ಪುಟ:ಕಥಾಸಂಗ್ರಹ ಸಂಪುಟ ೨.djvu/೧೬೧

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

W 150 ಕಥಾಸಂಗ್ರಹ-೪ ನೆಯ ಭಾಗ ಗಳನ್ನು ನೋಡಿದನು. ಅವುಗಳಲ್ಲಿ ಕೆಲವು ಪಿಶಾಚಗಳು ಆನೆಯ ಕುಂಭಸ್ಥಳಗಳೆಂಬ ಮದ್ದಲೆಗಳನ್ನು ಬಾರಿಸಿಕೊಂಡು ಹಾಡುತ್ತಿದ್ದುವು. ಇನ್ನು ಕೆಲವು ಆನೆಗಳ ಸೊಂಡಿ ಲುಗಳನ್ನು ತೆಗೆದು ಕೊಂದಿಕೊಂಡು ಮೆರೆಯುತ್ತಿದ್ದುವು. ಮತ್ತು ಕೆಲವು ಕುದುರೆ ಗಳ ಕಾಲ್ಗೊರಸುಗಳನ್ನು ತೆಗೆದು ಕೊಂಡು ತಾಳವನ್ನು ಹೊಡೆಯುತ್ತಿದ್ದುವು. ಕೆಲವು ಹಾಡುಗಳನ್ನು ಹಾಡಿ ನಲಿಯುತ್ತಿದ್ದುವು. ಮತ್ತೆ ಕೆಲವು ಕುಣಿದು ಕುಪ್ಪಳಿಸುತ್ತಾ ರಾವಣಿಯನ್ನು ಹರಸುತ್ತಿದ್ದುವು. ಬ್ರಹ್ಮರಕ್ಷುಗಳು ಕಪಿಬಾಲಗಳನ್ನು ತೆಗೆದು ಕೊಂ ಡು ಉಡಿದಾರಗಳನ್ನು ಕಟ್ಟಿ ಕೊಂಡು ನಿಡು ಗರುಳ್ಳ ಯಜ್ಞ ಸೂತ್ರಗಳನ್ನು ಧರಿಸಿ ತಲೆ ಬುರಡೆಗಳ ಮಾಲೆಗಳನ್ನು ಕತ್ತುಗಳಿಗೆ ಹಾಕಿಕೊಂಡು ಕೈಗಳಲ್ಲಿ ತಲೆಯೋಡುಗಳನ್ನು ಹಿಡಿದು ರಣಾಂಗಣದಲ್ಲೆಲ್ಲಾ ತಿರಗುತ್ತಲೋಕದಲ್ಲಿ ವೈರವು ಪ್ರಬಲಿಸಲಿ. ಯುದ್ದವು ಹೆಚ್ಚಲಿ. ಪ್ರಾಣಜಾಲವು ಮಡಿಯಲಿ ಎಂದು ಹರಸುತ್ತ ಬರುತ್ತಿದ್ದುವು. ವಿಭೀಷಣನು ಅದನ್ನೆಲ್ಲಾ ನೋಡುತ್ತಾ ಎಲ್ಲಿ ನೋಡಿದರೂ ಮಜ ಮಾಂಸ ನೆಣ ನರ ಎಲುವು ಕೊಬ್ಬು ರಕ್ಕೆ ಇವುಗಳಿಂದ ಕೆಸರಾಗಿದ್ದುದರಿಂದ ಭೂಮಿಯಲ್ಲಿ ಕಾಲಿಕ್ಕಿದ ಕೂಡಲೇ ಸೊಂಟದ ವರೆಗೂ ಹೂತುಹೋಯಿತು. ಗದೆಯನ್ನೂರಿಕೊಂಡು ಮೆಲ್ಲನೆ ಮೇಲೆದ್ದು ಎಚ್ಚರಿಕೆಯಿಂದಲೂ ಪ್ರಯಾಸದಿಂದಲೂ ಹೆಜ್ಜೆಯಿಡುತ್ತ ಬಂದು ರಾಮ ಲಕ್ಷಣರ 'ಇರುವಿಕೆಯನ್ನು ನೋಡಿ ಅಗಾಧವಾದ ಶೋಕಾಂಬುಧಿಯಲ್ಲಿ ಒಡಲ ಡಾಡಿ ವನಜನಾಭನೇ ! ಮುಕುಂದನೇ ! ಅಪಾರ ಮಹಿಮಾರಾಜಿತನೇ ! ನೃತ್ಯ ನಾದ ನನಗೆ ತಿಳಿಸದೆ ಈ ವಿಧವಾದ ದುರವಸ್ಥೆಗೊಳಗಾಗಬಹುದೇ ? ಯಾವಾಗಲೂ ಮಾಯೆಯು ನಿನ್ನ ಧೀನವಲ್ಲವೇ ? ಇಂಥ ಮರವೆಯು ನಿನಗೆ ಹೇಗೆ ಬಂದಿತು ? ನಿಜ ದಾಸನಾದ ನನಗೆ ಕೊಟ್ಟ ಭಾಷೆಯನ್ನು ಮರೆತು ಅನಾಥನಾದ ನನ್ನನ್ನು ಬಿಟ್ಟು ವೈಕು೦ಠಲೋಕಕ್ಕೆ ತೆರಳಬಹುದೇ ? ನೀನು ಈ ವಿಧವಾಗಿ ನರನಾಟಕವನ್ನು ನಟಿಸಿ ಪವ್ರಣಗಳನ್ನು ಬಿಟ್ಟರೆ ಇನ್ನು ದೀನನಾದ ನಾನು ಯಾರನ್ನು ಮರೆಹೋಗಬಲ್ಲೆನು ? ಒಡೆಯನಾದ ನೀನಿಂತಾದುದರಿಂದ ನಾನು ನಡುಗಾಡಿನಲ್ಲಿ ಕಣ್ಣು ಕಟ್ಟಿ ಬಿಡಲ್ಪಟ್ಟವ ನಂತೆ ನಿರಾಶ್ರಯನಾಗಿ ಹೋದೆನಲ್ಲಾ ! ನಾನು ಬದುಕುವ ಬಟ್ಟೆ ಯಾವುದು ? ಹೇಳ್ಳೆ, ಕರುಣಾರಸತರಂಗಿತ ಕಟಾಕ ನೇ ! ಶರಣಾಗತರಕ್ಷ ಕನೆಂಬ ಅಸಾಧಾರಣವಾದ ಬಿರುದು ನಿನಗಿರುವುದಷ್ಟೆ, ನೀನು ಬಿಚಯಮಾಡುವ ಸಮಯದಲ್ಲಿ ನನ್ನನ್ನು ಎಚ್ಚರಿ ಸದೆ ಇರಬಹುದೇ ? ಇನ್ನು ಮೇಲೆ ನಾನು ಕೃಷಣನಾಗಿ ಈ ಪ್ರಾಣಗಳನ್ನು ಹಿಡಿದಿರು ವುದರಿಂದ ಪ್ರಯೋಜನವೇನು ಎಂದು ಬಹು ವಿಧವಾಗಿ ಹಂಬಲಿಸಿ ಎದೆಯು ಬಾಯ್ಕಡಿದು ಅತ್ತು ಮೂರ್ಛಿತನಾಗಿ ಸ್ವಲ್ಪ ಕಾಲದಲ್ಲಿ ಚೇತರಿಸಿಕೊಂಡದ್ದು ವಿಚಾರದಿಂದ ಧೈರ್ಯವನ್ನು ತಂದುಕೊಂಡು- ಆಗಲಿ, ಮುಂದೆ ಹನುಮಂತನ ಆಗು ಹೋಗುಗಳು ಏನಾಗಿರುವುವೋ ನೋಡಬೇಕು. ಆತನು ಬ್ರಹ್ಮಾಸ್ತ್ರಕ್ಕೆ ಒಳಗಾಗತಕ್ಕ ವನಲ್ಲ. ಅತಿಬಲಿಷ್ಟನು. ವಜ್ರದೇಹಿಯು ಮತ್ತು ಹರಿಭ್ರತ್ಯನು ಎಂದು ಅರಸುತ್ತ ಬರುತ್ತಿರುವಾಗ್ಗೆ ಮಿಡುಕಾಡುತ್ತಿರುವ ಜೀವವುಳ್ಳ ಜಾಂಬವಂತನನ್ನು ಕಂಡು ನಮಸ್ಕ ರಿಸಲು ಆ ಜಾಂಬವಂತನು ಮೆಲ್ಲನೆ ಎಲೈ ವಿಭೀಷಣನೇ ! ಹತ್ತಿರಕ್ಕೆ ಬಾ ಎಂದು ಬ