ಪುಟ:ಕಥಾಸಂಗ್ರಹ ಸಂಪುಟ ೨.djvu/೧೬೨

ವಿಕಿಸೋರ್ಸ್ ಇಂದ
Jump to navigation Jump to search
ಈ ಪುಟವನ್ನು ಪರಿಶೀಲಿಸಲಾಗಿಲ್ಲ.


151 ಇಂದ್ರಜಿತ್ಸಂಹಾರ ಕರೆದು ಕುಳ್ಳಿರಿಸಿಕೊಂಡು ರಣದಲ್ಲಿ ಯಾರು ಯಾರು ಮೃತರಾದರು ? ಯಾರು ಯಾರು ಉಳಿದಿದ್ದಾರೆ ? ಯಾರ ಯಾರ ಸ್ಥಿತಿಯು ಎಂತೆಂತಿರುವುದು ಎಂದು ಬೆಸ ಗೊಳ್ಳಲು ಆಗ ವಿಭೀಷಣನು-ರಾಮಲಕ್ಷ್ಮಣರು ಮೊದಲಾಗಿ ಸಮಸ್ತ ಕಪಿಸೇನೆ ಗಳೂ ಸತ್ತಿವೆ. ಹನುಮಂತನು ಮಾತ್ರ ಏನಾಗಿರುವನೋ ? ತಿಳಿಯದು. ಇನ್ನೂ ನೋಡಲಿಲ್ಲ ಎಂದು ಹೇಳಿದನು. ಅಷ್ಟರಲ್ಲಿಯೇ ಆಂಜನೇಯನು ಬಂದು ಅತ್ಯಂತ ವ್ಯಸನಾಕಾಂತನಾಗಿ ಜಾಂಬ ವದ್ವಿಭೀಷಣರನ್ನು ಕಾಣಿಸಿಕೊಳ್ಳಲು ಜಾಂಬವಂತನು ಅವನನ್ನು ನೋಡಿ ವಿಭೀ ಷಣನನ್ನು ಕುರಿತು-ಎಲೈ ರಾಕ್ಷಸರಾಜನೇ ! ಅಸಹಾಯ ಶೂರನಾದ ಈ ಹನು ಮಂತನೊಬ್ಬನು ಉಳಿದಿರುವುದರಿಂದ ರಾಮಲಕ್ಷಣ ಸುಗ್ರೀವಾ೦ಗದಾದಿ ಸಮ ಸ್ವರೂ ಬದುಕಿದರೆಂದು ಚೆನ್ನಾಗಿ ತಿಳಿದು ಕೊ, ನೀನು ಇನ್ನು ಮೇಲೆ ಸ್ವಲ್ಪವಾ ದರೂ ದುಃಖಿಸಬೇಡ, ವ್ಯಸನವನ್ನು ಬಿಡು ಎಂದನು. ಆ ಮಾತುಗಳನ್ನು ಕೇಳಿ ಆಂಜ ನೇಯನು-ಮೃತರಾಗಿರುವ ಸರ್ವರೂ ಈ ಮಹಾತ್ಮರಾದ ಜಾಂಬವಂತರಿಂದಲೇ ಬದುಕಬೇಕಲ್ಲದೆ ಸಾಮಾನ್ಯನಾದ ನನ್ನಿಂದಾಗುವ ಪ್ರಯೋಜನವಾವುದು ? ಈ ಸಮ ಸರೂ ಬದುಕುವಂತೆ ಈ ಮಹನೀಯರು ಕಾಲಿನಿಂದ ತೋರಿಸಿದ ಕಾರ್ಯವನ್ನು ಶಿರ ಸ್ಸಿನಿಂದ ಮಾಡುವೆನು. ಈ ಮಹಾವಿಪ ವಾರಣೆಗಾಗಿ ಯಾವ ಯುಕ್ತಿಯನ್ನು ನೆನೆದು ನನಗೆ ನೇಮಿಸುವರೋ ಅದು ಎಂಥ ಅಸಾಧ್ಯವಾದುದಾದಾಗ ಮಾಡಿ ನಿರ್ವಹಿಸುವೆನು ಎಂದು ಹೇಳಲು ಆಗ ಜಾಂಬವಂತನು ಕೇಳ್ಯ, ಅಪ್ರತಿಮವೀರ ನಾದ ಆಂಜನೇಯನೇ ! ಸೂರ್ಯೋದಯವಾದ ಮೇಲೆ ಇವರೊಬ್ಬರೂ ಬದುಕುವು ದಿಲ್ಲ. ಬೆಳಗಾಗುವುದಕ್ಕೆ ಇನ್ನೂ ಏಳುಗಳಿಗೆಗಳು ಕಳೆಯಬೇಕಾಗಿದೆ. ಅಷ್ಟರೊಳಗೆ ನೀನು ಸಾಹಸಮಾಡಿದರೆ ನೀನೇ ರಾವಣನನ್ನು ಕೊಂದವನು. ಸೀತೆಯನ್ನು ತಂದವನು. ಸರ್ವಕಪಿವಾಹಿನೀ ಸಹಿತವಾಗಿ ಶ್ರೀರಾಮಲಕ್ಷ್ಮಣರನ್ನು ಬದುಕಿಸಿದವನು ಅಂದನು. ಆ ಮಾತುಗಳನ್ನು ಕೇಳಿ ಆಂಜನೇಯನು ಪ್ರಯಾಣೋನ್ಮುಖನಾಗಿ-ಅದೇನು ಸ್ವಾಮಿಾ ! ಶೀಘ್ರವಾಗಿ ಹೇಳಿರಿ ಎನ್ನಲು ಆಗ ಜಾಂಬವಂತನುಚಂದ್ರದ್ರೋಣ ಪರ್ವತದಲ್ಲಿ ಸಂಧಾನಕರಣಿ ವಿಶಲ್ಯ ಕರಣಿ ಸೌವರ್ಣಕರಣಿ ಮೃತಸಂಜೀವಿನಿ ಎಂಬ ನಾಲ್ಕು ವಿಧವಾದ ಸಿದ್ ಷಧಿಗಳಿರುವುವು. ನೀನು ಹೋಗಿ ಬೆಳಗಾಗುವಷ್ಟರಲ್ಲಿಯೇ ಅವುಗಳನ್ನು ತೆಗೆದುಕೊಂಡು ಇಲ್ಲಿಗೆ ಬರುವವನಾಗು ಎಂದು ಹೇಳಲು ಅವನು ಅಗತ್ಯವಾಗಿ ತಮ್ಮಿಂದ ನಿಷ್ಕರ್ಷಿತವಾದ ಕಾಲಕ್ಕೆ ಮೊದಲೇ ತೆಗೆದುಕೊಂಡು ಬರು ವೆನು. ಆದರೆ ಆ ಚಂದ್ರದ್ರೋಣಪರ್ವತವೆಲ್ಲಿರುವುದು ? ಆ ದಿಕ್ಕನ್ನು ಮಾತ್ರ ತಿಳಿಸು ವವರಾಗಿರಿ ಎಂದು ಕೇಳಲು ಇಲ್ಲಿಂದ ನೆಟ್ಟಗೆ ಹಿಮಾಚಲಕ್ಕೆ ಹೋಗಿ ಅದನ್ನು ದಾಟಿ ಮುಂದೆ ಹೋದರೆ ಅಲ್ಲಿ ಋಷಭವೆಂಬ ಪರ್ವತವಿರುವುದು. ಅದರ ಆಚೆಗೆ ಕೈಲಾಸ ನಗವಿರುವುದು. ಆ ಎರಡು ಪರ್ವತಗಳ ಮಧ್ಯದಲ್ಲಿ ಚಂದ್ರದ್ರೋಣವೆಂಬ ಓಷಧಿ ಭೂಧರವಿರುವುದು. ಅದರ ಶಿಖರದಲ್ಲಿ ನಾನು ಹೇಳಿದ ಔಷಧಿಗಳಿರುವುವು ಎಂದು ಹೇಳಿದನು. M