ವಿಭೀಷಣನೊಬ್ಬನಲ್ಲಿಟ್ಟಿರು ವುದೇ ಸಾಕು. ನನ್ನಲ್ಲಿ ಕಠಿಣಹೃದಯವೇ ಇರಲಿ, ಯುದ್ದ ರಂಗದಲ್ಲಿ ಕರುಣದ ಮಾತೇಕೆ ? ನಮ್ಮ ಸರಳಿನ ಸಾರವನ್ನು ನೋಡೆಂದು ಹೇಳಿ ತಿರುವಿನಲ್ಲಿ ಬಾಣವನ್ನು ಹೂಡಿ ರಾಮನನ್ನು ಹೊಡೆದು ಬೊಬ್ಬಿರಿದನು. ರಾಮನು ಮೊದಲು ವಿಶ್ವಾಮಿತ್ರ ಮಹರ್ಷಿಯು ತನಗೆ ಕೊಟ್ಟಿದ್ದ ಮಂತ್ರ ಕವಚದ ಬಲದಿಂದ ತಾನು ಅಕಿಪತಿಯಾದುದರಿಂದಲೂ ಆ ಬಾಣದ ಮಹಾ ಘಾತವನ್ನು ತಾಳಿ ಬದುಕಿದನಲ್ಲದೆ ತ್ರಿಲೋಕಗಳಲ್ಲಿರುವ ಸುರನರೋರಗ ಮಹಾ ವೀರಾಗ್ರೇಸರರಲ್ಲಿ ಯಾರಾದರೂ ಎದುರಾಗಿ ನಿಂತು ಬದುಕಬಲ್ಲ ವರುಂಟೇ ಎಂದು ಗಗನಮಾರ್ಗದಲ್ಲಿದ್ದುಕೊಂಡು ದೇವತೆಗಳು ಹೇಳುತ್ತಿರಲು ಆ ಮೇಲೆ ಶ್ರೀರಾಮನು ಅನೇಕ ಬಾಣಗಳನ್ನು ಪ್ರಯೋಗಿಸಿ ಅವನ ಸರಳುಗಳನ್ನೆಲ್ಲಾ ತರಿದೊಟ್ಟಿ ಒಂದು ಮಹಾಸ್ತ್ರವನ್ನು ತಿರುವಿನಲ್ಲಿ ಹೂಡಿ ಸಿಂಹನಾದವನ್ನು ಮಾಡಿ ಆಕರ್ಣಾಂತವಾಗಿ ಸೆಳೆದು ಪ್ರಯೋಗಿಸಿ ಆ ಖಳನ ಧನುಸ್ಸನ್ನು ಎರಡು ತುಂಡಾಗುವಂತೆ ಕತ್ತರಿಸಿದನು, ಆಗ ಮಹಾ ಕೋಪತಾಮಾಕ ನಾದ ಕುಂಭಕರ್ಣಾಸುರನು ಮೊದಲು ಸರೋಜ ಸಂಭವನು ತನಗೆ ಕೊಟ್ಟಿದ್ದ ಶಕ್ತಿಯನ್ನು ಮೂಡಿಗೆಯಿಂದ ತೆಗೆಯಲು ಯುದ್ಧವನ್ನು ನೋಡುವುದಕ್ಕೆ ಬಂದು ಗಗನಾಂತರಾಳದಲ್ಲಿ ನೆರೆದಿದ್ದ ದೇವತೆಗಳ ನೆರವಿಯೆಲ್ಲಾ ಭಯಭಾ೦ತವಾಗಿ ತೋರಿದ ಕಡೆಗೆ ಓಡಿಹೋಯಿತು. "ಕೇಸುರಿಯು ಗಗನಮಂಡಲ ವನ್ನೂ ಸರ್ವ ದಿಕ್ಕುಗಳನ್ನೂ ವ್ಯಾಪಿಸಿತು. ಕುಂಭಕರ್ಣನು ಅಂಥ ಅದ್ಭುತಶಕ್ಕಾ ಯುಧವನ್ನು ಕೈಯಲ್ಲಿ ಹಿಡಿದುಕೊಂಡು ರಾಮನನ್ನು ನೋಡಿ-ಎಲೈ ರಾಮನೇ ! ಈ ಮಹಾ ಶಕ್ತಿಯು ಹರಿಹರ ಬ್ರಹ್ಮಾದಿ ಪ್ರಚಂಡವೀರರ ಎದೆಗಳನ್ನು ಗಡಗಡನೆ ನಡುಗಿಸುವಂಥದು. ಇದರ ಮಹಾ ಘಾತದಲ್ಲಿ ನೀನು ಸಾಯದೆ ಉಳಿಯುವಿಯಾ