ಪುಟ:ಕಥಾಸಂಗ್ರಹ ಸಂಪುಟ ೨.djvu/೧೭೧

ವಿಕಿಸೋರ್ಸ್ ಇಂದ
Jump to navigation Jump to search
ಈ ಪುಟವನ್ನು ಪರಿಶೀಲಿಸಲಾಗಿಲ್ಲ.


160 ಕಥಾಸಂಗ್ರಹ-೪ ನೆಯ ಭಾಗ ಕೊಂಡು ಬಂದನೇ ? ಇವನನ್ನು ರಕ್ತ ಬೀಳುವಂತೆ ಹಿಂಡಿ ನಿಸ್ಸಾರಮಾಡಿ ನಿನ್ನ ಶೌರ್ಯ ವೆಂಬ ಬೆಂಕಿಯನ್ನು ಆರಿಸಿ ನಿಶ್ಲೇಷಮಾಡಿ ಕಪಿಬಲದ ಕರುಳುಗಳನ್ನು ಕಿತ್ತು ತಿನ್ನು ವೆನು. ಪರೀಕ್ಷಿಸಿ ನೋಡು. ತಡವೇಕೆ ? ಕೋದಂಡವನ್ನು ಹಿಡಿ. ಬಾಣಗಳನ್ನು ತೊಡು, ಪ್ರಯೋಗಿಸು. ನಾನು ಯುದ್ಧ ಮುಖದಲ್ಲಿ ಹೆದರಿ ಹಿಂದೆಗೆಯುವ ವೀರನೇ ಎನ್ನುತ್ತ ಗುರಿಗಟ್ಟಿ ಬಾಣಗಳಿಂದ ಲಕ್ಷ್ಮಣನನ್ನು ಹೊಡೆದನು. ಆಗ ಧನುರ್ವಿದ್ಯಾ ನಿಪುಣನಾದ ಸುಮಿತ್ರಾ ತನುಜನು ಅಸಂಖ್ಯಾತಬಾಣಗಳನ್ನು ಪ್ರಯೋಗಿಸಿ ಮಹಾ ವೇಗದಿಂದ ಬರುತ್ತಿರುವ ಅರಿಶರ ಪರಂಪರೆಯನ್ನು ನಡುದಾರಿಯಲ್ಲೇ ಕೊಚ್ಚಿ ಕೆಡಹಿ ಪುನಃಪುನಃ ದಿವ್ಯಮಾರ್ಗಣಗಳನ್ನು ಪ್ರಯೋಗಿಸಿ ಇಂದ್ರಜಿತ್ತನ್ನು ಕವಿಸಿದನು. ಆಗ ಅಕ್ಷಣನು ಎಸೆದ ಬಾಣಗಳು ಆಕಾಶಾಂತರಾಳದಲ್ಲೆಲ್ಲಾ ತುಂಬಿಕೊಂಡು ಮತ್ತಷ್ಟು ಕತ್ತಲೆಯಾಗಿ ಈ ರಾತ್ರಿಯು ಇಂದ್ರಜಿತ್ತಿನ ಕಾಳರಾತ್ರಿಯೆಂಬಂತೆ ಮಹಾ ವೀರರ-ಹೃದಯದಲ್ಲೂ ಭಯದ ಬೀಜವನ್ನು ಬಿತ್ತುತ್ತಿದ್ದಿತು. ಆಗ ಮತ್ತೊಂದು ಕಡೆಯಲ್ಲಿ ಕಪಿಬಲಕ್ಕೂ ರಾಕ್ಷ ಸಬಲ ಘೋರ ಯುದ್ಧ ವು ಸಂಪ್ರಾಪ್ತವಾಗಿ ನಡೆಯುತ್ತಿದ್ದಿತು. ಅನಂತರದಲ್ಲಿ ಬಿಲ್ಲಾಳುಗಳಲ್ಲಿ ಬಲ್ಲಿದ ನಾದ ಸುಮಿತಾನಂದನನು ಒಂದೇ ಬಾಣದ ಎಸುಗೆಯಿಂದ ಹಗೆಯ ರಥದ ನಾಲ್ಕು ಕುದುರೆಗಳನ್ನೂ ರಥವನ್ನೂ ಸಾರಥಿಯನ್ನೂ ತರಿದು ನೆಲಕ್ಕುರುಳಿಸಿ---ಎಲೋ ನೀಚನಾದ ರಾವಣಿಯೇ ! ಕತ್ತಲೆಯಲ್ಲಿ ಕಾಪಟ್ಯವನ್ನು ಒಡ್ಡಿ ಹೆದರಿ ಗಗನಸ್ಥಳಕ್ಕೆ ಓಡಿಹೋಗಿ ಹೇಡಿಯಂತೆ ಮೈಮರಿಸಿಕೊಂಡು ಎಸೆಯುತ್ತಿದ್ದ ನಿನ್ನ ಉಬ್ಬಾಳುತನವು ಇಂದು ಮಾಯವಾದೀತೇ ? ಲೋಕದಲ್ಲಿ ಕಲಿಗಳಾದವರು ಎದುರಾಳಿನೆದುರಿಗೆ ನಿಂತು ತಮ್ಮ ಪರಾಕ್ರಮವನ್ನು ತೋರಿಸುವುದು ಸರ್ವಸಮ್ಮತವು. ದುರ್ಬಲರಾದ ಮೈಗಳ ರಿಗೆ ಮರೆಯಲ್ಲಿದ್ದುಕೊಂಡು ಮೋಸದಿಂದ ಜಗಳವಾಡುವುದು ಸ್ವಭಾವವು, ಕಪಟಿ ಯಾದ ನೀನು ಇನ್ನು ಮೇಲೆ ಒಡಲನ್ನು ಬಚ್ಚಿಡುವ ಆಶೆಯನ್ನು ತೊರೆದು ನಿಂತು ಏಕಚಿತ್ತದಿಂದ ಯುದ್ದ ಮಾಡು. ಇದು ನಮ್ಮಿಬ್ಬರಿಗೂ ಸರಿಯಾದ ಕಲಹ ಸಮ ಯವು. ಇಂಥ ಸಂದರ್ಭದಲ್ಲಿ ನಿನ್ನಂಥ ವೀರನು ಮಾಯೆಯನ್ನು ಮರೆಹೊಗುವುದು ಅನುಚಿತವು. ಮತ್ತು ಅಪಹಾಸ್ಯಕರವು. ನಮ್ಮಿಬ್ಬರ ಕಲಿತನದ ನ್ಯೂನಾತಿರಿಕ್ತಗ ೪ನು ಕಪಿರಾಕ ಸೋಭಯ ಕಟಕದ ಸುಭಟರು ನೋಡುತ್ತಿರಲಿ. ಮೇಲೆ ಅಮರರು ನೋಡಿ ಸಂತೋಷಿಸಲಿ ಎಂದು ಹೀಯಾಳಿಸಿ ನುಡಿದು ಅಮೋಘ ಬಾಣಪ್ರಯೋಗ ವನ್ನು ಮಾಡಿ ಇಂದ್ರಾಯು ಹಿಡಿದಿದ್ದ ಬಿಲ್ಲನ್ನು ಇಕ್ಕಡಿಗೆಯು ಬೊಬ್ಬಿರಿದನು. ಆಗ ಪರಮಸಂತೋಷಯುಕ್ತನಾದ ವಿಭೀಷಣನು ವೂತುರೇ ! ಲಕ್ಷ್ಮಣಾ! ಈ ನಿನ್ನ ಬಿಲ್ಲಾಳುತನವೂ ಧನುರ್ವಿದ್ಯಾ ಕೌಶಲ್ಯವೂ ಭೂತನಾಥನಿಗೂ ಇಲ್ಲ. ಮಜಭಾಪು ! ರಾಮನಿಗೆ ಸರಿಯಾದ ತಮ್ಮನು ಎಂದು ಹೊಗಳಿದನು. ಬಳಿಕ ಲಕ ಣನು ಇಂದ್ರಜಿತ್ತನ್ನು ನೋಡಿ.ಎಲೈ ಕಪಟವೀರನೆ ! ಈಗ ನಾನು ನಿನ್ನ ಮೇಲೆ ಬಾಣಪ್ರಯೋಗವನ್ನು ಮಾಡುವುದಕ್ಕೆ ನಿನ್ನ ಕೈಯಲ್ಲಿ ಬಿಲ್ಲಿಲ್ಲ. ಹತ್ತುವುದಕ್ಕೆ ತೇರಿಲ್ಲ. ರಥಾಶ್ವ ಸಾರಥಿಗಳಿಲ್ಲ. ಹೀಗೆ ಸಹಾಯಹೀನನಾಗಿರುವ ನಿನ್ನನ್ನು ನಾನು